ನವದೆಹಲಿ, ಫೆ.24- ಶಸ್ತ್ರಾಸ್ತ್ರ ಕೆಳಗಿಟ್ಟು ಮನೆಗೆ ಹೋಗಿ ಎಂದು ಉಕ್ರೇನ್ ಸೈನಿಕರಿಗೆ ರಷ್ಯಾದ ಅಧ್ಯಕ್ಷ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ. ಇಂದು ಬೆಳಗ್ಗೆ ಅನಿರೀಕ್ಷವಾಗಿ ಮಾಧ್ಯಮಗಳಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿರುವ ಅವರು, ಉಕ್ರೇನ್ ವಿರುದ್ಧ ಅಧಿಕೃತವಾಗಿ ಮಿಲಿಟರಿ ಕಾರ್ಯಾಚರಣೆ ಅರ್ಥಾತ್ ಯುದ್ಧವನ್ನು ಘೋಷಣೆ ಮಾಡಿದ್ದಾರೆ. ರಷ್ಯಾ ಅಧ್ಯಕ್ಷರ ಘೋಷಣೆಯ ಬೆನ್ನಲ್ಲೆ ಉಕ್ರೇನ್ ನಲ್ಲಿ ಸರಣಿ ಸ್ಪೋಟಗಳ ಸದ್ದು ಕೇಳಿಸಿವೆ.
ರಷ್ಯಾ ಮತ್ತು ಉಕ್ರೇನ್ ಸೇನಾ ಸಂಘರ್ಷ ಅನಿವಾರ್ಯವಾಗಿತ್ತು. ಈಗಲಾದರೂ ಉಕ್ರೇನ್ ಯೋಧರು ಶಸ್ತ್ರಸ್ತ್ರಾಗಳನ್ನು ಕೆಳಗಿಟ್ಟು ಮನೆಗೆ ಹೋಗಿ. ವಿಶೇಷ ಮಿಲಿಟರಿ ಕಾರ್ಯಾಚರಣೆ ಸಶಸ್ತ್ರೀಕರಣ ಮತ್ತು ನಿರ್ನಾಮೀಕರಣದ ಉದ್ದೇಶ ಹೊಂದಿದೆ. ಉಕ್ರೇನ್ನ ಪೂರ್ವ ಭಾಗದಲ್ಲಿ ಸರ್ಕಾರಿ ಪ್ರಾಯೋಜಿತ ನರಮೇಧ ನಡೆಯುತ್ತಿದೆ. ಅದನ್ನು ತಡೆಯಲೇಬೇಕಿದೆ. ಹೀಗಾಗಿ ಕಾರ್ಯಾಚರಣೆ ನಡೆಸಲೇಬೇಕಿದೆ ಎಂದು ಹೇಳಿದ್ದಾರೆ.
ರಷ್ಯಾದ ರಕ್ಷಣಾ ಸಚಿವರು ಹೇಳಿಕೆ ನೀಡಿದ್ದು, ನಾವು ಉತ್ಕøಷ್ಠ ಆಯುಧಗಳನ್ನು ಬಳಕೆ ಮಾಡಿ ಸೇನೆಯನ್ನು ಮಾತ್ರ ಗುರಿಯಾಗಿಸಿ ದಾಳಿ ಮಾಡುತ್ತಿದ್ದೇವೆ, ನಾಗರಿಕರ ಮೇಲೆ ಆಕ್ರಮಣ ಮಾಡುವುದಿಲ್ಲ ಎಂದಿದ್ದಾರೆ.
