ಯುವ ದಸರಾಗೆ ಪಿ.ವಿ.ಸಿಂಧು ಚಾಲನೆ

Spread the love

ಮೈಸೂರು, ಅ.1- ದಸರಾ ಕಾರ್ಯಕ್ರಮಗಳಲ್ಲಿ ಹೆಚ್ಚು ಆಕರ್ಯಷಣೀಯವಾದ ಯುವ ದಸರಾಗೆ ಇಂದು ಚಾಲನೆ ದೊರೆಯಲಿದೆ. ಯುವ ಜನತೆ ಹುಚ್ಚೆದ್ದು ಕುಣಿಯುವ ಯುವ ದಸರಾವನ್ನು ಮಹಾರಾಜ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಇಂದಿನಿಂದ ಆರು ದಿನಗಳ ಕಾಲ ನಡೆಯುವ ಯುವ ದಸರಾಗೆ ನಾಡಿನ ಹೆಮ್ಮೆಯ ಬ್ಯಾಡ್‍ಮಿಂಟನ್ ತಾರೆ ಪಿ.ವಿ.ಸಿಂಧು ಅವರು ಸಂಜೆ 6.30ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಚಾಲನೆ ನೀಡುವರು.

ಉದ್ಘಾಟನೆ ನಂತರ ಹೆಸರಾಂತ ಗಾಯಕಿ ರಾಣುಮಂಡಲ್ ಅವರಿಂದ ಗೀತಗಾಯನ ನಡೆಯಲಿದೆ. ನಂತರ ಅವರನ್ನು ಸನ್ಮಾನಿಸಲಾಗುವುದು. ಇದಾದ ನಂತರ ಬಾಲಿವುಡ್ ಗಾಯಕ, ಗುರುರಾಂಧವ ಅವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ. 15 ಸಾವಿರ ಮಂದಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. 35 ಸಾವಿರ ಮಂದಿ ಮೈದಾನದ ಸುತ್ತ ನಿಂತು ಕಾರ್ಯಕ್ರಮ ವೀಕ್ಷಿಸಬಹುದಾಗಿದೆ.

Facebook Comments