ಕತಾರ್ ವಿಶ್ವಕಪ್‍ನಲ್ಲಿ ಅತಿ ಹೆಚ್ಚು ಗೋಲು, ಹೊಸ ದಾಖಲೆ

Social Share

ಲುಸೈಲ್ , ಡಿ. 19 – ಕತಾರ್‍ನಲ್ಲಿ ನಡೆದ ಫೀಫಾ ವಿಶ್ವಕಪ್‍ನಲ್ಲಿ ಅತಿ ಹೆಚ್ಚು ಗೋಲು ಬಂದಿರುವುದು ಹೊಸ ದಾಖಲೆಯಾಗಿದೆ. ಈ ವರ್ಷದ ವಿಶ್ವಕಪ್‍ನಲ್ಲಿ ಆಟಗಾರರು ಒಟ್ಟು 172 ಗೋಲು ಭಾರಿಸಿ ಹೊಸ ದಾಖಲೆಯನ್ನು ನಿರ್ಮಿಸಿತು ಎಂದು ಫೀಫಾ ಹೇಳಿದೆ.

ಕಳೆದ 1998 ಫ್ರಾನ್ಸ್‍ನಲ್ಲಿ ಮತ್ತು 2014 ರಲ್ಲಿ 171 ಗೋಲು ದಾಖಲೆಯನ್ನು ಸ್ಥಾಪಿಸಿತ್ತು. ಇನ್ನು ಮುಂದಿನ 2026 ರ ವಿಶ್ವಕಪ್‍ನಲ್ಲಿ ಹೊಸ ದಾಖಲೆಯನ್ನು ಸ್ಥಾಪಿಸುವ ಸಾಧ್ಯತೆಯಿದೆ, ಆಗ ಒಟ್ಟು 48 ತಂಡಗಳು 104 ಪಂದ್ಯಗಳನ್ನು ಆಡಲಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(19-12-2022)

ಕಳೆದ ರಾತ್ರಿ ಅರ್ಜೆಂಟೀನಾ ಮತ್ತು ಫ್ರಾನ್ಸ್ ಹೆಚ್ಚುವರಿ ಸಮಯದ ಮೂಲಕ 3-3 ಗೋಲು ಭಾರಿಸಿ ಡ್ರಾ ಸಾಸಿ ದಾಖಲೆ ನಿರ್ಮಿಸಿದವು. ಅರ್ಜೆಂಟೀನಾ ಪರ ಲಿಯೋನೆಲ್ ಮೆಸ್ಸಿ ಎರಡು ಗೋಲುಗಳನ್ನು ಗಳಿಸಿದರು ಮತ್ತು ಕೈಲಿಯನ್ ಎಂಬಪ್ಪೆ ಫ್ರಾನ್ಸ್ ಪರವಾಗಿ ಹ್ಯಾಟ್ರಿಕ್ ಪಡೆದರು.

ಇದೇ ರೀತಿ 1966 ರಿಂದ ವಿಶ್ವಕಪ್ ಫೈನಲ್‍ನಲ್ಲಿ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‍ನಲ್ಲಿ 4-2 ರಿಂದ ಮೇಲುಗೈ ಸಾಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿರುವುದು ಕೂಡ ಮೊದಲನೆಯದ್ದು.

#QatarWorldCup, #newrecord, #mostgoalsscored,

Articles You Might Like

Share This Article