“ನದಿ ಜೋಡಣೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾದರೆ ನಾವು ಒಪ್ಪಲ್ಲ”

Social Share

ಬೆಂಗಳೂರು, ಫೆ.2- ನದಿ ಜೋಡಣೆ ವಿಚಾರದಲ್ಲಿ ನಮಗೆ ಅನ್ಯಾಯ ಆದರೆ ನಾವು ಒಪ್ಪಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದ ನೀರಿಗೆ ತೊಂದರೆ ಆಗಬಾರದು. ನೀರು ಹಂಚಿಕೆಯಲ್ಲಿ ಸಮಸ್ಯೆಯಾದರೆ ನಾವು ಅನುಮತಿ ಕೊಡಲ್ಲ.
ರಾಜ್ಯ ಸರ್ಕಾರದ ಅನುಮತಿ ಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ನಮಗೆ ಅನ್ಯಾಯ ಆಗೋ ರೀತಿ ನಾವು ಒಪ್ಪಲ್ಲ ಎಂದರು
ಕೇಂದ್ರ ಸರ್ಕಾರದ ಬಜೆಟ್ ಪ್ರಗತಿಪರವಾಗಿದೆ.ಹಳ್ಳಿಗಳಲ್ಲಿ ಆಪ್ಟಿಕಲ್ ಫೈರ್ಬ ಹಾಕಲಾಗುತ್ತಿದೆ. ಡಿಜಿಟಲ್ ಮುಖಾಂತರ ಶಿಕ್ಷಣ ಕೊಡಲು ತೀರ್ಮಾನ ಮಾಡಿದ್ದಾರೆ.
ಎಸಿ ಎಸ್ಟಿ ರೈತರಿಗೆ ವಿಶೇಷ ಯೋಜನೆ ಘೋಷಣೆ ಮಾಡಿದ್ದಾರೆ. ದೂರದೃಷ್ಟಿಯಿಂದ ಯೋಜನೆ ಜಾರಿ ಮಾಡಲಾಗುತ್ತದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂ, ಬಜೆಟ್ ಮಂಡನೆ ಮುನ್ನವೇ ಇದೊಂದು ನಿರಾಶದಾಯಕ ಬಜೆಟ್ ಅಂತ ಹೇಳುತ್ತಿದ್ದರು. ಬಜೆಟ್ ಮಂಡನೆ ಮಾಡಿ ಅವರಿಗೆ ಅನುಭವ ಇಲ್ಲ.ಹೀಗಾಗಿ ಆ ರೀತಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

Articles You Might Like

Share This Article