ಕನ್ನಡಪರ ಹೋರಾಟಗಾರ ರಾ.ತಿಮ್ಮೇಗೌಡ ವಿಧಿವಶ

Social Share

ಬೆಂಗಳೂರು, ಸೆ.26- ಕನ್ನಡಪರ ಹೋರಾಟಗಾರ ಕೆಂಪೇಗೌಡ ಸ್ಮಾರಕ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ರಾ.ತಿಮ್ಮೇಗೌಡ (77) ಅವರು ಇಂದು ಮಧ್ಯಾಹ್ನ ಮೃತಪಟ್ಟಿದ್ದಾರೆ.

ಹಲವಾರು ಚಳವಳಿಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದ ಅವರು ಒಕ್ಕಲಿಗರ ಸಂಘಟನೆಯಲ್ಲಿ ತಮ್ಮದೇ ಆದ ಪಾತ್ರ ವಹಿಸಿದ್ದರು. ಕೆಂಪೇಗೌಡರ ಸ್ಮಾರಕ ನಿರ್ಮಾಣ ಸೇರಿದಂತೆ ಕೆಂಪೇಗೌಡರ ಹೆಸರನ್ನು ಚಿರಾಯುವಾಗಿರಿಸಲು ಹಲವಾರು ಹೋರಾಟಗಳಲ್ಲಿ ಅವರು ಪಾಲ್ಗೊಂಡಿದ್ದರು.

ಡಾ.ರಾಜ್‍ಕುಮಾರ್ ಅವರೊಂದಿಗೂ ಉತ್ತಮ ಒಡನಾಟ ಹೊಂದಿದ್ದ ಅವರು ಹಲವಾರು ಕನ್ನಡಪರ ಚಳವಳಿಗಳಲ್ಲೂ ಕೂಡ ಭಾಗವಹಿಸಿದ್ದರು.

Articles You Might Like

Share This Article