ಬೆಂಗಳೂರು,ಜ.2-ಬಡವರ ಪಾಲಿಗೆ ಅಮೃತವಾದ ರಾಧಕೃಷ್ಣ ಮೊಬೈಲ್ ಫುಡ್ ಕ್ಯಾಂಟೀನ್ ಇಂದಿನಿಂದ ಆರಂಭಗೊಂಡಿದೆ. ಬಸವನಗುಡಿ ಜನರ ಹಸಿವು ನೀಗಿಸುವ ಬಡವರ ಪಾಲಿನ ಅಮೃತ ವಾದ ರಾಧಕೃಷ್ಣ ಫುಡ್ನ ಮೂರು ಮೊಬೈಲ್ ಕ್ಯಾಂಟೀನ್ಗಳನ್ನು ಇಂದು ಲೋಕರ್ಪಣೆಗೊಳಿಸಲಾಯಿತು.
ಶಾಸಕ ರವಿಸುಬ್ರಮಣ್ಯ, ಮಾಜಿ ಉಪ ಮಹಾಪೌರ ಲಕ್ಷ್ಮೀನಾರಾಯಣ್ ಮತ್ತು ರಾಧಾಕೃಷ್ಣ ಫುಡ್ ಕ್ಯಾಂಟೀನ್ ಮಾಲೀಕರಾದ ಗಿರೀಶ್, ಲೋಕೇಶ್ ಅವರುಗಳು ಮೊಬೈಲ್ ಕ್ಯಾಂಟೀನ್ಗಳನ್ನು ಉದ್ಘಾಟಿಸಿದರು.
ಇಂದು ಉದ್ಘಾಟನೆಗೊಂಡಿರುವ ರಾಧಾಕೃಷ್ಣ ಫುಡ್ ಮೊಬೈಲ್ ಕ್ಯಾಂಟೀನ್ಗಳು ಸ್ವಾಷ್ಟ ಹಾಗೂ ಉತ್ತಮ ಗುಣಮಟ್ಟದ ಆಹಾರವನ್ನು ಅತ್ಯಂತ ಕಡಿಮೆ ಬೆಲೆಗೆ ಬಡವರಿಗೆ ವಿತರಿಸುವ ಮೂಲಕ ಗಮನ ಸೆಳೆಯಲಿವೆ.
ತುನೀಶಾ ಶರ್ಮಾ ಆತ್ಮಹತ್ಯೆ ಹಿಂದೆ ಲವ್ ಜಿಹಾದ್ಇಲ್ಲ : ಶೇಜಾನ್ ಖಾನ್ ಕುಟುಂಬ
ನಗರ ಪ್ರದೇಶದಲ್ಲಿ ಯಾವುದೇ ಹೋಟೆಲುಗಳಿಗೆ ಹೋದರೆ ತಿಂಡಿ ತಿನ್ನಲು ಅಂದಾಜು 70 ರಿಂದ 100ರೂ. ಬೇಕು ಅದರೆ ರಾಧಕೃಷ್ಣ ಪುಡ್ ಮೊಬೈಲ್ ಕ್ಯಾಂಟೀನ್ 10 ರೂ.ಗೆ ಹೊಟ್ಟೆ ತುಂಬುವಷ್ಟು ತಿಂಡಿ ನೀಡಲಾಗುತ್ತದೆ.
ಇಂದಿನಿಂದ ಮೂರು ಮೊಬೈಲ್ ಕ್ಯಾಂಟೀನ್ಗಳನ್ನು ಬಡವರು ಇರುವ ಕಡೆಗಳಲ್ಲಿ ನಮ್ಮ ಮೊಬೈಲ್ ಕ್ಯಾಂಟೀನ್ ನಿಲ್ಲುತ್ತದೆ. ಮುಂಬರುವ ದಿನಗಳಲ್ಲಿ 15ಕ್ಕೂ ಹೆಚ್ಚು ಮೊಬೈಲ್ ಪುಟ್ ಕ್ಯಾಂಟೀನ್ ತೆರೆಯಲಿದ್ದಾರೆ.
ಇಡ್ಲಿ, ಚಿತ್ರಾನ್ನ, ಪಲಾವ್, ಮೊಸರನ್ನ, ತರಕಾರಿ ಬಾತ್ , ಉಪ್ಪಿಟ್ಟು ಕೇಸರಿಬಾತ್, ಖಾರಾಬಾತ್ ಮತ್ತಿತರ ತಿಂಡಿಗಳನ್ನು ವಿಶೇಷವಾಗಿ ಬಡವರ ಹೊಟ್ಟೆ ಹಸಿವು ನೀಗಿಸಬೇಕು ಎಂಬ ಉದ್ದೇಶದಿಂದ ಆರಂಭಿಸಲಾಗಿದೆ ಎಂದು ಮಾಲೀಕರುಗಳು ತಿಳಿಸಿದ್ದಾರೆ.
ಲಿಂಬಾವಳಿ ವಿರುದ್ಧ ಕಾನೂನು ಪ್ರಕಾರ ತನಿಖೆ : ಸಿಎಂ ಬೊಮ್ಮಾಯಿ
ನಗರ ಪ್ರದೇಶದಲ್ಲಿ ಬೇಡಿಕೆ ಹೆಚ್ಚಿದಂತೆ ಮತ್ತು ಬಡವರು ವಾಸಿಸುವ ಪ್ರದೇಶಗಳಲ್ಲಿ ಮೊಬೈಲ್ ಕ್ಯಾಂಟೀನ್ ಪ್ರಾರಂಭಿಸಲಾಗುವುದು.
ರಾಧಕೃಷ್ಣ ಫುಡ್ ಕ್ಯಾಂಟೀನ್ ವತಿಯಿಂದ 5ಕ್ಕೂ ಹೆಚ್ಚು ಅನಾಥ ಮಕ್ಕಳ ಶಾಲೆಯ ನೂರಾರು ವಿದ್ಯಾರ್ಥಿಗಳಿಗೆ ಹಾಗೂ ವೃದ್ದಶ್ರಾಮಕ್ಕೆ ಉಚಿತವಾಗಿ ಪ್ರತಿದಿನ ತಿಂಡಿ ವಿತರಿಸಲಾಗುತ್ತಿದೆ ಎಂದು ಅವರು ವಿವರಣೆ ನೀಡಿದರು.
Radhakrishna, Mobile, Food Canteen, Bengaluru,