ನವದೆಹಲಿ,ಜ.23- ಭಾರತೀಯ ಆರ್ಥಿಕತೆ ಕೆಲವು ಉಜ್ವಲ ಚುಕ್ಕೆಗಳನ್ನು ಮತ್ತು ಅನೇಕ ತೀವ್ರ ಕಪ್ಪು ಕಲೆಗಳನ್ನು ಹೊಂದಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ)ನ ಮಾಜಿ ಗವರ್ನರ್ ರಘುರಾಂ ರಾಜನ್ ಇಂದು ತಿಳಿಸಿದ್ದಾರೆ.
ಸರ್ಕಾರವು ತನ್ನ ವೆಚ್ಚಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿದಲ್ಲಿ ಭಾರಿ ಕೊರತೆಗಳು ಉಂಟಾಗುವುದಿಲ್ಲ ಎಂದು ರಾಜನ್ ಸಲಹೆ ಮಾಡಿದ್ದಾರೆ.ಸರ್ಕಾರವು ಕೊರೊನಾ ವೈರಸ್ ಪಿಡುಗಿನಿಂದ ನಲುಗಿರುವ ಆರ್ಥಿಕತೆಯ ಕೆ ಆಕಾರದ ಚೇತರಿಕೆಯನ್ನು ತಡೆಗಟ್ಟಲು ಬಹಳಷ್ಟನ್ನು ಮಾಡಬೇಕಿದೆ ಎಂದು ತಮ್ಮ ನೇರನುಡಿಗಳಿಗೆ ಹೆಸರಾಗಿರುವ ರಾಜನ್ ಪ್ರತಿಪಾದಿಸಿದ್ದಾರೆ.
ಸಾಮಾನ್ಯವಾಗಿ ಒಂದು ಕೆ ಆಕಾರದ ಚೇತರಿಕೆ ಕೋವಿಡ್‍ನಿಂದ ಬಳಲಿರುವ ಸಣ್ಣ ಉದ್ದಿಮೆಗಳು ಮತ್ತು ಕೈಗಾರಿಕೆಗಳಿಗಿಂತ ತಂತ್ರಜ್ಞಾನ ಮತ್ತು ಬೃಹತ್ ಬಂಡವಾಳ ಸಹಿತ ಸಂಸ್ಥೆಗಳು ಅತಿ ವೇಗವಾಗಿ ಚೇತರಿಸಿಕೊಳ್ಳುವಂಥ ಸನ್ನಿವೇಶವನ್ನು ಪ್ರತಿಬಿಂಬಿಸುತ್ತದೆ.
