ಬೆಂಗಳೂರು,ಡಿ.1- ಧರ್ಮ ದಂಗಲ್ ತಿಕ್ಕಾಟ ಇನ್ನು ಮುಂದುವರೆದಿದೆ. ಹಿಂದೂಗಳು ನಡೆಸುವ ಜಾತ್ರ ಮಹೋತ್ಸಗಳಲ್ಲಿ ಅನ್ಯ ಧರ್ಮಿಯ ವ್ಯಾಪಾರಿಗಳ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಕೆಲವು ಹಿಂದೂಪರ ಸಂಘಟನೆಗಳು ಒತ್ತಾಯಿಸುತ್ತಲೆ ಇವೆ.
ಬಸವನಗುಡಿ ಕಡಲೆಕಾಯಿ ಪರಿಷೆ ಹಾಗೂ ವಿವಿಪುರಂ ಸುಬ್ರಮಣ್ಯಸ್ವಾಮಿ ರಥೋತ್ಸವದ ಸಂದರ್ಭದಲ್ಲೂ ಅನ್ಯಧರ್ಮಿಯರ ವ್ಯಾಪಾರ ವಹಿವಾಟು ನಿರ್ಬಂಧಕ್ಕೆ ಒತ್ತಾಯ ಕೇಳಿಬಂದಿತ್ತು. ಇದೀಗ ಈ ಧರ್ಮ ದಂಗಲ್ ರಾಗಿಗುಡ್ಡ ಆಂಜನೇಯಸ್ವಾಮಿ ಜಾತ್ರೆಗೂ ವಿಸ್ತರಿಸಿದೆ.
ಇತಿಹಾಸ ಪ್ರಸಿದ್ಧ ರಾಗಿ ಗುಡ್ಡ ಆಂಜನೇಯಸ್ವಾಮಿ ದೇವರ ಜಾತ್ರಾ ಮಹೋತ್ಸವ ಇಂದಿನಿಂದ ಆರಂಭವಾಗಿದ್ದು, ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎಂಬ ಕೂಗು ಕೇಳಿ ಬಂದಿದೆ. 11 ದಿನಗಳ ಕಾಲ ನಡೆಯಲಿರುವ ಈ ಜಾತ್ರ ಮಹೋತ್ಸವಕ್ಕೆ ನಾಡಿನ ಹಲವಾರು ಭಾಗಗಳಿಂದ ಸಾವಿರಾರು ಮಂದಿ ಸಾಕ್ಷಿಯಾಗುತ್ತಾರೆ.
ಯಾವುದೇ ಕಾರಣಕ್ಕೂ ರೌಡಿಗಳನ್ನು ಬಿಜೆಪಿಗೆ ಸೇರಿಸಿಕೊಳ್ಳಲ್ಲ : ಬೊಮ್ಮಾಯಿ
ಡಿ.5ರಂದು ರಾಗಿಗುಡ್ಡ ಆಂಜನೇಯ ಸ್ವಾಮಿ ದೇಗುಲದ ಆವರಣದಲ್ಲಿ ವಿಶೇಷ ರಥೋತ್ಸವ ನೆರವೇರಲಿದ್ದು, ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಭಕ್ತರು ಭಾಗಿಯಾಗುತ್ತಾರೆ.
ಹಿಂದೂ ಸಂಪ್ರದಾಯದಂತೆ ನಡೆಯುವ ಈ ಜಾತ್ರ ಮಹೋತ್ಸವದ ಸಂದರ್ಭದಲ್ಲಿ ಅನ್ಯ ಧರ್ಮಿಯರ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಬಾರದು ಎಂದು ಹಿಂದೂ ಜಾಗರಣ ವೇದಿಕೆ ಮುಖಂಡರು ಒತ್ತಾಯಿಸಿದ್ದಾರೆ.
ಅನ್ಯಧರ್ಮಿಯರ ವ್ಯಾಪಾರಕ್ಕೆ ಅಡ್ಡಿಪಡಿಸುವ ಸಾಧ್ಯತೆ ಇರುವುದರಿಂದ ರಾಗಿ ಗುಡ್ಡ ಆಂಜನೇಯಸ್ವಾಮಿ ದೇವಾಲಯದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ನಮಗೆ ಅಡ್ಡಿಯಿಲ್ಲ: ರಾಗಿ ಗುಡ್ಡ ಆಂಜನೇಯಸ್ವಾಮಿ ದೇವರ ಜಾತ್ರೆ ಕಳೆದ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ. ಹಿಂದಿನಿಂದಲೂ ಎಲ್ಲ ಧರ್ಮದವರು ಜಾತ್ರೆಯಲ್ಲಿ ವ್ಯಾಪಾರ ವಹಿವಾಟು ನಡೆಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ನಾವು ಯಾವುದೇ ಧರ್ಮದವರು ಮಾಡುವ ವ್ಯಾಪಾರ ವಹಿವಾಟು ನಡೆಸಲು ಅಡ್ಡಿ ಉಂಟು ಮಾಡುವುದಿಲ್ಲ ಎಂದು ದೇವಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಗುರುರಾಜ್ ತಿಳಿಸಿದ್ದಾರೆ.
ರ‍್ಯಾಗಿಂಗ್ ಮಾಡಿದ ಸರ್ಕಾರಿ ವೈದ್ಯಕೀಯ ಕಾಲೇಜಿನ 6 ವಿದ್ಯಾರ್ಥಿಗಳ ಅಮಾನತು
ಖಂಡನೆ: ಅನ್ಯಧರ್ಮಿಯರ ವ್ಯಾಪಾರಸ್ಥರ ವ್ಯಾಪಾರಕ್ಕೆ ಬಾಯ್ಕಾಟ್ ಮಾಡಲು ಮುಂದಾಗಿರುವ ಕೆಲವು ಹಿಂದೂ ಸಂಘಟನೆಗಳ ಮುಖಂಡರ ವರ್ತನೆಗೆ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ವ್ಯಾಪಾರದ ಹೆಸರಿನಲ್ಲಿ ಕೆಲವರು ಧರ್ಮವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಬಿದಿ ಬದಿ ವ್ಯಾಪಾರಿಗಳ ಒಗ್ಗೂಡಿಸುವುದು ಅವರ ಶ್ರಮ ಮತ್ತು ಹಸಿವೆ ವಿನಾಃ ಧರ್ಮ ಜಾತಿಯಲ್ಲ. ಹೀಗಾಗಿ ಯಾವುದೇ ಸಂಘಟನೆಗಳು ಕರೆ ನೀಡುವ ಧರ್ಮ ದಂಗಲ್ ಅನ್ನು ನಾವು ಖಂಡಿಸುತ್ತೇವೆ ಎಂದು ಬೀದಿ ಬದಿ ವ್ಯಾಪಾರಿಗಳ ಸಂಘಟನೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Ragigudda, Anjaneya Swamy, Dharma Dangal,