ಬೆಂಗಳೂರು, ಜ. 11- ಭಾರತ ಕ್ರಿಕೆಟ್ ಲೋಕದ ಮಹಾಗೋಡೆ ಎಂಬ ಖ್ಯಾತಿ ಹೊಂದಿರುವ ಕನ್ನಡಿಗ, ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ಗೆ ಇಂದು 50ರ ಸಡಗರ.
ಶ್ರೀಲಂಕಾ ವಿರುದ್ಧ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 67 ರನ್ ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಟೀಮ್ ಇಂಡಿಯಾದ ಆಟಗಾರರು ತಮ್ಮ ನೆಚ್ಚಿನ ತರಬೇತುದಾರನಿಗೆ ಹುಟ್ಟುಹಬ್ಬಕ್ಕೆ ಪ್ರೀತಿಯ ಉಡುಗೊರೆ ನೀಡಿದ್ದಾರೆ.
ರಾಹುಲ್ ದ್ರಾವಿಡ್ರ ಹುಟ್ಟುಹಬ್ಬಕ್ಕೆ ಬಿಸಿಸಿಐ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆ ಮೂಲಕ ಜನ್ಮದಿನದ ಶುಭಾಶಯ ಕೋರಿದ್ದರೆ, ಸಚಿನ್ತೆಂಡೂಲ್ಕರ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್, ವೀರಂದ್ರ ಸೆಹ್ವಾಗ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು , ಅಭಿಮಾನಿಗಳು, ಹಿತೈಷಿಗಳು ಭಾರತದ ಮಹಾಗೋಡೆಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.
ಮೆಟ್ರೋ ಪಿಲ್ಲರ್ ದುರಂತ : NCC ಕಂಪೆನಿ, 7 ಮಂದಿ ವಿರುದ್ಧ FIR
ಕ್ರಿಕೆಟ್ ವೃತ್ತಿ ಜೀವನದಿಂದ ನಿವೃತ್ತಿ ಪಡೆದ ನಂತರ ಭಾರತ ಎ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ ರಾಹುಲ್ ದ್ರಾವಿಡ್ ಅವರು, ತಮ್ಮ ಕೋಚಿಂಗ್ ಗರಡಿಯಲ್ಲಿ ಶುಭಮನ್ ಗಿಲ್, ಇಶಾನ್ ಕಿಶನ್, ರಾಹುಲ್ ತ್ರಿಪಾಠಿಯಂತಹ ಯುವ ಆಟಗಾರರನ್ನು ಭಾರತ ತಂಡಕ್ಕೆ ಕೊಡುಗೆ ಆಗಿ ನೀಡಿದ್ದಾರೆ.
ಭಾರತ ತಂಡದ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಕನ್ನಡಿಗ ರಾಹುಲ್ ದ್ರಾವಿಡ್, ತಮ್ಮ ಮಾರ್ಗದರ್ಶನದಲ್ಲಿ ತಂಡವು ಐಸಿಸಿ ಆಯೋಜಿಸಿದ್ದ ಏಷ್ಯಾ ಕಪ್, ಟಿ 20 ಟೂರ್ನಿಯಲ್ಲಿ ಸೋಲು ಕಂಡಿದ್ದರು, ದ್ವಿಪಕ್ಷೀಯ ಸರಣಿಯಲ್ಲಿ ಉತ್ತಮ ಸಾಧನೆ ಮಾಡಿದೆ. 2023ರ ಸೀಮಿತ ಓವರ್ಗಳ ವಿಶ್ವಕಪ್ ಟೂರ್ನಿಯ ನಂತರ ರಾಹುಲ್ ದ್ರಾವಿಡ್ರ ಸೇವಾವ ಮುಗಿಯಲಿದ್ದು, ಭಾರತ ತಂಡಕ್ಕೆ ಐಸಿಸಿ ಟ್ರೋಫಿ ಗೆದ್ದುಕೊಡುವ ಸಂಕಲ್ಪ ತೊಟ್ಟಿದ್ದಾರೆ.
ಕಂದರಕ್ಕೆ ಜಾರಿ ಬಿದ್ದು ಮೂವರು ಸೈನಿಕರು ಹುತಾತ್ಮ
ರಾಹುಲ್ ದ್ರಾವಿಡ್ರ ಕ್ರಿಕೆಟ್ ಜೀವನದ ಕೆಲವು ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ.
- ಟೆಸ್ಟ್ ಸ್ವರೂಪದಲ್ಲಿ ನಿಪುಣರಾಗಿರುವ ದ್ರಾವಿಡ್ 31,258 ಎಸೆತಗಳನ್ನು ಎದುರಿಸುವ ಮೂಲಕ ಅತಿ ಹೆಚ್ಚು ಚೆಂಡು ಎದುರಿಸಿದ ನಂಬರ್ 1 ಆಟಗಾರರಾಗಿದ್ದಾರೆ.
- ರಾಹುಲ್ ದ್ರಾವಿಡ್ ಆಡಿದ 286 ಟೆಸ್ಟ್ ಇನ್ನಿಂಗ್ಸ್ ಒಮ್ಮೆಯೂ ಡಕ್ ಔಟ್ ಆಗಿಲ್ಲ.
- ಟೆಸ್ಟ್ ಲೋಕದ ಡಿಪೆಡೆಂಬಲ್ ಖ್ಯಾತಿಯ ರಾಹುಲ್ ದ್ರಾವಿಡ್ ಅವರು 88 ಶತಕದ ಜೊತೆಯಾಟ ಆಡಿ ದಾಖಲೆ ನಿರ್ಮಿಸಿದ್ದಾರೆ. ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ರೊಂದಿಗೆ 20 ಶತಕದ ಜೊತೆಯಾಟದಲ್ಲಿ ದ್ರಾವಿಡ್ ಪಾಲ್ಗೊಂಡಿದ್ದಾರೆ.
- ಟೆಸ್ಟ್ ಕ್ರಿಕೆಟ್ನಲ್ಲಿ ಜ್ಯಾಮಿ (ರಾಹುಲ್ ದ್ರಾವಿಡ್) 210 ಕ್ಯಾಚ್ ಪಡೆದಿದ್ದು, ಈ ಮಾದರಿಯಲ್ಲಿ ವಿಕೆಟ್ ಕೀಪರ್ ಬಿಟ್ಟು ಆಟಗಾರ ಗಳಿಸಿದ ಅತಿ ಹೆಚ್ಚು ಕ್ಯಾಚ್ ಆಗಿದೆ.
- ದ್ರಾವಿಡ್ ಅವರು ತಮ್ಮ ಟೆಸ್ಟ್ ಜೀವನದಲ್ಲಿ 44,152 ನಿಮಿಷಗಳ ಕಾಲ ಕ್ರೀಸ್ನಲ್ಲಿ ನಿಂತು ಗಮನ ಸೆಳೆದಿದ್ದಾರೆ.
- ರಾಹುಲ್ ದ್ರಾವಿಡ್ ಅವರು 13,288 ಟೆಸ್ಟ್ ರನ್ ಹಾಗೂ 10,889 ಏಕದಿನ ರನ್ ಗಳಿಸಿದ್ದಾರೆ.
- ಟೆಸ್ಟ್ ಜೀವನದಲ್ಲಿ ಸಚಿನ್ ತೆಂಡೂಲ್ಕರ್, ಸ್ಟೀವ್ ವಾ, ರಾಹುಲ್ ದ್ರಾವಿಡ್ ಅವರು 10 ಬಾರಿ 90 ಹಾಗೂ ಅದಕ್ಕಿಂತಲೂ ಹೆಚ್ಚು ಮೊತ್ತ ಔಟಾಗಿ ಶತಕ ವಂಚಿತರಾಗಿದ್ದಾರೆ.
*ರಾಹುಲ್ ದ್ರಾವಿಡ್ ಅವರು 176 ಇನ್ನಿಂಗ್ಸ್ನಲ್ಲೇ ವೇಗದ 9 ಸಾವಿರ ರನ್ ಗಳಿಸಿ, ಕುಮಾರಸಂಗಾಕ್ಕಾರ ನಂತರ ವೇಗವಾಗಿ ಈ ಸಾಧನೆ ಮಾಡಿದ 2ನೇ ಆಟಗಾರರಾಗಿದ್ದಾರೆ. - 8 ಅಗಸ್ಟ್ 2002 ರಿಂದ 9 ಅಕ್ಟೋಬರ್ 2002ರ ಅವಯಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಸತತ 4 ಶತಕ ಗಳಿಸಿ ರಾಹುಲ್ ದ್ರಾವಿಡ್ ಗಮನ ಸೆಳೆದಿದ್ದಾರೆ. ಇಂಗ್ಲೆಂಡ್ ವಿರುದ್ಧ 1 ಹಾಗೂ ವೆಸ್ಟ್ ಇಂಡೀಸ್ ವಿರುದ್ಧ 3 ಶತಕಗಳನ್ನು ಜ್ಯಾಮಿ ದಾಖಲಿಸಿದ್ದರು.
- Rahul Dravid, Birthday,