ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಬದ್ದ : ರಾಹುಲ್ ಗಾಂಧಿ

Social Share

ನವದೆಹಲಿ,ಅ.21-ಆಂಧ್ರಪ್ರದೇಶದಲ್ಲಿ ಭಾರತ ಐಕ್ಯತಾ ಯಾತ್ರೆ ನಡೆಸಿದ ರಾಹುಲ್ ಗಾಂಧಿ ಇಂದು ಕರ್ನಾಟಕ ಪ್ರವೇಶಿಸುವ ಸಂದರ್ಭದಲ್ಲಿ ತೆಲುಗು ನಾಡಿಗೆ ಭಾವನಾತ್ಮಕ ವಿದಾಯಪತ್ರ ಬರೆದಿದ್ದು ರಾಜ್ಯದ ಜನರ ಆಶೋತ್ತರಗಳಿಗೆ ಸ್ಪಂದಿಸಲು ಪ್ರತಿಕ್ಷಣ ಜೊತೆಯಲ್ಲಿರುವುದಾಗಿ ತಿಳಿಸಿದ್ದಾರೆ.

ಇಂದು ಬೆಳಗ್ಗೆ ಆಂಧ್ರಪ್ರದೇಶದಲ್ಲಿ ನಡೆದ ಯಾತ್ರೆ ಪೂರ್ಣಗೊಂಡಿದೆ. ಆಂಧ್ರಪ್ರದೇಶದ ಜನರ ಬೆಂಬಲ ಮತ್ತು ಪ್ರೋತ್ಸಾಹ ಮರೆಯಲಾಗದಂತದ್ದು ಎಂದಿದ್ದಾರೆ. ಯಾತ್ರೆಯಲ್ಲಿ ತಾವು ವಿವಿಧ ವರ್ಗಗಳ ಜೊತೆ ಸಮಾಲೋಚನೆ ನಡೆಸಿದಾಗ ಜನರು ಅನುಭವಿಸುತ್ತಿರುವ ಹಲವಾರು ಸಮಸ್ಯೆಗಳು ಗಮನಕ್ಕೆ ಬಂದಿವೆ.

ಹೈದ್ರಾಬಾದ್‍ನಲ್ಲಿ ಇಡಿ ದಾಳಿ, 150 ಕೋಟಿ ಆಸ್ತಿ ವಶ

ಕಾಂಗ್ರೆಸ್ ಪಕ್ಷ ಅಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಬದ್ದತೆಯನ್ನು ಹೊಂದಿದೆ. ಮತ್ತು ಅಮರಾವತಿಯನ್ನು ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸುವ ವಾಗ್ದಾನವನ್ನು ಆಸಕ್ತಿ ಹೊಂದಿದೆ.

ವಿಶಾಖಪಟ್ಟಣಂನಲ್ಲಿರುವ ಸಾರ್ವಜನಿಕ ವಲಯದ ಉಕ್ಕು ಕಾರ್ಖಾನೆಯನ್ನು ಭಾರತೀಯ ಆಸ್ತಿಯನ್ನಾಗಿ ಸಂರಕ್ಷಿಸಲು ಬೆಂಬಲ ವ್ಯಕ್ತಪಡಿಸಲಿದೆ. ಆಂಧ್ರಪ್ರದೇಶದ ಪಂಚಾಯತ್‍ರಾಜ್ ಸದಸ್ಯರನ್ನು ಸರ್ಕಾರ ವ್ಯವಸ್ಥಿತವಾಗಿ ನಿಷ್ಕ್ರಿಯಗೊಳಿಸುತ್ತಿರುವುದನ್ನು ಗಮನಿಸಲಾಗಿದೆ. ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ದುರ್ಬಲಗೊಳಿಸುವ ಕ್ರಮಗಳನ್ನು ನಾವು ವಿರೋಧಿಸುತ್ತೇವೆ. ಜೊತೆಯಲ್ಲಿ ರೈತರ, ಯುವಕರ, ಮಹಿಳೆಯರ, ಕಾರ್ಮಿಕರ ದನಿಯಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ ಯಶಸ್ವಿಗೆ ಒಕ್ಕಲಿಗರ ಸಂಘ ಮನವಿ

2014ರಲ್ಲಿ ಸಂಸತ್ ಆಂಧ್ರಪ್ರದೇಶಕ್ಕೆ ನೀಡಿದ್ದ ಭರವಸೆಯನ್ನು ಸ್ಮರಿಸಿಕೊಂಡಿರುವ ರಾಹುಲ್ ಗಾಂಧಿ ಇದು ಯಾವುದೋ ಒಬ್ಬ ವ್ಯಕ್ತಿ ಅಥವಾ ಪಕ್ಷದಿಂದ ನೀಡಿದ ಭರವಸೆಯಲ್ಲ. ಸಂಸತ್ ಆಂಧ್ರದ ಜನರಿಗೆ ಮಾಡಿದ ವಾಗ್ದಾನ. ಅದರ ಆಶೋತ್ತರಗಳನ್ನು ಶೀಘ್ರವಾಗಿ ಮತ್ತು ಪೂರ್ಣ ಪ್ರಮಾಣದಲ್ಲಿ ಈಡೇರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದ್ದಾರೆ.

ಪುನೀತ್ ಪರ್ವಕ್ಕೆ ಕ್ಷಣಗಣನೆ, ಅರಮನೆ ಮೈದಾನದಲ್ಲಿ ಸೆಲೆಬ್ರೆಟಿಗಳ ಸಮಾಗಮ

ಆಂಧ್ರಪ್ರದೇಶದ ಸವಾಲುಗಳ ಬಗ್ಗ ನನಗೆ ಆಳವಾದ ಮಾಹಿತಿ ಇದೆ. ಇಲ್ಲಿ ಪಕ್ಷದ ಗತವೈಭವವನ್ನು ಮರಳಿ ತಂದುಕೊಡಬೇಕಿದೆ. ಭಾರತದ ಮುತ್ಸದ್ದಿತನವನ್ನು ಆಂಧ್ರಪ್ರದೇಶ ಹೊಂದಿತ್ತು. ಮುಂದಿನ ದಿನಗಳಲ್ಲಿ ಈ ಹಿಂದಿನ ಸಾಮಥ್ರ್ಯದೊಂದಿಗೆ ಪಕ್ಷ ಸಂಘಟನೆಗೊಳ್ಳಲಿದೆ. ಅದಕ್ಕೆ ಭಾರತ ಜೋಡೊ ಯಾತ್ರೆ ಮಹತ್ವದ ಹೆಜ್ಜೆಯಾಗಲಿದೆ ಎಂದು ಹೇಳಿದ್ದಾರೆ.

Articles You Might Like

Share This Article