ನವರಾಯಪುರ,ಫೆ.26- ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿ ಒಂದೇ, ದೇಶದ ಸಂಪತ್ತೆಲ್ಲಾ ಒಬ್ಬ ವ್ಯಕ್ತಿಯ ಕೈಗೆ ಸೇರುತ್ತಿದೆ. ಅದಾನಿ ಸಂಸ್ಥೆ ಈಸ್ಟ್ ಇಂಡಿಯಾ ಕಂಪೆನಿಯಂತೆ ನಮ್ಮ ಮೂಲಸೌಕರ್ಯಗಳನ್ನು ಕಳ್ಳತನ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್‍ಗಾಂ ಆರೋಪಿಸಿದರು.
ಅಖಿಲ ಭಾರತೀಯ ಕಾಂಗ್ರೆಸ್‍ನ 85ನೇ ಪ್ರತಿನಿಗಳ ಸಮಾವೇಶದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಭಾರತ್ ಜೋಡೋ ಯಾತ್ರೆಯಲ್ಲಿ ನನಗೆ ದೇಶಾದ್ಯಂತ ವ್ಯಾಪಕ ಬೆಂಬಲ ದೊರೆಯಿತು, ವಿವಿಧ ರಾಜ್ಯಗಳಲ್ಲಿ ಜನ ನಮ್ಮೊಂದಿಗೆ ಸೇರ್ಪಡೆಯಾದರು. ಬಹಳಷ್ಟು ಕಲಿಯುವ ಅವಕಾಶ ಸಿಕ್ಕತ್ತು. ಜನಸಾಮಾನ್ಯರ ಕಣ್ಣುಗಳಲ್ಲಿ ನಮ್ಮನ್ನು ನಾವು ನೋಡಿಕೊಳ್ಳಲು ಸಾಧ್ಯವಾಯಿತು ಎಂದರು.
ರೈತರ ಕೈ ಕುಲುಕಿದಾಗ, ಅಪ್ಪಿಕೊಂಡಾಗ ಒಂದು ರೀತಿಯ ಶಕ್ತಿ ಪ್ರಹರಿಸುತ್ತಿತ್ತು. ಅವರೊಂದಿಗೆ ನಾನು ಸಂವಹನ ನಡೆಸುತ್ತಿದ್ದೆ. ಅವರ ನೋವು ನನಗೆ ಒಂದು ಕ್ಷಣದಲ್ಲಿ ಅರ್ಥವಾಗುತ್ತಿತ್ತು. ಏನು ಹೇಳದೆ ಅನ್ನು ಅನುಭವಿಸುತ್ತಿದ್ದೆ. ಕೇರಳದಲ್ಲಿ ಸಂಪೂರ್ಣ ತಂಡದೊಂದಿಗೆ ನಡೆಯುತ್ತಿದೆ.
ನನಗೆ ಬಹಳಷ್ಟು ನೋವಿತ್ತು, ಅಳು ಬರುವಷ್ಟು ಭಾದಿತನಾಗಿದ್ದೆ, ಆದರೆ ನಗು ಮುಖದೊಂದಿಗೆ ಹೆಜ್ಜೆ ಹಾಕಿದೆ. ಯಾತ್ರೆ ಶುರು ಮಾಡಿದಾಗ 10-15 ಕಿಲೋ ಮೀಟರ್ ನಡೆಯುವುದು ಏನು ಮಹಾ ಕಷ್ಟವಲ್ಲ ಎಂಬ ಅಹಂಕಾರವಿತ್ತು. ಕಾಲೇಜು ದಿನಗಳಲ್ಲಿ ಫುಟ್‍ಬಾಲ್ ಆಡುವಾಗ ಆಗಿದ್ದ ಗಾಯದಿಂದ ನೋವಿತ್ತು. ಅದು ನಂತರ ದಿನಗಳಲ್ಲಿ ಕಳೆದು ಹೋಗಿತ್ತು.
ಭಾರತ್ ಜೋಡೋ ಪಾದಯಾತ್ರೆ ಆರಂಭಿಸುತ್ತಿದ್ದಂತೆ ಮತ್ತೆ ಕಾಡಲಾರಂಭಿಸಿತ್ತು. ಮೊದಲು 15 ದಿನಗಳಲ್ಲಿ ಅಹಂನಲ್ಲಿ ನಡೆದ ನಂತರ ಕಷ್ಟದ ದಿನಗಳು ಎದುರಾಗಿತ್ತು. ಆದರೆ ಭಾರತ ಮಾತೆ ನನಗೆ ಸಂದೇಶ ನೀಡಿದರು. ನಿನ್ನಲ್ಲಿ ಅಹಂ ಇಟ್ಟುಕೊಂಡು ನಡೆಯಬೇಡ ಎಂಬ ಸಂದೇಶ ನನ್ನನ್ನು ಎಚ್ಚರಿಸಿತ್ತು. ನಡೆಯುತ್ತಾ ಹೋದಂತೆ ಅಹಂ ಹೋಯಿತು, ನಗು ಮುಖ, ಧ್ಯಾನಸಕ್ತನಾಗಿ ಕಾಶ್ಮೀರ ತಲುಪಿದೆ ಎಂದು ಹೇಳಿದರು.
ಬಾಲ್ಯದಲ್ಲಿ ಸರ್ಕಾರಿ ಬಂಗಲೆಯನ್ನು ಬಿಟ್ಟು ಹೋಗುವಾಗ ಎದುರಾದ ಪರಿಸ್ಥಿತಿಯನ್ನು ಭಾವನಾತ್ಮಕವಾಗಿ ವಿವರಿಸಿದ ರಾಹುಲ್, ನಾನು 14 ವರ್ಷದವನಿದ್ದಾಗಿ ಸರ್ಕಾರಿ ಬಂಗಲೆಯನ್ನು ನಮ್ಮದೆಂದುಕೊಂಡಿದೆ. ಮನೆ ಬಿಡುವಾಗ ಎಲ್ಲಿಗೆ ಹೋಗುವುದು ಎಂದು ತಾಯಿಯನ್ನು ಕೇಳಿದೆ, ಅವರು ಗೋತ್ತಿಲ್ಲ ಎಂದಿದ್ದರು. ನನ್ನ ಬಳಿ ಮನೆ ಇರಲಿಲ್ಲ. ಈಗಲೂ ನನಗೆ ನನ್ನದೇ ಆದ ಸ್ವಂತ ಮನೆ ಇಲ್ಲ. ನನ್ನ ಕುಟುಂಬದ ಮನೆ ಅಲಹಬಾದ್‍ನಲ್ಲಿದೆ. ಅದು ನನ್ನದಲ್ಲ ಎಂದರು.
ಯಾತ್ರೆಯಲ್ಲಿ ನನ್ನ ಅಕ್ಕಪಕ್ಕ, ಹಿಂದೆ ಮುಂದೆ 25 ಅಡಿ ಅಂತರ ಇರುತ್ತಿತ್ತು. ದೇಶದ ಜನ ಜಾತಿ, ಧರ್ಮ, ಭಾಷಾ ಬೇಧವಿಲ್ಲದೆ ನನ್ನನ್ನು ಭೇಟಿ ಮಾಡಲು ಬರುತ್ತಿದ್ದರು. ಅದೇ ನನ್ನ ಮನೆ, ಇನ್ನೂ ಮುಂದೆ ಅದೇ ನನ್ನ ಮನೆ ಎಂದು ತೀರ್ಮಾನ ಮಾಡಿದೆ. ಆ ಮನೆಯೊಂದಿಗೆ ಮುಂದುವರೆಯಬೇಕು ಎಂದು ನಿರ್ಧರಿಸಿದೆ. ಇದು ಚಿಕ್ಕ ಅಲೋಚನೆ ಎನಿಸಬಹುದು. ಆದರೆ ಅದೇ ನನ್ನಲ್ಲಿ ದೊಡ್ಡ ಬದಲಾವಣೆಯನ್ನು ತಂದಿದೆ. ಜನ ನನ್ನೊಂದಿಗೆ ರಾಜಕೀಯ ಮಾತನಾಡುವುದಿಲ್ಲ. ಅವರ ನೋವು, ನಲಿವುಗಳನ್ನು ಹಂಚಿಕೊಳ್ಳುತ್ತಾರೆ ಎಂದು ಹೇಳಿದರು.
ತ್ರೀವರ್ಣ ದ್ವಜ ನಮ್ಮ ಹೃದಯದಲ್ಲಿರುವ ಭಾವನೆ, ನಾವು ಇದನ್ನು ಕಾಶ್ಮೀರದ ಯುವಕರ ಮನಸ್ಸಿನಲ್ಲಿ ಪ್ರತಿಷ್ಠಾಪಿಸಿದ್ದೇವೆ. ಅವರು ರಾಷ್ಟ್ರಧ್ವಜದೊಂದಿಗೆ ನಡೆಯಬೇಕು ಎಂದಾಗ, ನಾವು ನಿಮ್ಮ ಮೇಲೆ ವಿಶ್ವಾಸವಿಟ್ಟು ಹೆಜ್ಜೆ ಹಾಕುತ್ತಿದ್ದೇವೆ ಎಂದಿದ್ದಾರೆ. ಇದು ವ್ಯತ್ಯಾಸ. ಹಿಂದುಸ್ಥಾನ ಒಂದು ಭಾವನೆ, ಯೋಜಿಸುವ ಕ್ರಮ, ತಿರಂಗಾ ಅದರ ದ್ಯೋತ್ಯಕ ಎಂದರು.
ಸರ್ಕಾರದ ಆಲೋಚನೆಗಳು ಹೇಗಿವೆ ಎಂದರೆ ಕೆಲ ದಿನಗಳ ಹಿಂದೆ ವಿದೇಶಾಂಗ ಸಚಿವ ಜೈಶಂಕರ್, ಚೀನಾದ ಆರ್ಥಿಕತೆ ಭಾರತದ ಆರ್ಥಿಕತೆಗಿಂತ ದೊಡ್ಡದಿದೆ. ಅದರ ಜೊತೆ ನಾವು ಹೇಗೆ ಹೋರಾಟ ನಡೆಸಲು ಸಾಧ್ಯ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. ಇದು ರಾಷ್ಟ್ರೀಯತೆಯಲ್ಲ, ಹೇಡಿತನ. ಇದನ್ನು ರಾಷ್ಟ್ರ ಭಕ್ತಿ ಎಂದು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಬ್ರಿಟಿಷರು ನಮಗಿಂತ ಬಲಿಷ್ಠರಾಗಿದ್ದರು. ಆದರೂ ಅವರ ವಿರುದ್ಧ ನಾವು ಹೋರಾಟ ಮಾಡಿ ಗೆಲ್ಲಲಿಲ್ಲವೇ. ಬಲಿಷ್ಠ ಎಂಬ ಕಾರಣಕ್ಕೆ ಹೋರಾಟವನ್ನು ಕೈ ಬಿಡಲು ಸಾಧ್ಯವೇ. ಇದು ಸಾರ್ವಕರ್ ಸಿದ್ಧಾಂತ ಎಂದು ಲೇವಡಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿಯವರೆ ಅದಾನಿಯೊಂದಿಗಿನ ನಿಮ್ಮ ಸಂಬಂಧ ಏನು ಎಂದಷ್ಟೆ ಪ್ರಶ್ನೆ ಕೇಳಿದೆ. ನಾನು ಫೆÇೀಟೋ ತೋರಿಸಿ ಪ್ರಶ್ನೆ ಕೇಳಿದೆ, ಮೋದಿ ಆರಾಮಾಗಿ ಕುರ್ಚಿಗೆ ಒರಗಿ ಕುಳಿತಿದ್ದರು. ನಾನು ಪ್ರಶ್ನೆ ಕೇಳಿದ ತಕ್ಷಣವೇ ಕೇಂದ್ರ ಸರ್ಕಾರದ ಸಂಪುಟದ ಸದಸ್ಯರೇ ಅದಾನಿಯನ್ನು ರಕ್ಷಣೆಗೆ ಮಾಡಲು ಮುಂದಾದರು. ಅದಾನಿಯನ್ನು ಪ್ರಶ್ನೆ ಮಾಡುವುದು ದೇಶ ದ್ರೋಹವೇ, ಬಿಜೆಪಿ, ಆರ್‍ಎಸ್‍ಎಸ್, ಸಂಪುಟದ ಎಲ್ಲರೂ ಅದಾನಿ ರಕ್ಷಣೆಗೆ ಬರುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ಅದಾನಿ ರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಅದು ಗೋತ್ತಿಲ್ಲವೇ, ಜಂಟಿ ಸದನ ಸಮಿತಿಯ ತನಿಖೆಗೆ ಯಾಕೆ ಕೊಟ್ಟಿಲ್ಲ. ಎಲ್‍ಐಸಿ ನಷ್ಟವಾಗಿದೆ, ಅದಾನಿಗೆ ಒಂದು ಶತಕೋಟಿ ಸಾಲ ನೀಡಲಾಗಿದೆ. ಸ್ಟೆಟ್ ಬ್ಯಾಂಕ್ ಮತ್ತು ಅದಾನಿ ನಡುವೆ ಮೋದಿ ಏಕೆ ಕುಳಿತಿದ್ದರು.
ಯಾವುದೇ ಸಂಬಂಧ ಇಲ್ಲ ಎಂದು ಸರಳವಾಗಿ ಉತ್ತರ ಹೇಳಬಹುದಿತ್ತು. ಹಾಗೇ ಹೇಳಲು ಅವರಿಗೆ ಸಾಧ್ಯವಾಗಿಲ್ಲ. ಸಂಬಂಧ ಇದೆ. ಅದಾನಿ ಮತ್ತು ಮೋದಿ ಒಂದೇ. ದೇಶದ ಎಲ್ಲಾ ಸಂಪತ್ತು ಒಬ್ಬ ವ್ಯಕ್ತಿಯ ಕೈ ಸೇರುತ್ತಿದೆ. ಬಂದರು, ವಿಮಾನ ನಿಲ್ದಾಣ, ಕೃಷಿ ಉತ್ಪನ್ನ ಸೇರಿ ಎಲ್ಲವೂ ಒಬ್ಬ ವ್ಯಕ್ತಿಯ ಕೈಗೆ ಸೇರುತ್ತಿದೆ. ಸಂಸತ್‍ನಲ್ಲಿ ನಾವು ಕೇಳಿದ ಪ್ರಶ್ನೆಗಳು, ಮಾಡಿದ ಭಾಷಣಗಳನ್ನು ತೆಗೆದು ಹಾಕಲಾಗಿದೆ. ಸತ್ಯ ಹೊರ ಬರುವವರೆಗೂ ನಾನು ಸುಮ್ಮನಿರುವುದಿಲ್ಲ. ಮತ್ತೆ ಮತ್ತೆ ಕೇಳುತ್ತಲೇ ಇರುತ್ತೇವೆ. ಸಾವಿರ ಬಾರಿ ಪ್ರಶ್ನೆ ಕೇಳುತ್ತೇನೆ.
ಅದಾನಿ ಕಂಪೆನಿಯಲ್ಲಿ ಕೆಲಸ ಮಾಡುವವರ ಕುರಿತು ಮಾತನಾಡಿದ ರಾಹುಲ್, ಅದಾನಿ ಸಂಸ್ಥೆ ದೇಶಕ್ಕೆ ನಷ್ಟ ಮಾಡುತ್ತಿದೆ. ದೇಶದ ಮೂಲ ಸೌಲಭ್ಯಗಳನ್ನು ಕಳ್ಳತನ ಮಾಡುತ್ತಿದೆ. ಸ್ವತಂತ್ರ್ಯ ಪೂರ್ವದಲ್ಲಿ ಈಸ್ಟ್ ಇಂಡಿಯಾ ಕಂಪನಿ ದೇಶವನ್ನು ಕೊಳ್ಳೆ ಹೊಡೆದಿತ್ತು. ಈಗ ಇತಿಹಾರ ಪುನಾರವರ್ತನೆಯಾಗುತ್ತಿದೆ ಎಂದು ಹೇಳಿದರು.
ನಮ್ಮದು ತಪ್ಪಸ್ವಿಗಳ ಪಕ್ಷ, ಪೂಜಾರಿಗಳ ಪಕ್ಷವಲ್ಲ. ಕಾಂಗ್ರೆಸ್ ಕಾರ್ಯಕರ್ತರು ದೇಶಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ತಪ್ಪನ್ನು ನಿಲ್ಲಿಸುವುದಿಲ್ಲ. ಕಾರ್ಯಕ್ರಮ ನಿಲ್ಲಿಸುವುದಿಲ್ಲ. ಪ್ರತಿಯೊಬ್ಬ ಕಾರ್ಯಕರ್ತರು, ನಾಯಕರು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೆ. ಕಷ್ಟ ಪಡುತ್ತಾರೆ. ಬೆವರು ಹರಿಸಬೇಕಿದೆ.
ಪಕ್ಷ ಕಾರ್ಯಕ್ರಮಗಳನ್ನು ರೂಪಿಸಬೇಕು. ದೇಶಕ್ಕಾಗಿ ನಮ್ಮ ರಕ್ತ, ಬೆವರನ್ನು ಹರಿಸಲು ಸಿದ್ಧರಾಗಬೇಕು. ಇದಕ್ಕಾಗಿ ಖರ್ಗೆಯವರು ಕಾರ್ಯಕ್ರಮ ರೂಪಿಸಬೇಕು. ನಾವು ಎಲ್ಲರೂ ಅದರಲ್ಲಿ ಭಾಗಿಯಾಗುತ್ತೇವೆ ಎಂದು ಭರವಸೆ ನೀಡಿದರು.
ರಾಹುಲ್‍ಗಾಂ ಭಾಷಣದ ಬಳಿಕ ಸಭಾಂಗಣದಲ್ಲಿ ಕುಳಿತಿದ್ದ 15 ಸಾವಿರಕ್ಕೂ ಹೆಚ್ಚು ಪ್ರತಿನಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ಮುಖೇಶ್ ಬಗೇಲ್, ರಣದೀಪ್‍ಸಿಂಗ್ ಸುರ್ಜೇವಾಲ, ಪ್ರಿಯಾಂಕ ಗಾಂ, ರಾಜ್ಯದ ಎಲ್ಲಾ ಅಧ್ಯಕ್ಷರು, ಶಾಸಕಾಂಗ ಪಕ್ಷಗಳ ನಾಯಕರು ಭಾಗವಹಿಸಿದ್ದರು.
Rahul Gandhi’s swipe at PM Modi over ‘unfurling flag at Lal Chowk’