ನ್ಯೂಹ್,ಡಿ.22- ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಇಂದು ಬೆಳಗ್ಗೆ ಹರ್ಯಾಣದ ನ್ಯೂಹ್ ಜಿಲ್ಲೆಯ ಮಲಬ್ ಗ್ರಾಮದಿಂದ ಪುನರ್ ಆರಂಭವಾಗಿದೆ.
ರಾಜಸ್ಥಾನದಿಂದ ನಿನ್ನೆ ಹರ್ಯಾಣಕ್ಕೆ ಪ್ರವೇಶಿಸಿದ ಎರಡನೇ ದಿನದ ಯಾತ್ರೆಯಲ್ಲಿ ಇಂದು ಬೆಳಗ್ಗೆ ಹಿರಿಯ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು. ನಿನ್ನೆಯಿಂದಲೂ ಭೂಪಿಂದರ್ ಸಿಂಗ್ ಹೂಡ, ರಣದೀಪ್ ಸಿಂಗ್ ಸುರ್ಜೇವಾಲ, ಕುಮಾರಿ ಸೆಲ್ಜಾ, ಕರಣ್ ಸಿಂಗ್ ದಲಾಲ್ ಸೇರಿದಂತೆ ಅನೇಕರು ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.
ನ್ಯೂಹ್ ಜಿಲ್ಲೆಯ ಹಲವು ಸ್ಥಳೀಯ ನಾಯಕರು ಯಾತ್ರೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಘಸೆರಾ ಗ್ರಾಮದಲ್ಲಿ ಕೆಲ ಕಾಲ ವಿಶ್ರಾಂತಿ ಪಡೆದ ರಾಹುಲ್ ತಂಡ ನಂತರ ಮುಂದಿನ ದಿಕ್ಕಿನತ್ತ ಹೆಜ್ಜೆ ಹಾಕಿತ್ತು. ಸಂಜೆ ಅಂಬೇಡ್ಕರ್ ಚೌಕ್ನ ಸೋನದಲ್ಲಿ ತಂಗಲಿದೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಗೆ ಕಾವೇರಿ ಹೆಸರು
ಸೆಪ್ಟಂಬರ್ 7ರಿಂದ ಆರಂಭವಾಗಿರುವ ಯಾತ್ರೆಯಲ್ಲಿ ರಾಹುಲ್ಗಾಂಧಿ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಜಾಗೃತಿ ಮೂಡಿಸಲಾರಂಭಿಸಿದ್ದಾರೆ. ರೈತರು, ಕಾರ್ಮಿಕರ ಹಕ್ಕುಗಳನ್ನು ಕೇಂದ್ರ ಸರ್ಕಾರ ಹತ್ತಿಕ್ಕುತ್ತಿದೆ. ಬೆಲೆ ಏರಿಕೆ ತೀವ್ರವಾಗಿದ್ದು, ನಿರುದ್ಯೋಗ ಮಿತಿ ಮೀರಿದೆ ಎಂದು ಆರೋಪಿಸಿದ್ದಾರೆ.
ಹರ್ಯಾಣದಲ್ಲಿ ಡಿಸೆಂಬರ್ 23ರವರೆಗೂ ನಡೆಯುವ ಯಾತ್ರೆ, ಉತ್ತರ ಪ್ರದೇಶಕ್ಕೆ ಪ್ರವೇಶಿಸಲಿದೆ. ನಂತರ ಎರಡನೇ ಹಂತದಲ್ಲಿ ಜನವರಿ ಆರರಂದು ಮತ್ತೆ ಹರ್ಯಾಣ ಪ್ರವೇಶಿಸಲಿದೆ.
ಹ್ಯಾಂಡ್ಲಾಕ್ ಮುರಿದು ಕಳ್ಳತನ : 10 ದ್ವಿಚಕ್ರ ವಾಹನಗಳ ಜಪ್ತಿ
ಕೋವಿಡ್ ಹಿನ್ನೆಲೆಯಲ್ಲಿ ಯಾತ್ರೆಯನ್ನೂ ಮುಂದೂಡಿ ಅಥವಾ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸೂಕ್ ಮಾಂಡವೀಯ ರಾಹುಲ್ಗಾಂಧಿ ಅವರಿಗೆ ಪತ್ರ ಬರೆದು ಒತ್ತಾಯಿಸಿದರು. ಆದರೆ ಅದಕ್ಕೆ ಹೆಚ್ಚು ಮಾನ್ಯತೆ ನೀಡದ ರಾಹುಲ್ಗಾಂಧಿ ತಂಡ ಯಾವುದೇ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೆ ಯಾತ್ರೆ ಮುಂದುವರೆಸಿದೆ.
Rahul Gandhi, Bharat Jodo Yatra, Haryana,