ಕರ್ನಾಟಕದಲ್ಲಿ ನಾಳೆಗೆ ಕೊನೆಯಾಗಲಿದೆ ಭಾರತ ಐಕ್ಯತಾ ಯಾತ್ರೆ

Social Share

ರಾಯಚೂರು, ಅ.22- ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ಕರ್ನಾಟಕದ ವ್ಯಾಪ್ತಿಯಲ್ಲಿನ ಸಂಚಾರವನ್ನು ನಾಳೆಗೆ ಪೂರ್ಣಗೊಳಿಸಲಿದೆ.

ಇಂದು ಬೆಳಗ್ಗೆ ರಾಯಚೂರು ಜಿಲ್ಲೆಯ ಯರಗೇರಾ ಗ್ರಾಮದಿಂದ ಪಾದಯಾತ್ರೆ ಆರಂಭವಾಯಿತು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್ ಸೇರಿದಂತೆ ಸ್ಥಳೀಯ ನಾಯಕರು ಯಾತ್ರೆಯಲ್ಲಿ ಭಾಗವಹಿಸಿದ್ದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಡವಾಗಿ ಯಾತ್ರೆಗೆ ಜೊತೆಗೂಡಿದರು. ಸಂಜೆ ರಾಯಚೂರು ನಗರ ಭಾಗದಿಂದ ಯಾತ್ರೆ ಪುನರಾಂಭವಾಗಲಿದ್ದು, ಗುಂಜ್ ವೃತ್ತದಲ್ಲಿ ಅಂತ್ಯವಾಗಲಿದೆ. ರಾತ್ರಿ ರಾಯಚೂರಿನ ಯೆಗನೂರಿನಲ್ಲಿ ವಿಶ್ರಾಂತಿ ಪಡೆಯಲಿದೆ.

ಬೆಂಗಳೂರು : ಮನೆಯ ಟೆರೆಸ್‍ನಲ್ಲಿ ವ್ಯಕ್ತಿಯ ಭೀಕರ ಹತ್ಯೆ

ಇಂದು ನಿವೃತ್ತ ಯೋಧರು ಪಾದಯಾತ್ರೆಯಲ್ಲಿ ಸೇನಾ ಸಮವಸ್ತ್ರ ಧರಿಸಿ ಭಾಗವಹಿಸುವ ಮೂಲಕ ಗಮನ ಸೆಳೆದರು. ರಾಷ್ಟ್ರ ಧ್ವಜ ಹಿಡಿದು ಬೆಂಬಲ ವ್ಯಕ್ತ ಪಡಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರೈತ ಗೆದ್ದರೆ ದೇಶ ಗೆದ್ದಂತೆ ಎಂಬ ಬರಹ ಇರುವ ಹಸಿರು ಬಣ್ಣದ ಟಿ-ಶರ್ಟ್ ಧರಿಸಿದ್ದರು. ನಿವೃತ್ತ ಯೋಧರ ಜೊತೆ ಹೆಜ್ಜೆ ಹಾಕಿದ ಡಿ.ಕೆ.ಶಿವಕುಮಾರ್ ಯಾತ್ರೆಯ ಮುಂದೆ ಸಂಗೀತ ವಾದ್ಯಗಳೊಂದಿಗೆ ಸಾಗುತ್ತಿದ್ದ ಬಾಂಡ್ ತಂಡದೊಂದಿಗೆ ಬೆರೆತರು.

ಬಾಂಡ್ ಕಲಾವಿದರಿಂದ ವಾದ್ಯ ಪರಿಗಕರಳನ್ನು ಪಡೆದು ನುಡಿಸಿದರು. ಡ್ರಮ್ ಬಾರಿಸಿದರು. ನಿವೃತ್ತ ಯೋಧರೊಂದಿಗೆ ರಾಷ್ಟ್ರ ಧ್ವಜ ಹಿಡಿದು ಸಂಭ್ರಮಿಸುವ ಮೂಲಕ ಭಿನ್ನ ವೇಶಗಳಲ್ಲಿ ಕಾಣಿಸಿಕೊಂಡರು.

ನಿನ್ನೆ ಆಂಧ್ರ ಪ್ರದೇಶದಿಂದ ಕರ್ನಾಟಕ ಪ್ರವೇಶಿಸಿದ ಯಾತ್ರೆ ನಾಳೆ ರಾಯಚೂರಿನ ಯರಮರಸ್‍ನಿಂದ ಶುರುವಾಗಿ ತೆಲಂಗಾಣದತ್ತ ಮುಂದುವರೆಯಲಿದೆ. ಸೆ.30ರಿಂದ ಈವರೆಗೂ ಸುಮಾರು 25ಕ್ಕೂ ಹೆಚ್ಚು ದಿನ ರಾಹುಲ್‍ಗಾಂಧಿ ಕರ್ನಾಟಕದಲ್ಲಿ 570 ಕಿಲೋ ಮೀಟರ್ ಪಾದಯಾತ್ರೆ ನಡೆಸಿದ್ದಾರೆ. ಚಾಮರಾಜ ನಗರ, ಮೈಸೂರು, ಮಂಡ್ಯ, ತುಮಕೂರು, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಸಂಚರಿಸಿದ್ದಾರೆ. ಸುಮಾರು 21ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್‍ಗೆ ಯಾತ್ರೆ ಬಲ ನೀಡಿದೆ.

ಜನ ಸಾಮಾಮಾನ್ಯರು ರಾಹುಲ್ ಗಾಂಧಿಯನ್ನು ಕಣ್ತುಂಬಿಕೊಂಡು ಹರಸಿ, ಹಾರೈಸಿದ್ದಾರೆ. ಸಾವಿರಾರು ಜನ ಯಾತ್ರೆಯಲ್ಲಿ ಹೆಜ್ಜೆ ಹಾಕಿ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಯಾತ್ರೆ ನಡುವೆ ಕೋವಿಡ್ ಸಂತ್ರಸ್ಥರು, ನೇಕಾರರು, ಯುವಕರು, ಮಹಿಳೆಯರು, ರೈತರು, ಶ್ರಮಿಕರು, ಕ್ರೀಡಾಪಟುಗಳು, ಸಣ್ಣ ಉದ್ಯಮಿಗಳ ಸೇರಿದಂತೆ ವಿವಿಧ ವರ್ಗಗಳ ಜೊತೆ ರಾಹುಲ್‍ಗಾಂಧಿ ಸುಮಾರು 20ಕ್ಕೂ ಹೆಚ್ಚು ಸಂವಾದಗಳನ್ನು ನಡೆಸಿದ್ದಾರೆ. ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ಸೇರಿದಂತೆ ಮಂಡ್ಯಹಾಗೂ ಇತರ ಕಡೆ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಒಂದು ಪತ್ರಿಕಾಗೋಷ್ಠಿ ನಡೆಸಿದ್ದಾರೆ.

ಏಷ್ಯಾ ಕಪ್ ಪಂದ್ಯದ ಭವಿಷ್ಯ ಬಿಸಿಸಿಐ ನಿರ್ಧರಿಸಲಿದೆ ; ರೋಹಿತ್

ಯಾತ್ರೆಯಲ್ಲಿ ಸಿದ್ದರಾಮಯ್ಯ ಅವರ ಕೈ ಹಿಡಿದು ಓಡಿದ್ದು, ಡಿ.ಕೆ.ಶಿವಕುಮಾರ್ ರಾಷ್ಟ್ರ ಧ್ವಜ ಹಿಡಿದು ಓಡಿದಾಗ ಅವರ ಜೊತೆಯಾಗಿ ಹೆಜ್ಜೆ ಹಾಕಿದ್ದು ಯಾತ್ರೆಯ ಹೈಲೇಟ್‍ಗಳಾಗಿವೆ. , ಹತ್ಯೆಯಾದ ಪತ್ರಕರ್ತೆ ಗೌರಿ ಲಂಕೇಶ್ ಅವರ ತಾಯಿ ಇಂದಿರಾ ಲಂಕೇಶ್, ಸಹೋದರಿ ಕವಿತಾ ಲಂಕೇಶ್ ಯಾತ್ರೆಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತ ಪಡಿಸಿದರು.

ರಾಹುಲ್‍ಗಾಂಧಿಯವರ ತಾಯಿ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಡ್ಯದಲ್ಲಿ ಯಾತ್ರೆಯಲ್ಲಿ ಜೊತೆಗೂಡಿ ಬಲ ತುಂಬಿದ್ದರು. ಕರ್ನಾಟಕದ ಯಾತ್ರೆ ನಡುವೆ ಆಯುಧ ಪೂಜೆ, ವಿಜಯ ದಶಮಿ ಬಂದಿದ್ದರಿಂದ ಎರಡು ದಿನ ವಿಶ್ರಾಂತಿ ಪಡೆದ ರಾಹುಲ್‍ಗಾಂಧಿ ತಾಯಿ ಸೋನಿಯಾ ಗಾಂಧಿ ಜೊತೆ ಬನ್ನೇರುಘಟ್ಟ ಅಭಯಾರಾಣ್ಯದಲ್ಲಿ ಸಫಾರಿ ನಡೆಸಿದರು. ಆ ವೇಳೆ ಆನೆ ಮರಿಯೊಂದು ಗಾಯಗೊಂಡಿರುವುದು, ಅದನ್ನು ರಕ್ಷಿಸಿಕೊಳ್ಳಲು ತಾಯಿ ಆನೆ ಪರದಾಡುತ್ತಿರುವುದನ್ನು ಗಮನಿಸಿ, ಆನೆ ಮರಿಗೆ ಚಿಕಿತ್ಸೆ ಕೊಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದರು. ಅದಕ್ಕೆ ಮುಖ್ಯಮಂತ್ರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ವಿಶೇಷವಾಗಿತ್ತು.

ಚುನಾವಣೆ ಆಯೋಗದ ಸೂಚನೆ ಪಾಲಿಸದ ಗುಜರಾತ್ ಅಧಿಕಾರಿಗಳು

ರಾಹುಲ್‍ಗಾಂಧಿ ಅವರ ಸಹೋದರಿ ಪ್ರಿಯಾಂಕ ಗಾಂಧಿ ರಾಯಚೂರಿನಲ್ಲಿ ಯಾತ್ರೆಗೆ ಕೂಡಿಕೊಳ್ಳುತ್ತಾರೆ ಎಂದು ಹೇಳಲಾಗಿತ್ತಾದರೂ ಅದರ ಲಕ್ಷಣಗಳು ಕಂಡು ಬರುತ್ತಿಲ್ಲ. ಉಳಿದಂತೆ ಯಾತ್ರೆಯಲ್ಲಿ ರಾಹುಲ್‍ಗಾಂಧಿಯವರ ಮಾನವೀಯ ಮತ್ತು ಸರಳ ಬದುಕನ್ನು ಅನಾವರಣ ಮಾಡುವ, ತನ್ಮೂಲಕ ಈವರೆಗೂ ಕೃತಕವಾಗಿ ಸೃಷ್ಟಿಯಾಗಿದ್ದ ಇಮೇಜ್ ಅನ್ನು ಬದಲಾವಣೆ ಮಾಡುವ ಯತ್ನಗಳು ಸಾಕಷ್ಟು ನಡೆದಿವೆ. ಜನ ಸಾಮಾನ್ಯರ ಜೊತೆ ರಾಹುಲ್‍ಗಾಂಧಿ ಬೆರೆಯುವುದು, ಜನರ ಕಷ್ಟಗಳನ್ನು ಆಲಿಸುವ ವೇಳೆ ಅವರ ಸಹನೆ ಜನರ ಮೆಚ್ಚುಗೆಗೆ ಕಾರಣವಾಗಿದೆ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಡೆಯುತ್ತಿರುವ ಯಾತ್ರೆ ಈವರೆಗೂ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಸಂಚರಿಸಿದೆ. ಕರ್ನಾಟಕದ ಹಾದಿ ನಡುವೆ ಆಂಧ್ರ ಪ್ರದೇಶಕ್ಕೂ ಪ್ರವೇಶಿಸಿ ನಾಲ್ಕು ದಿನ ಅಲ್ಲಿ ಸುತ್ತಾಡಿ ಬಂದಿದೆ. ಯಾತ್ರೆಯ ಕೊನೆಯಲ್ಲಿ ಆಯಾ ರಾಜ್ಯಗಳನ್ನು ಉದ್ದೇಶಿಸಿ ಭಾವನಾತ್ಮಕ ಪತ್ರ ಬರೆಯುವ ಮೂಲಕ ರಾಹುಲ್ ಗಮನ ಸೆಳೆದಿದ್ದಾರೆ. ಹಾಗಾಗಿ ನಾಳೆ ಕರ್ನಾಟಕದ ಕುರಿತು ಪತ್ರ ಬರೆಯುವ ನಿರೀಕ್ಷೆಗಳಿವೆ.

Articles You Might Like

Share This Article