ಪಾಣಿಪಟ್,ಜ.6- ತಾಯಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಹೊರತಾಗಿಯೂ ರಾಹುಲ್ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಮುಂದುವರೆಯುವ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದ್ದಾರೆ.
ಹೊಸ ವರ್ಷಾಚರಣೆಯ ವೇಳೆ 9 ದಿನಗಳ ಬಿಡುವಿನ ಬಳಿಕ ಜನವರಿ ಮೂರರಿಂದ ಎರಡನೇ ಹಂತ ಪಾದಯಾತ್ರೆ ಆರಂಭವಾಗಿದೆ. ದೆಹಲಿ, ಉತ್ತರ ಪ್ರದೇಶದಲ್ಲಿ ನಡೆದ ಯಾತ್ರೆ ನಿನ್ನೆ ಸಂಜೆ ಹರ್ಯಾಣ ರಾಜ್ಯ ಪ್ರವೇಶಿಸಿದೆ.
ಈ ನಡುವೆ ರಾಹುಲ್ಗಾಂಧಿ ಅವರ ತಾಯಿ ಸೋನಿಯಾಗಾಂಧಿಯವರಿಗೆ ಸೋಂಕಿನಿಂದಾಗಿ ಉಸಿರಾಟದ ಸಮಸ್ಯೆ ಹೆಚ್ಚಾಗಿದ್ದರಿಂದ ಬುಧವಾರ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆ ಸಂಜೆ ಯಾತ್ರೆ ವಿರಮಿಸಿದ ಬಳಿಕ ರಾಹುಲ್ಗಾಂಧಿ ದೆಹಲಿಗೆ ತೆರಳಿ ತಾಯಿಯನ್ನು ಭೇಟಿ ಮಾಡಿದರು.
ಗುಜರಿ ಸೇರಲಿವೆ 990 ಬಿಎಂಟಿಸಿ ಬಸ್ಗಳು..!
ನಂತರ ಇಂದು ಬೆಳಗ್ಗೆ ವಾಪಾಸ್ ಬಂದು ಯಾತ್ರೆ ಕೂಡಿಕೊಂಡರು. ಹರ್ಯಾಣದ ಪಾಣಿಪಟ್ನ ಸೋನಾಲಿ ಗಡಿ ಭಾಗದಿಂದ ಯಾತ್ರೆ ಪುನರ್ ಆರಂಭವಾಯಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಮಧ್ಯಾಹ್ನ ಪಾಣಿಪಟ್ನಲ್ಲಿ ನಡೆಯುವ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಭೂಪೇಂದ್ರ ಹೂಡಾ ಸೇರಿದಂತೆ ಹಲವು ಹಿರಿಯ ಕಾಂಗ್ರೆಸ್ ನಾಯಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಂದ ಮುಂದುವರೆಯುವ ಯಾತ್ರೆ ಹರ್ಯಾಣದ ಕರ್ನಲ್, ಕುರುಕ್ಷೇತ್ರ, ಅಂಬಾಲ ಜಿಲ್ಲೆಗಳಲ್ಲಿ ಒಟ್ಟು 130 ಕಿಲೋ ಮೀಟರ್ ಸಂಚರಿಸಲಿದೆ. ನಂತರ ಪಂಜಾಬ್ ಮಾರ್ಗವಾಗಿ ಮುನ್ನೆಡೆಯಲಿದೆ.
ಇದಕ್ಕೂ ಮೊದಲು ಡಿಸೆಂಬರ್ 21ರಿಂದ 23ರ ನಡುವೆ ಮೊದಲ ಹಂತದಲ್ಲಿ ಯಾತ್ರೆ ಹರ್ಯಾಣ ನುಹ್, ಗುರುಗ್ರಾಮ್, ಫರಿದಾಬಾದ್ ಜಿಲ್ಲೆಗಳಲ್ಲಿ ಸಂಚರಿಸಿತ್ತು. ಅನಂತರ ಉತ್ತರ ಪ್ರದೇಶ ಮಾರ್ಗವಾಗಿ ದೆಹಲಿ ಪ್ರವೇಶಿಸಿತ್ತು. ಹೊಸ ವರ್ಷಾಚರಣೆಯ ಬಳಿಕ ಎರಡನೇ ಹಂತದಲ್ಲಿ ಪುನರ್ ಆರಂಭವಾಗಿದೆ.
ಭಾರತ-ನೇಪಾಳ ಗಡಿಯಲ್ಲಿ ನಾಲ್ವರು ಡ್ರಗ್ಸ್ ಕಳ್ಳಸಾಗಣೆದಾರರ ಬಂಧನ
ಜನವರಿ 7ರಂದು ಕನ್ಯಾಕುಮಾರಿಯಿಂದ ಆರಂಭವಾಗಿರುವ ಯಾತ್ರೆ ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ ರಾಜ್ಯಗಳನ್ನು ಹಾದು ಬಂದಿದೆ. ಪಂಜಾಬ್ ಮೂಲಕ ಫೆಬ್ರವರಿ ವೇಳೆಗೆ ಜಮ್ಮು-ಕಾಶ್ಮೀರ ಪ್ರವೇಶಿಸಲಿದೆ.
Rahul Gandhi, Bharat Jodo Yatra, Re-Enter, Haryana,