ಬಿಜೆಪಿ ಕಚೇರಿಯತ್ತ ಫ್ಲೈಯಿಂಗ್ ಕಿಸ್ ರವಾನಿಸಿದ ರಾಹುಲ್

Social Share

ಜಲ್ವಾರ್,ಡಿ. 6- ಭಾರತ್‍ಜೊಡೊ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಕಚೇರಿ ಮೇಲೆ ನಿಂತು ತಮ್ಮನ್ನು ಗಮನಿಸುತ್ತಿದ್ದವರತ್ತ ಹೂ ಮುತ್ತು ಹಾರಿಸುವ ಮೂಲಕ ಗಮನ ಸೆಳೆದಿದ್ದಾರೆ.

ರಾಜಸ್ಥಾನದಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೊಡೋ ಯಾತ್ರೆ ನಡೆಯುತ್ತಿದೆ. ನಿನ್ನೆ ರಾತ್ರಿ ಖೇಲ್ ಸಂಕುಲ್ ನಲ್ಲಿ ತಂಗಿದ್ದ ಇಂದು ಬೆಳಗ್ಗೆ ಯಾತ್ರೆಯನ್ನು ಪುನಾರಾರಂಭಿಸಿದರು.

ಯಾತ್ರೆ ಜಲ್ವಾರ್ ನಗರದ ಬಿಜೆಪಿ ಕಚೇರಿ ಮುಂದೆ ಹಾದು ಹೋಗುತ್ತಿತ್ತು. ಈ ವೇಳೆ ಬಿಜೆಪಿಯ ಕಚೇರಿಯ ಮೇಲೆ ನಿಂತು ರಾಹುಲ್ ಗಾಂಧಿಯವರ ಯಾತ್ರೆಯನ್ನು ಜನ ವೀಕ್ಷಿಸುತ್ತಿದ್ದರು. ಅವರತ್ತ ಗಾಳಿಯಲ್ಲಿ ಹೂ ಮುತ್ತನ್ನು ತೇಲಿ ಬಿಡುವ ಮೂಲಕ ರಾಹುಲ್‍ಗಾಂಧಿ ಗಮನ ಸೆಳೆದಿದ್ದಾರೆ.

ಹೈಕಮಾಂಡ್ ಚಿತ್ತ ಕರ್ನಾಟಕದತ್ತ, ಬಿಜೆಪಿಯಲ್ಲಿ ಭಾರೀ ಬದಲಾವಣೆ ಸಾಧ್ಯತೆ

ಸಂಘ ಪರಿವಾರ ಮತ್ತು ಬಿಜೆಪಿ ಯವರು ಜೈ ಸಿಯಾರಾಮ್ ಮತ್ತು ಹೇ ರಾಮ್ ಎಂದು ಏಕೆ ಘೋಷಣೆ ಕೂಗುವುದಿಲ್ಲ ಎಂದು ನಿನ್ನೆಯಷ್ಟೇ ಪ್ರಶ್ನಿಸಿದ ರಾಹುಲ್‍ಗಾಂಧಿ ಇಂದು ತಮ್ಮ ನಡೆಯ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.

ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಿಸುವಂತೆ ಒತ್ತಾಯ

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋಟ್, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಗೋವಿಂದ ಸಿಂಗ್, ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲೊಟ್ ಮತ್ತು ಹಲವು ಶಾಸಕರು ಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

Rahul Gandhi, Blew Kisses, Yatra, Crossed, BJP Office,

Articles You Might Like

Share This Article