ಠಾಕ್ರೆ ಬಣ ಮತ್ತು ಕಾಂಗ್ರೆಸ್ ನಡುವೆ ಮತ್ತೆ ಪ್ಯಾಚಪ್

Social Share

ನವದೆಹಲಿ,ನ.21- ವೀರ ಸಾವರ್ಕರ್ ಬಗ್ಗೆ ರಾಹುಲ್‍ಗಾಂಧಿ ಮಾಡಿದ ಆರೋಪದ ನಂತರ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಒಡಕು ಮೂಡುತ್ತಿದೆ ಎಂದು ಬಿಂಬಿಸಲಾಗುತ್ತಿದ್ದ ಸಂದರ್ಭದಲ್ಲೇ ಎರಡು ಪಕ್ಷಗಳ ನಡುವೆ ಯಾವುದೆ ಬಿರುಕು ಮೂಡಿಲ್ಲ ಎಂಬ ಭಾವನೆಯನ್ನು ಸಂಜಯ್ ರಾವುತ್ ಮೂಡಿಸುವ ಯತ್ನ ನಡೆಸಿದ್ದಾರೆ.

11 0 ದಿನಗಳ ಕಾಲ ಜೈಲಿನಲ್ಲಿದ್ದ ನನಗೆ ರಾಹುಲ್ ಗಾಂಧಿ ಅವರು ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಅವರ ಔದಾರ್ಯ ಎಲ್ಲರೂ ಮೆಚ್ಚುವಂತದ್ದು ಎಂದು ಸಂಜಯ್ ರಾವುತ್ ಟ್ವಿಟ್ ಮಾಡಿದ್ದಾರೆ.

ಕೆಲವು ವಿಷಯಗಳ ಬಗ್ಗೆ ಬಲವಾದ ಭಿನ್ನಾಭಿಪ್ರಾಯಗಳ ನಡುವೆಯೂ, ರಾಜಕೀಯ ಸಹೋದ್ಯೋಗಿಯನ್ನು ವಿಚಾರಿಸುವುದು ಮಾನವೀಯತೆಯ ಸಂಕೇತವಾಗಿದೆ. ಭಾರತ್ ಜೋಡೋ ರ್ಯಾಲಿ ನಡುವೆಯೂ ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರುವ ರಾಹುಲ್ ಅವರ ನಡೆಯನ್ನು ಯಾರೇ ಆಗಲಿ ಮೆಚ್ಚಬೇಕು ಎಂದು ಅವರು ಬರೆದುಕೊಂಡಿದ್ದಾರೆ.

ಸರಣಿ ಅಪಘಾತ: 38 ಮಂದಿಗೆ ಗಾಯ, 40 ವಾಹನಗಳು ಜಖಂ

ಹಿಂದುತ್ವದ ಐಕಾನ್ ಆಗಿರುವ ವೀರ್ ಸಾವರ್ಕರ್ ಅವರನ್ನು ಟೀಕಿಸಿದರೆ ನಮ್ಮ ಸಂಬಂಧ ಮುಂದುವರೆಯುವುದಿಲ್ಲ ಎಂದು ಠಾಕ್ರೆ ತಂಡ ಎಚ್ಚರಿಸಿತ್ತು. ಇದಾದ ಕೆಲ ದಿನಗಳಲ್ಲೇ ಸಂಜಯ್ ರಾವುತ್ ಅವರು ರಾಹುಲ್ ಅವರ ಗುಣಗಾನ ಮಾಡಿರುವುದು ಎರಡು ಪಕ್ಷಗಳ ನಡುವೆ ಪ್ಯಾಚ್ ಆಪ್ ಆಗುವ ಸಾಧ್ಯತೆಗಳಿವೆ ಎಂದು ಭಾವಿಸಲಾಗುತ್ತಿದೆ.

ಕಳೆಗಟ್ಟಿದ ಕಡಲೆಕಾಯಿ ಪರಿಷೆ, ಹರಿದುಬಂದ ಜನಸಾಗರ

ವೀರ ಸಾವರ್ಕರ್ ನಮಗೆ ಯಾವಾಗಲೂ ಐಕಾನ್ ಆಗಿರುತ್ತಾರೆ ಅಂತಹ ವ್ಯಕ್ತಿಯನ್ನು ಕೆಟ್ಟ ಭಾವನೆಯಿಂದ ನೋಡುವುದನ್ನು ನಾವು ಸಹಿಸುವುದಿಲ್ಲ. ಸಾವರ್ಕರ್ ವಿಚಾರದಲ್ಲಿ ರಾಹುಲ್ ಗಾಂ ಆ ರೀತಿ ಮಾತನಾಡಬಾರದಿತ್ತು ಎನ್ನುವುದನ್ನು ರಾವುತ್ ಉಲ್ಲೇಖಿಸಿದ್ದಾರೆ.

Rahul Gandhi, calls, Sanjay Raut, enquire, health,

Articles You Might Like

Share This Article