ನವದೆಹಲಿ, ಫೆ.5- ಬಾಲಕಿಯರ ಶಿಕ್ಷಣದಲ್ಲಿ ಹಿಜಾಬ್‍ಅನ್ನು ತಡೆಗೋಡೆಯಾಗಿ ತರುವ ಮೂಲಕ ದೇಶವು ತನ್ನ ಪುತ್ರಿಯರ ಭವಿಷ್ಯವನ್ನು ಕಸಿದುಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಧುರೀಣ ರಾಹುಲ್‍ಗಾಂಧಿ ಇಂದು ಹೇಳಿದ್ದಾರೆ.
ಕರ್ನಾಟಕದ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ನಿರಾಕರಣೆಗೆ ಒಳಗಾಗುತ್ತಿರುವ ಹಿಜಾಬ್ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಯರ ಪರ ನಿಂತಿರುವ ರಾಹುಲ್ ಸರಸ್ವತಿಯು ಯಾರನ್ನೂ ಭೇದ-ಭಾವದಿಂದ ಕಾಣುವುದಿಲ್ಲ ಮತ್ತು ಎಲ್ಲರಿಗೂ ಜ್ಞಾನ ಕೊಡುತ್ತಾಳೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶಿಕ್ಷಣದ ಹಾದಿಯಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿರುವ ಮೂಲಕ ನಾವು ಭಾರತ ಮಾತೆಯ ಪುತ್ರಿಯರ ಭವಿಷ್ಯವನ್ನು ಕಸಿದುಕೊಳ್ಳುತ್ತಿದ್ದೇವೆ. ಇಂದು ಸರಸ್ವತಿ ಪೂಜೆ. ಸರಸ್ವತಿ ಮಾತೆಯು ಎಲ್ಲರಿಗೂ ಜ್ಞಾನ ನೀಡುತ್ತಾಳೆ. ಭೇದ-ಭಾವ ತೋರುವುದಿಲ್ಲ ಎಂದು ರಾಹುಲ್ ಟ್ವಿಟ್ಟರ್‍ನಲ್ಲಿ ಹೇಳಿದ್ದಾರೆ.
