ಶರದ್ ಯಾದವ್ ನಿವಾಸಕ್ಕೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದ ರಾಹುಲ್‍

Social Share

ನವದೆಹಲಿ,ಜ.13- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಕೇಂದ್ರದ ಮಾಜಿ ಸಚಿವ ಶರದ್ ಯಾದವ್ ಅವರ ನಿವಾಸಕ್ಕೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿದರು. 75 ವರ್ಷದ ಹಿರಿಯ ರಾಜಕಾರಣಿ ಶರದ್ ಯಾದವ್ ಗುರುಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

ದೀರ್ಘಕಾಲದವರೆಗೆ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಆರ್‍ಜೆಡಿ ನಾಯಕ ನಿಯಮಿತವಾಗಿ ಡಯಾಲಿಸಿಸ್ ಒಳಗಾಗುತ್ತಿದ್ದರು. ಶರದ್ ಯಾದವ್‍ರ ನಿವಾಸಕ್ಕೆ ಭೇಟಿ ನೀಡಿದ್ದ ರಾಹುಲ್‍ಗಾಂಧಿ, ಗೌರವ ಸಲ್ಲಿಸಿ, ದುಃಖತಪ್ತ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಶರದ್ ಯಾದವ್‍ರಿಂದ ತಾವು ರಾಜಕೀಯವಾಗಿ ಸಾಕಷ್ಟು ಕಲಿತಿದ್ದಾಗಿ ತಿಳಿಸಿದರು.

ಬಿಬಿಎಂಪಿ ಖಜಾನೆ ಖಾಲಿಯಾಯ್ತಾ..? ಸಾಲಕ್ಕಾಗಿ ಬ್ಯಾಂಕ್ ಮೊರೆ

ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್‍ಗಾಂಧಿ, ಶರದ್ ಯಾದವರೊಂದಿಗೆ ತಾವು ಕಾರು ಪ್ರಯಾಣ ಮಾಡುತ್ತಲೇ ಸಂವಾದ ನಡೆಸಿದ್ದನ್ನು, ಅಂದಿನಿಂದ ಅವರೊಂದಿಗೆ ಆಪ್ತ ಸಂಬಂಧ ಆರಂಭಿಸಿದ್ದನ್ನು ಸ್ಮರಿಸಿಕೊಂಡರು.

ವಿರೋಧ ಪಕ್ಷದ ನಾಯಕರಾಗಿದ್ದ ವೇಳೆ, ತಮ್ಮ ಅಜ್ಜಿ ಇಂದಿರಾ ಗಾಂಧಿ ಅವರ ವಿರುದ್ಧ ರಾಜಕೀಯ ಹೋರಾಟ ನಡೆಸಿದ್ದರು. ಅದರ ಹೊರತಾಗಿ ಅವರಿಬ್ಬರ ನಡುವೆ ಗೌರವ ಮತ್ತು ಪ್ರೀತಿಯ ಸಂಬಂಧ ಇತ್ತು. ಶರದ್‍ರವರು ರಾಜಕೀಯದಲ್ಲಿದ್ದರೂ ಯಾರನ್ನು ಕಳೆದುಕೊಳ್ಳಲಿಲ್ಲ. ರಾಜಕೀಯದಲ್ಲಿದ್ದವರಿಗೆ ಇದು ಪಾಠ. ವಿನಮ್ರ ಸ್ವಭಾವದ ವ್ಯಕ್ತಿಯಾಗಿದ್ದರು. ದೇಶಕ್ಕೆ ಅವರ ಕೊಡುಗೆ ಸದಾ ಸ್ಮರಣೀಯವಾಗಿದೆ ಎಂದು ಗಾಂಧಿ ಹೇಳಿದರು.

ಫುಡ್ ಡಿಲೇವರಿ ಯುವಕನಿಗೆ ಚಾಕು ತೋರಿಸಿ ದರೋಡೆ: ಮೂವರ ಬಂಧನ

ಪಂಜಾಬ್‍ನಲ್ಲಿ ನಡೆಯಬೇಕಿದ್ದ ಭಾರತ್ ಜೋಡೋ ಯಾತ್ರೆಯನ್ನು ಕೈ ಬಿಟ್ಟು ರಾಹುಲ್ ಶರದ್ ಯಾದವ್‍ರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಇಂದು ಯಾತ್ರೆಗೆ ಬಿಡುವು ನೀಡಲಾಗಿದೆ.

rahul gandhi, condoles, demise, Sharad Yadav,

Articles You Might Like

Share This Article