ರಾಹುಲ್‍ಗಾಂಧಿ ನಿಂದಿಸಿದ ಅನಿಲ್ ಶೆಟ್ಟಿ ಬಂಧನಕ್ಕೆ ಕಾಂಗ್ರೆಸ್ ಆಗ್ರಹ

Social Share

ಬೆಂಗಳೂರು,ಡಿ.23- ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಮುಖಂಡ ಅನಿಲ್ ಶೆಟ್ಟಿ ಬಂಧನಕ್ಕೆ ಒತ್ತಾಯಿಸಿ ಸುದ್ದಗುಂಟೆ ಪೊಲೀಸ್ ಠಾಣೆ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಮುಖಂಡ ರಾಹುಲ್‍ಗಾಂಧಿ ಅವರಿಗೆ ಏನು ಯೋಗ್ಯತೆ ಇದೆ ಎಂದು ಏರುಧ್ವನಿಯಲ್ಲಿ ನಿಂದಿಸಿ ಅಪಮಾನ ಮಾಡಿರುವ ಬಿಜೆಪಿ ಯುವ ಮೋರ್ಚಾ ಕೋಶಾಧ್ಯಕ್ಷ ಅನಿಲ್ ಶೆಟ್ಟಿ ಅವರು ಕಾಂಗ್ರೆಸ್ ಕಾರ್ಯಕರ್ತ ಲೋಕೇಶ್ ಎಂಬುವರ ಮೇಲೆ ಹಲ್ಲೆ ಪ್ರಯತ್ನ ಕೂಡ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಬೆಂಗಳೂರು ವಿವಿ ಆವರಣದಲ್ಲಿ ಮಾಸ್ಕ್ ಕಡ್ಡಾಯ

ಆನಿಲ್ ಶೆಟಿ ಅವರ ದುರ್ನಡತೆ ವಿರುದ್ಧ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಮ್ಮ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವವರವನ್ನು ಪೊಲೀಸರು ಇನ್ನೂ ಬಂಧಿಸಿಲ್ಲ.

ಹೀಗಾಗಿ ಕೂಡಲೆ ಅನಿಲ್ ಶೆಟ್ಟಿ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಪೊಲೀಸ್ ಠಾಣೆ ಮುಂಭಾಗ ಮಾಜಿ ಮಹಾಪೌರ ಮಂಜುನಾಥ ರೆಡ್ಡಿ, ಸ್ಥಳೀಯ ಮಾಜಿ ಪಾಲಿಕೆ ಸದಸ್ಯರುಗಳಾದ ಜಿ ಮಂಜುನಾಥ, ಜಿ ಎನ್ ಆರ್ ಬಾಬು, ವೆಂಕಟೇಶ್ ಬಾಲು, ಪದ್ಮಾವತಿ ಮತ್ತು ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು, ಪಕ್ಷದ ಹಿರಿಯ ಮುಖಂಡರುಗಳು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Rahul Gandhi, Congress workers, protest,

Articles You Might Like

Share This Article