ರಾಹುಲ್‍ಗಾಂಧಿ ಬೆನ್ನು ಬಿದ್ದ ದೆಹಲಿ ಪೊಲೀಸರು

Social Share

ನವದೆಹಲಿ,ಮಾ.19- ಮಹಿಳೆಯೊಬ್ಬರಿಗೆ ನಿರಂತರವಾದ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ಪ್ರಕರಣವೊಂದನ್ನು ಉಲ್ಲೇಖಿಸಿ ನೀಡಿದ ಹೇಳಿಕೆ ಆಧರಿಸಿ ಮಾಹಿತಿ ಕಲೆ ಹಾಕಲು ದೆಹಲಿ ಪೊಲೀಸರು ಬೆನ್ನು ರಾಹುಲ್‍ ಬಿದ್ದಿದ್ದಾರೆ.

ಸತತವಾಗಿ ಮೂರನೇ ಬಾರಿಗೂ ಪೊಲೀಸರು ರಾಹುಲ್‍ಗಾಂಧಿಯನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕಲು ಯತ್ನಿಸಿದ್ದು, ನೋಟಿಸ್ ಕೂಡ ನೀಡಿದ್ದಾರೆ. ದೇಶಾದ್ಯಂತ ಸಾವಿರಾರು ಕಿಲೋ ಮೀಟರ್ ದೂರದ ಭಾರತ್ ಜೋಡೋ ಯಾತ್ರೆ ಪಾದ ಯಾತ್ರೆ ಜನವರಿ 30ರಂದು ಕಾಶ್ಮೀರದಲ್ಲಿ ಸಮಾರೋಪಗೊಂಡಿತ್ತು.

ಆ ವೇಳೆ ಮಾತನಾಡಿದ ರಾಹುಲ್ ಗಾಂಧಿಯವರ ಮಹಿಳೆಯರ ಮೇಲೆ ಇನ್ನೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದಿದ್ದರು. ಯಾತ್ರೆಯ ನಡುವೆ ತಮ್ಮನ್ನು ಭೇಟಿ ಮಾಡಿದ ಮಹಿಳೆಯೊಬ್ಬರು ತಮ್ಮ ಮೇಲೆ ಇನ್ನೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.

ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ ಸಾಧ್ಯತೆ

ಹೇಳಿಕೆ ನೀಡಿ 45 ದಿನಗಳು ಕಳೆದ ಬಳಿಕ ದೆಹಲಿ ಪೊಲೀಸರು ಈಗ ಮಾಹಿತಿ ಕಲೆ ಹಾಕಲು ಬೆನ್ನು ಬಿದ್ದಿದ್ದಾರೆ. ಮಾರ್ಚ್ 16ರಂದು ಮೊದಲ ಬಾರಿಗೆ ರಾಹುಲ್ ಮನೆಗೆ ಭೇಟಿ ನೀಡಿದ್ದ ಪೊಲೀಸರು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಕುರಿತು ಮಾಹಿತಿ ಪಡೆದುಕೊಳ್ಳಲು ಯತ್ನಿಸಿದರು. ಮಾರನೇ ದಿನವೂ ಯತ್ನ ಪೊಲೀಸರು ರಾಹುಲ್ ಮನೆಗೆ ಭೇಟಿ ನೀಡಿದ್ದರು. ಆದರೆ ರಾಹುಲ್‍ಗಾಂ ಪೊಲೀಸರುನ್ನು ಭೇಟಿ ಮಾಡಿಲ್ಲ ಎಂದು ಹೇಳಲಾಗಿದೆ.

ದೆಹಲಿಯ ವಿಶೇಷ ಪೊಲೀಸ್ ಆಯುಕ್ತ ಸಾಗರ್ ಪ್ರೀತ್ ಹೂಡಾ ಅವರು ರಾಹುಲ್‍ಗಾಂ ಮನೆಗೆ ಪದೇ ಪದೇ ಭೇಟಿ ನೀಡುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಆಕ್ಷೇಪಿಸಿದೆ. ದೂರು ದಾಖಲಾಗದೆ ಪೊಲೀಸರು ಸ್ವಯಂಧಿ ಪ್ರೇರಿತವಾಗಿ ಮಾಹಿತಿ ಪಡೆಯಲು ನೋಟಿಸ್ ನೀಡಲು ಸಾಧ್ಯವಿಲ್ಲ ಎಂದು ಹೇಳಲಿದೆ. ಪೊಲೀಸರನ್ನು ಬಳಸಿಕೊಂಡು ಕಿರುಕುಳ ನೀಡುವ ಯತ್ನವನ್ನು ಸರ್ಕಾರ ಮಾಡುತ್ತಿದೆ.

ರಾಹುಲ್‍ಗಾಂಧಿ ಹೇಳಿಕೆಯನ್ನು ಆಧರಿಸಿ ಸಂತ್ರಸ್ಥೆಯ ಮಾಹಿತಿ ಪಡೆಯಲು ಸಾಧ್ಯವಿಲ್ಲ. ದುರುದ್ದೇಶಪೂರ್ವಕವಾಗಿ ಈ ಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಪಕ್ಷದ ನಾಯಕರು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಾಗರ್‍ಪ್ರೀತ್, ಇದೊಂದು ಗಂಭೀರ ಪ್ರಕರಣ.

ಇಕ್ವಿಡಾರ್‌ನಲ್ಲಿ ಪ್ರಬಲ ಭೂಕಂಪ, 15 ಮಂದಿ ಸಾವು

ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯಕೊಡಿಸುವುದು ನಮ್ಮ ಕರ್ತವ್ಯ. ಅದಕ್ಕಾಗಿ ಮಾಹಿತಿ ಕಲೆ ಹಾಕಲು ಯತ್ನಿಸಲಾಗುವುದು ಎಂದಿದ್ದಾರೆ. ಪೊಲೀಸ್ ಉನ್ನತ ಮೂಲಗಳ ಪ್ರಕಾರ ಮಾಹಿತಿ ಪಡೆಯಲು ಮರು ಯತ್ನ ನಡೆಸಲಾಗುವುದು. ಒಂದು ವೇಳೆ ಅವರು ನೀಡದೆ ಇದ್ದರೆ ಮತ್ತೊಂದು ನೋಟಿಸ್ ನೀಡುವುದಾಗಿ ತಿಳಿಸಲಾಗಿದೆ.

#RahulGandhi, #DelhiPolice, #sexualassault, #remark,

Articles You Might Like

Share This Article