ಪ್ರಶ್ನೆ ಕೇಳಿದವರನ್ನು ಬಂಧಿಸಲಾಗುತ್ತಿದೆ : ರಾಹುಲ್‍ಗಾಂಧಿ ಟ್ವೀಟಾಕ್ರೋಶ

Social Share

ನವದೆಹಲಿ, ಜು.27- ಪ್ರಶ್ನೆ ಕೇಳಿದವರನ್ನು ಬಂಧಿಸಲಾಗುತ್ತಿದೆ. ಸಂಸತ್‍ನಿಂದ ಅಮಾನತ್ತುಗೊಳಿಸಲಾಗುತ್ತಿದೆ. ಆದರೆ, ನಮಗೆ ಸರ್ವಾಕಾರದ ವಿರುದ್ಧ ಹೇಗೆ ಹೋರಾಡಬೇಕೆಂಬುದು ಗೊತ್ತಿದೆ ಎಂದು ರಾಹುಲ್‍ಗಾಂಧಿ ಟ್ವೀಟ್ ಮಾಡಿದ್ದಾರೆ.

ಜನ ಸಾಮಾನ್ಯರು ಬಳಸುವ ಅಡುಗೆ ಸಿಲಿಂಡರ್ ಬೆಲೆ 1053ರೂ. ಆಗಿದೆ. ಸಾಧಿಸಿವೆ ಎಣ್ಣೆ 200ರೂ. ಆಗಿದೆ. ಮೊಸರಿನ ಮೇಲೆ ಜಿಎಸ್‍ಟಿ ವಿಧಿಸಲಾಗಿದೆ. ಇದನ್ನು ಪ್ರಶ್ನಿಸುವವರ ವಿರುದ್ಧ ಸರ್ವಾಧಿಕಾರಿಗಳಂತೆ ವರ್ತಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೊರೆ ಪ್ರಶ್ನೆಗಳಿಗೆ ಹೆದರುತ್ತಿದ್ದಾನೆ. ಪ್ರಜಾಪ್ರಭುತ್ವದ ದೇವಸ್ಥಾನವಾಗಿರುವ ಸಂಸತ್‍ನಲ್ಲಿ ಬೆಲೆ ಏರಿಕೆ ಮತ್ತು ನಿರುದ್ಯೋಗದ ವಿರುದ್ಧ ಪ್ರಶ್ನೆ ಮಾಡಿದ 23 ಸಂಸದರನ್ನು ಅಮಾನತು ಮಾಡಲಾಗಿದೆ.

ದೇಶಾದ್ಯಂತ ವಿವಿಧ ಕಡೆ 57 ಸಂಸದರನ್ನು ಬಂಧಿಸಲಾಗಿದೆ. ಆದರೂ ನಾವು ಹೆದರುವುದಿಲ್ಲ. ಸರ್ವಾಕಾರದ ವಿರುದ್ಧ ಹೋರಾಡುವುದನ್ನು ಮುಂದುವರೆಸುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.

Articles You Might Like

Share This Article