ಹೋಶಿಯಾರ್ಪುರ, ಜ.17- ಕಾಶ್ಮೀರವನ್ನು ಪ್ರವೇಶಿಸುವ ಎರಡು ದಿನಗಳ ಮುನ್ನಾ ಇಂದು ಪಂಜಾಬ್ನ ತಾಂಡಾದಲ್ಲಿ ಇಂದು ರಾಹುಲ್ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಪುನರ್ ಆರಂಭವಾಯಿತು. ಈ ನಡುವೆ ಯಾತ್ರೆ ಜಮ್ಮು -ಕಾಶ್ಮೀರ ಪ್ರವೇಶಿಸುವ ವೇಳೆ ಕೈಗೊಳ್ಳಬೇಕಾದ ಭದ್ರತೆ ಕುರಿತಂತೆ ಪೂರ್ವಸಿದ್ಧತೆ ಕೈಗೊಳ್ಳಲಾಗಿದೆ.
ಕಳೆದೆರಡು ದಿನಗಳಿಂದ ಶೀತಾಂಶ ಕುಸಿತವಾಗಿದ್ದು, ಕೊರೆವ ಚಳಿಯಲ್ಲಿ ರಾಹುಲ್ಗಾಂಧಿ ಎಂದಿನಂತೆ ಸಾಮಾನ್ಯವಾದ ಬಿಳಿ ಟಿ-ಶಟ್ ಧರಿಸಿಯೇ ಪಾದಯಾತ್ರೆಯನ್ನು ಮುಂದುವರೆಸಿದರು. ಪಂಜಾಬ್ ಕಾಂಗ್ರೆಸ್ನ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಹರೀಶ್ ಚೌಧರಿ ಮತ್ತು ರಾಜ್ ಕುಮಾರ್ ಚಬ್ಬೇವಾಲ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ಬೆಚ್ಚನೆಯ ಉಡುಪುಗಳನ್ನು ಧರಿಸಿ ಯಾತ್ರೆಯಲ್ಲಿ ಭಾಗವಹಿಸಿದ್ದರು.
ನಿನ್ನೆ ರಾತ್ರಿ ಮುಕೇರಿಯನ್ನಲ್ಲಿ ತಂಗಿದ್ದ ಯಾತ್ರೆ ಇಂದು ಬೆಳಗ್ಗೆ ಮುಂಜಾನೆ ಶುರುವಾಗಿತ್ತು. ಹಾದಿ ಮಧ್ಯೆ ಮಹಿಳೆಯರ ಗುಂಪನ್ನು ಭೇಟಿಯಾಗಿ ಚರ್ಚೆ ನಡೆಸಿದ ರಾಹುಲ್ಗಾಂ, ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು.
ನಿರುದ್ಯೋಗ ಮತ್ತು ಹಣದುಬ್ಬರ ಸಮಸ್ಯೆಗಳ ಬಿಜೆಪಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರಾಹುಲ್ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಹಮ್ಮಿಕೊಂಡಿದ್ದಾರೆ. ಕಳೆದ ಬುಧವಾರ ಫತೇಘರ್ ಸಾಹಿಬ್ನ ಸಿರ್ಹಿಂದ್ನಲ್ಲಿ ಯಾತ್ರೆ ಪಂಜಾಬ್ ಪ್ರವೇಶಿಸಿತ್ತು. ಜನವರಿ 19ರವರೆಗೂ ಪಂಜಾಬ್ನಲ್ಲೇ ಸಂಚರಿಸಿ, ನಂತರ ಕಾಶ್ಮೀರ ಪ್ರವೇಶಿಸಲಿದೆ. ಅಲ್ಲಿ ಆರು ದಿನಗಳ ಕಾಲ ಸಂಚರಿಸಲಿದೆ.
ಬಿಎಸ್ವೈ-ಮೋದಿ ಗೌಪ್ಯ ಮಾತುಕತೆ, ರಾಜ್ಯ ಬಿಜೆಪಿಯಲ್ಲಿ ಸಂಚಲನ
ಕಾಂಗ್ರೆಸ್ ಸಂಸದ ಸಂತೋಖ್ ಸಿಂಗ್ ಚೌಧರಿ ಅವರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದವೇಳೆ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದರು. ಈ ಹಿನ್ನೆಲೆಯಲ್ಲಿ ಶನಿವಾರ ಪಾದಯಾತ್ರೆಯನ್ನು 24 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಜಲಂಧರ್ನಲ್ಲಿ ಭಾನುವಾರ ಮಧ್ಯಾಹ್ನ ಮೆರವಣಿಗೆ ಪುನರಾರಂಭಗೊಂಡಿತ್ತು. ಲೋಹ್ರಿ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರವೂ ಯಾತ್ರೆಗೆ ವಿರಾಮ ನೀಡಲಾಗಿತ್ತು. ಯಾತ್ರೆಯುದ್ದಕ್ಕೂ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ರಾಹುಲ್ಗಾಂಧಿ ಹೇಳಿದ್ದಾರೆ.
ಇಂದು ಬೆಳಗ್ಗೆ ಯಾತ್ರೆಯ ವೇಳೆ ವ್ಯಕ್ತಿಯೊಬ್ಬರು ರಾಹುಲ್ ಗಾಂಯತ್ತ ಧಾವಿಸಿ ಅವರನ್ನು ತಬ್ಬಿಕೊಳ್ಳಲು ಪ್ರಯತ್ನಿಸಿದ್ದಾರೆ. ವೀಡಿಯೊದಲ್ಲಿ ದಾಖಲಾಗಿರುವ ದೃಶ್ಯಾವಳಿಯ ಪ್ರಕಾರ ಜಾಕೆಟ್ ಧರಿಸಿದ ವ್ಯಕಿಯೊಬ್ಬ ರಾಹುಲ್ಗಾಂಧಿ ಕಡೆಗೆ ಧಾವಿಸಿ ಬಂದಿದ್ದು, ಅವರನ್ನು ಅಪ್ಪಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ತಕ್ಷಣವೇ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಮತ್ತು ಇತರ ಪಕ್ಷದ ಕಾರ್ಯಕರ್ತರು ಅಪರಿಚಿತನನ್ನು ತಡೆದು ದೂರ ತಳ್ಳಿದ್ದಾರೆ. ಈ ಘಟನೆ ಭದ್ರತೆಯ ಉಲ್ಲಂಘನೆಯಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿನ ಪಾದಯಾತ್ರೆಗೆ ಸೀಮಿತ ಜನರಿಗಷ್ಟೆ ಅವಕಾಶ:
ಉಗ್ರಗಾಮಿ ಚಟುವಟಿಕೆ ಪೀಡಿತ ಕಣಿವೆ ಪ್ರದೇಶದಲ್ಲಿ ರಾಹುಲ್ಗಾಂಧಿ ಮತ್ತು ಯಾತ್ರೆಯಲ್ಲಿ ಭಾಗವಹಿಸಿದ್ದವರನ್ನು ರಕ್ಷಣೆ ಮಾಡುವುದು ಸವಾಲಿನ ಕೆಲಸವಾಗಿದೆ. ಸುರಕ್ಷತೆ ದೃಷ್ಟಿಯಿಂದ ವಿವರವಾದ ಯೋಜನೆಯೊಂದನ್ನು ರೂಪಿಸಲಾಗಿದೆ.
ಅದರ ಪ್ರಕಾರ ಕೆಲವು ಪ್ರದೇಶಗಳಲ್ಲಿ ಕಾಲ್ನಡಿಗೆಯಲ್ಲಿ ಪ್ರಯಾಣಿಸಿದರೆ, ಇನ್ನೂ ಕೆಲವು ಕಡೆಗಳಲ್ಲಿ ಕಾರಿನಲ್ಲಿ ಪ್ರಯಾಣಿಸಬೇಕು ಸಲಹೆ ನೀಡಲಾಗಿದೆ. ರಾಹುಲ್ಗಾಂಧಿ ರಾತ್ರಿ ತಂಗುವ ಪ್ರದೇಶಗಳ ಪ್ರದೇಶಗಳನ್ನು ಗುರುತಿಸಲಾಗಿದೆ.
ರಾಹುಲ್ಗಾಂಧಿ ಜನವರಿ 19 ರಂದು ಕಾಶ್ಮೀರದ ಲಖನ್ಪುರವನ್ನು ಪ್ರವೇಶಿಸಲಿದ್ದಾರೆ. ಅಲ್ಲಿ ರಾತ್ರಿ ತಂಗಲಿದ್ದು, ಮರುದಿನ ಬೆಳಿಗ್ಗೆ ಕಥುವಾದ ಹಟ್ಲಿ ಮೋರ್ಹ್ನಿಂದ ಯಾತ್ರೆ ಆರಂಭಿಸಲಿದ್ದಾರೆ. ಎರಡನೇ ದಿನ ರಾತ್ರಿ ಚಡ್ವಾಲ್ನಲ್ಲಿ ಬಿಡಾರ ಹೂಡಲಿದ್ದಾರೆ.
ಉದ್ಧವ್ ಠಾಕ್ರೆ ಮನೆ ಮುಂದೆ ಏಕನಾಥ್ ಶಿಂಧೆ ಬೃಹತ್ ಕಟೌಟ್
ಜನವರಿ 21 ರಂದು ಬೆಳಿಗ್ಗೆ ಹೀರಾನಗರದಿಂದ ದುಗ್ಗರ್ ಹವೇಲಿಗೆ ಹೊರಟು, ಜನವರಿ 22 ರಂದು ವಿಜಯಪುರದಿಂದ ಸತ್ವಾರಿಗೆ ತೆರಳಲಿದೆ. ಈ ಮಾರ್ಗದಲ್ಲಿ ಕೆಲವ ಹಾದಿಗಳು ಸುರಕ್ಷಿತವಾಗಿರಲಿವೆ. ಯಾತ್ರೆಯಲ್ಲಿ ಅನಪೇಕ್ಷಿತ ವ್ಯಕ್ತಿಗಳು ಸೇರಿಕೊಳ್ಳಬಾರದು ಮತ್ತು ಯಾವುದೇ ಅಪಾಯಕ್ಕೂ ಅವಕಾಶವಾಗಬಾರದು ಎಂಬ ಕಾರಣಕ್ಕೆ ಭದ್ರತಾ ಸಿಬ್ಬಂದಿಗಳನ್ನೇ ಮಫ್ತಿಯಲ್ಲಿ ಪಾದಯಾತ್ರೆಯಲ್ಲಿ ತೊಡಗಿಸಲಾಗುತ್ತಿದೆ. ಝಡ್ ಪ್ಲಸ್ ಶ್ರೇಣಿಯ ಭದ್ರತೆ ಹೊಂದಿರುವ ರಾಹುಲ್ಗಾಂಧಿಯನ್ನು ಎಂಟರಿಂದ 9 ಕಮಾಂಡೋಗಳು ದಿನದ 24 ಗಂಟೆಯೂ ಕಾವಲು ಕಾಯುತ್ತಿವೆ.
ಜನವರಿ 26ರ ಗಣರಾಜ್ಯೋತ್ಸವದಂದು ರಾಹುಲ್ಗಾಂಧಿ ಕಾಶ್ಮೀರದ ಬನಿಹಾಲ್ನಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ. ನಂತರ ಜನವರಿ 27 ರಂದು ಅನಂತನಾಗ್ ಮೂಲಕ ಶ್ರೀನಗರವನ್ನು ಪ್ರವೇಶಿಸಲಿದ್ದಾರೆ.
23 ಲಕ್ಷ ಹೋಟೆಲ್ ಬಿಲ್ ಪಾವತಿಸದೆ ಪರಾರಿಯಾದ ರಾಜಮನೆತನದ ಉದ್ಯೋಗಿ
ಯಾತ್ರೆಯ ಮಾರ್ಗದಲ್ಲಿ ಅನೇಕ ಭದ್ರತಾ ಲೋಪಗಳು ಕಂಡು ಬಂದಿವೆ ಎಂದು ಕಾಂಗ್ರೆಸ್ ಈ ಮೊದಲು ಆರೋಪಿಸಿತ್ತು. ರಾಹುಲ್ಗಾಂಧಿಗೆ ಬೆದರಿಕೆ ಇರುವುದರಿಂದ ಭದ್ರತೆಯನ್ನು ಹೆಚ್ಚಿಸುವಂತೆ ಕಾಂಗ್ರೆಸ್ ಒತ್ತಾಯಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಭದ್ರತಾ ಸಿಬ್ಬಂದಿಗಳು 100ಕ್ಕೂ ಹೆಚ್ಚು ಬಾರಿ ಭದ್ರತಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಪ್ರತ್ಯಾರೋಪಿಸಿದ್ದವು.
Rahul Gandhi, Bharat Jodo Yatra,