ಉತ್ತರ ಕುಮಾರ ರಾಹುಲ್‍ ಎಲ್ಲಿದ್ದೀಯಪ್ಪಾ..? : ಬಿಜೆಪಿ ವ್ಯಂಗ್ಯ

Social Share

ಬೆಂಗಳೂರು,ಜು.13- ಅಕ್ಟೋಬರ್ ತಿಂಗಳಲ್ಲಿ ಭಾರತ್ ಜೋಡೋ ಯಾತ್ರೆ ಉಳಿದ ಎಲ್ಲಾ ತಿಂಗಳು ಭಾರತದಿಂದ ವಿದೇಶಕ್ಕೆ ಓಡೋ ಯಾತ್ರೆ! ನಕಲಿ ಗಾಂಧಿ ವಂಶದ ಕುಡಿಯ ರಾಜಕಾರಣ. ರಾಹುಲ್‍ಎಲ್ಲಿದ್ದೀಯಪ್ಪಾ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿ ಬ್ಯುಸಿ ಇರುವುದರಿಂದ ಭಾರತ್ ಜೋಡೋ ಯಾತ್ರೆಯ ಸಿದ್ಧತಾ ಸಭೆಯನ್ನು ಯುರೋಪ್‍ಗೆ ವರ್ಗಾಯಿಸಲಾಗುತ್ತದೆಯೇ ಎಂದು ಪ್ರಶ್ನಿಸಿದೆ.

ಕಾಂಗ್ರೆಸಿಗರಿಗೊಂದು ಕ್ವಿಜ್..! ಕಾಂಗ್ರೆಸ್ ಪಕ್ಷದ ಮಹತ್ವದ ಸಭೆಗೆ ಮುಹೂರ್ತ ನಿಗದಿಯಾದಾಗ ರಾಹುಲ್ ಗಾಂಧಿ ವಿದೇಶ ಪ್ರವಾಸ ತೆರಳುತ್ತಾರೋ? ಅಥವಾ ಅವರು ವಿದೇಶಕ್ಕೆ ಪ್ರವಾಸಕ್ಕೆ ತೆರಳಿದಾಗ ಕಾಂಗ್ರೆಸ್ ಸಭೆ ನಿಗದಿಯಾಗುತ್ತದೆಯೋ? ಎಂದು ವ್ಯಂಗ್ಯವಾಡಿದೆ.

ಪಂಜಾಬ್, ಉತ್ತರಪ್ರದೇಶ ಚುನಾವಣೆಗಳಲ್ಲಿ ಸೋತ ನಂತರ ಕೊನೆಯ ಪಕ್ಷ ಸೋಲಿನ ಅವಲೋಕನ, ಕಾರ್ಯಕರ್ತರಿಗೆ ಆತ್ಮವಿಶ್ವಾಸ ತುಂಬು ಕೆಲಸ ಮಾಡಬಹುದಿತ್ತು. ಆದರೆ ಕಾಂಗ್ರೆಸ್ ಯುವರಾಜ ನೇಪಾಳಕ್ಕೆ ಹೋಗಿ ಮೋಜು ಮಸ್ತಿ ಮಾಡುತ್ತಿದ್ದರು ಎಂದು ಟೀಕಿಸಿದೆ.

ಇಂತಹ ನಾಯಕತ್ವ ಹೊಂದಿರುವ ಪಕ್ಷ ಭಾರತದಿಂತ ಮುಕ್ತವಾಗದಿರಲು ಯಾವ ಕಾರಣಗಳಿವೆ? ತನ್ನದೇ ಪಕ್ಷದ ನೀತಿ-ನಿರೂಪಣಾ ಸಭೆಗೆ ಚಕ್ಕರ್ ಹಾಕುವ ವ್ಯಕ್ತಿಯಿಂದ ರಾಷ್ಟ್ರ ಮುನ್ನಡೆಸಲು ಸಾಧ್ಯವೇ ಎಂದು ಕಾಂಗ್ರೆಸ್‍ಗೆ ಸವಾಲು ಹಾಕಿದೆ.

ಮೈಸೂರು ಜಿಲ್ಲೆಯಲ್ಲಿ ಕಂಡ ಅಪಮಾನಕರ ಸೋಲು, ಕರಾವಳಿ ಭಾಗದಲ್ಲಿ ದುರ್ಬಲವಾಗಿರುವ ಕಾಂಗ್ರೆಸ್ ಸಿದ್ದರಾಮಯ್ಯ ನಿದ್ದೆಗೆಡಿಸಿದೆ. ಇದರ ಕೋಪವನ್ನು ಕರ್ನಾಟಕದ ಭೂಪಟ ಮೇಲೆ ತೋರಿಸಿ, ಮೈಸೂರು ಹಾಗೂ ಕರಾವಳಿ ಭಾಗಕ್ಕೆ ಕತ್ತರಿ ಹಾಕಿದ್ದಾರೆ.

ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ಭೂಪಟವನ್ನು ವಿರೂಪಗೊಳಿಸಿದ್ದು ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಗಂಭೀರ ಆರೋಪ ಮಾಡಿದೆ.

Articles You Might Like

Share This Article