11 ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ ಯಾತ್ರೆ

Social Share

ತಿರುವನಂತಪುರಂ,ಸೆ.18- ಹಲವು ವಿವಾದ, ಟೀಕೆಗಳ ಹೊರತಾಗಿಯೂ ರಾಹುಲ್‍ಗಾಂಧಿ ಅವರ ಭಾರತ ಐಕ್ಯತಾ(ಭಾರತ್ ಜೋಡೋ) ಯಾತ್ರೆಯು ಸಾಂಗ್ಯವಾಗಿ ಮುಂದುವರೆದಿದ್ದು, 11ನೇ ದಿನದ ಯಾತ್ರೆಯು ಕೇರಳದ ಹರಿಪಾಡ್‍ನಿಂದ ಇಂದು ಶುರುವಾಗಿದೆ.

ಮುಂಜಾನೆ 6.30ಕ್ಕೆ ಶುರುವಾದ ಯಾತ್ರೆ 13 ಕಿ.ಮೀ.ವರೆಗೂ ನಡೆದು, ವಟ್ಟಾಪಣ್ಣದ ಶ್ರೀ ಕುರುಟು ಭಗವತಿ ದೇವಸ್ಥಾನದ ಬಳಿ ವಿಶ್ರಾಂತಿ ಪಡೆಯಿತು. ಈ ವೇಳೆ ರಾಹುಲ್‍ಗಾಂ ಕುಟುನಾಡ್ ಹಾಗೂ ನೆರೆಯ ಜಿಲ್ಲೆಗಳ ರೈತರ ಜತೆ ಸಂವಾದ ನಡೆಸಿದರು.

ಹಾದಿಯುದ್ಧಕ್ಕೂ ರಾಹುಲ್‍ಗಾಂಧಿ ಅವರ ಜತೆ ಸಾವಿರಾರು ಜನ ಹೆಜ್ಜೆಹಾಕಿದರು. ತಮ್ಮೊಂದಿಗೆ ಪಾದಯಾತ್ರೆಯಲ್ಲಿ ಆಗಮಿಸುತ್ತಿದ್ದ ಬಾಲಕಿಯ ಪಾದರಕ್ಷೆಯ ಬೆಲ್ಟ್ ಬಿಚ್ಚಿಕೊಂಡು ಆಕೆ ನಡೆಯಲು ಅಸೌಖ್ಯದಿಂದ ಬಳಲುವುದನ್ನು ಕಂಡು ರಾಹುಲ್‍ಗಾಂಧಿ ಖುದ್ದು ಆಕೆಯ ಪಾದರಕ್ಷೆಯ ಬೆಲ್ಟ್ ಸರಿಪಡಿಸಿರುವ ಚಿತ್ರ ಭಾರೀ ವೈರಲ್ ಆಗಿದೆ. ಎಂದಿನಂತೆ ದಾರಿಯಲ್ಲಿ ಸಿಕ್ಕವರಿಗೆ ಕೈ ಕುಲುಕುತ್ತಾ, ಕೆಲವರಿಗೆ ಅಪ್ಪುಗೆ ನೀಡುತ್ತಾ ರಾಹುಲ್ ಹೆಜ್ಜೆ ಹಾಕಿದರು.

ಇದನ್ನೂ ಓದಿ : ರಾಹುಲ್ ಗಾಂಧಿಗೆ ಎಐಸಿಸಿ ಪಟ್ಟ ಕಟ್ಟಲುರಾಜಸ್ಥಾನ ಕಾಂಗ್ರೆಸ್ ನಿರ್ಣಯ

ನಿರುದ್ಯೋಗ, ಬೆಲೆ ಏರಿಕೆ, ಅಗತ್ಯ ವಸ್ತುಗಳ ಜಿಎಸ್‍ಟಿ ಹೇರಿಕೆಗಳ ವಿರುದ್ಧ ರಾಹುಲ್‍ಗಾಂಧಿ ಸಮರ ಸಾರಿದ್ದು, 350 ಕಿ.ಮೀ. ದೂರದ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆ ತಮಿಳುನಾಡು ದಾಟಿ ಕೇರಳದಲ್ಲಿ ನಡೆಯುತ್ತಿದೆ.

Articles You Might Like

Share This Article