ಭಾರತದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾದರೆ ಭೂಮಂಡಲಕ್ಕೆ ಅಪಾಯ : ರಾಹುಲ್ ಗಾಂಧಿ

ಲಂಡನ್, ಮೇ 21- ಭಾರತದಲ್ಲಿನ ಪ್ರಜಾಪ್ರಭುತ್ವವು ಜಾಗತಿಕವಾಗಿ ಸಾರ್ವಜನಿಕರ ಒಳಿತಾಗಿ ಇದೆ. ಒಂದು ವೇಳೆ ಭಾರತದ ಪ್ರಜಾಪ್ರಭುತ್ವ ಬಿರುಕಿಗೆ ಒಳಗಾದರೆ ಅದರ ಪರಿಣಾಮದಿಂದ ಇಡೀ ಭೂ ಮಂಡಲಕ್ಕೆ ಸಮಸ್ಯೆಯಾಗಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ.
ಇಂಗ್ಲೆಂಡ್ ಪ್ರವಾಸದಲ್ಲಿರುವ ರಾಹುಲ್‍ಗಾಂ ಶುಕ್ರವಾರ ಥಿಂಕ್ ಟ್ಯಾಂಕ್ ಸಂಘಟನೆ ಬ್ರಿಡ್ಜ್ ಇಂಡಿಯಾ ಆಯೋಜಿಸಿದ್ದ ‘ಐಡಿಯಾಸ್ ಫಾರ್ ಇಂಡಿಯಾ’ ಸಂವಾದದಲ್ಲಿ ಭಾಗವಹಿಸಿದ್ದರು.

ಸಿಪಿಐ(ಎಂ)ನ ಸೀತಾರಾಮ್ ಯೆಚೂರಿ, ಆರ್‍ಜೆಡಿ ಪಕ್ಷದ ತೇಜಸ್ವಿ ಯಾದವ್ ಮತ್ತು ತೃಣಮೂಲ ಕಾಂಗ್ರೆಸ್‍ನ ಮಹುವಾ ಮೊಯಿತ್ರಾ ಸೇರಿದಂತೆ ವಿರೋಧ ಪಕ್ಷದ ನಾಯಕರೊಂದಿಗೆ ಸಮಾವೇಶದಲ್ಲಿ ಭಾಗವಹಿಸಿದ್ದ ರಾಹುಲ್‍ಗಾಂಧಿ, ದೇಶದಾದ್ಯಂತ ಸೀಮೆಎಣ್ಣೆ ಎರಚಿದ ವಾತಾವರಣ ಇದೆ, ಪ್ರಸ್ತುತ ಸಂದರ್ಭದಲ್ಲಿ ಅದಕ್ಕೆ ಬೇಕಾಗಿರುವುದು ಒಂದು ಸಣ್ಣ ಕಿಡಿ ಸಾಕು ಎಂಬಂತಾಗಿದೆ ಎಂದರು.

ಬಿಜೆಪಿ ನೇತೃತ್ವದ ಆಡಳಿತ ಜನರ ಧ್ವನಿ ಮತ್ತು ಅಳಲನ್ನು ಹತ್ತಿಕ್ಕುತ್ತಿದೆ. ನಾವು ಏನನ್ನು ಕೇಳುತ್ತಿದ್ದೇವೆ ಅವು ಎರಡು ಭಿನ್ನ ವಿಷಯಗಳಾಗಿವೆ ಮತ್ತು ಎರಡು ಭಿನ್ನ ವಿನ್ಯಾಸಗಳನ್ನು ಹೊಂದಿವೆ. ಒಂದು ಧ್ವನಿಯನ್ನು ನಿಗ್ರಹಿಸುತ್ತಿದೆ, ಮತ್ತೊಂದು ಜನರ ಅಳಲನ್ನು ಕೇಳುತ್ತಿದೆ. ದೇಶದ ವ್ಯವಸ್ಥೆಯ ಮೇಲೆ ಆಳವಾದ ಹಾನಿ ಮಾಡುವ ಸಿದ್ಧಾಂತದ ವಿರುದ್ಧ ಕಾಂಗ್ರೆಸ್ ಹೋರಾಟಕ್ಕೆ ಸಜ್ಜುಗೊಂಡಿದೆ ಎಂದಿದ್ದಾರೆ.

ಜನರ ಗಂಟಲಿಗೆ ನಿರ್ದಿಷ್ಠವಾದ ಆಲೋಚನೆಗಳನ್ನು ತುರುಕಲಾಗುತ್ತಿದೆ. ಅದು ಕಮ್ಯೂನಿಸ್ಟ್‍ನ ಆಲೋಚನೆಗಳಿರಬಹುದು ಅಥವಾ ಸಂಘ ಪರಿವಾರದ ವ್ಯವಸ್ಥೆ ಇರಬಹುದು. ಈ ಸಿದ್ಧಾಂತಗಳ ಪ್ರತಿಪಾದಕರು ಹೇಳುತ್ತಾರೆ ಅಷ್ಟೆ ಅದನ್ನು ಬಿಟ್ಟು ಬೇರೆನು ಇಲ್ಲ ಎಂದು ಬಿಂಬಿಸಲಾಗುತ್ತಿದೆ.

ಆದರೆ ಭಾರತ ಆ ರೀತಿ ವಿನ್ಯಾಸಗೊಂಡಿಲ್ಲ. ಜನರ ಧ್ವನಿಯನ್ನು ಕೇಳುವುದು ಮತ್ತು ಅದನ್ನು ಸರ್ಕಾರದ ಮೇಜಿಗೆ ತಂದು ಇಡುವುದು ನಮ್ಮ ವ್ಯವಸ್ಥೆಯ ವಿನ್ಯಾಸವಾಗಿತ್ತು. ಪ್ರಜಾಪ್ರಭುತ್ವ ಜಗತ್ತಿನ ಒಳಿತಿಗಾಗಿ ಇದೆ. ಇದು ಭೂ ಮಂಡಲದ ಕೇಂದ್ರಿತ ನಿರೂಪಕವಾಗಿದೆ. ಭಾರತೀಯರು ಮಾತ್ರ ಮಾನಕದ್ರವ್ಯ ಪ್ರಜಾಪ್ರಭುತ್ವವನ್ನು ಪಾಲನೆ ಮಾಡುತ್ತಿದ್ದೇವೆ. ಒಂದು ವೇಳೆ ಅದು ಬಿರುಕು ಬಿಟ್ಟರೆ ಗ್ರಹದ ವ್ಯವಸ್ಥೆಗಳೇ ಸಮಸ್ಯೆ ಸಿಲುಕುತ್ತವೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಜನರ ನಡುವೆ ಸಂವಾದವನ್ನು ಬಯಸುತ್ತದೆ. ಬಿಜೆಪಿ ಮತ್ತು ಆರ್‍ಎಸ್‍ಎಸ್ ಭಾರತವನ್ನು ಭೌಗೋಳಿಕ ಅರ್ಥಾತ್ ಸೋನೆ ಕಿ ಚಿಡಿಯಾ ಎಂದು ಭಾವಿಸಿದೆ. ಫಲಾನುಭವಿಗಳು ಅದನ್ನು ಇತರರಿಗೂ ಹಂಚಬೇಕು ಎಂದು ಕಾಂಗ್ರೆಸ್ ಸಿದ್ಧಾಂತವಾಗಿದೆ. ತನ್ಮೂಲಕ ಎಲ್ಲರೂ ಸಮಾನರಾಗಬೇಕು ಎಂದು ಮಹಾತ್ಮಾ ಗಾಂಜೀ ಹೇಳಿರುವುದನ್ನು ರಾಹುಲ್ ಉಲ್ಲೇಖಿಸಿದರು.

ರಷ್ಯಾ-ಉಕ್ರೇನ್ ಸಂಘರ್ಷದ ಬಗ್ಗೆ ಕೇಳಿದಾಗ, ಚೀನಾದ ಭಾರತದ ಮೇಲೆ ರಷ್ಯಾ ಮಾದರಿಯ ಕ್ರಮಗಳನ್ನು ಪಾಲನೆ ಮಾಡುತ್ತಿದೆ ಎಂದು ಹೇಳಿದರು. ರಷ್ಯಾ ಉಕ್ರೇನ್‍ನ ಪ್ರಾದೇಶಿಕ ಸೌರ್ವಭೌಮತ್ವವನ್ನು ಗೌರವಿಸಲು ನಿರಾಕರಿಸುತ್ತದೆ. ನ್ಯಾಟೋ ಜೊತೆಗೆ ಮೈತ್ರಿ ಮುಂದುವರೆಸಬಾರದು ಎಂದು ಒತ್ತಾಯಿಸುತ್ತದೆ. ಎರಡು ಪ್ರದೇಶಗಳು ನಮಗೆ ಸೇರಿವೆ ಎಂದು ಹೇಳುತ್ತಾ ದಾಳಿ ನಡೆಸಿದೆ. ಚೀನಾ ಕೂಡ ಭಾರತದ ಎರಡು ಭೂ ಭಾಗಗಳು ನಮಗೆ ಸೇರಿವೆ ಎಂದು ವಾದಿಸುತ್ತಿದೆ ಎಂದರು.

ಉಕ್ರೇನ್‍ನಲ್ಲಿ ನಡೆದ ರೀತಿಯಲ್ಲೇ ಲಡಾಖ್ ಮತ್ತು ಡೋಕ್ಲಾಮ್‍ನಲ್ಲಿ ನಡೆಯುತ್ತಿದೆ. ಈ ಎರಡು ಸಂಘರ್ಷಗಳ ಸಾಮ್ಯತೆಯನ್ನು ಗುರುತಿಸಬೇಕಿದೆ. ಲಡಾಕ್ ಮತ್ತು ಡೋಕ್ಲಾಮ್‍ನಲ್ಲಿ ಚೀನಾ ಪಡೆಗಳು ಬಂದು ಕುಳಿತಿವೆ. ಅರುಣಾಚಲ ಪ್ರದೇಶಕ್ಕಾಗಿ ಡೋಕ್ಲಾಮ್‍ನಲ್ಲಿ, ಲಡಾಖ್‍ಕ್ಕಾಗಿ ಲಡಾಕ್‍ನಲ್ಲಿ ಪಡೆಗಳನ್ನು ಕಾಯ್ದಿರಿಸಲಾಗುತ್ತಿದೆ. ಈ ಎರಡು ಪ್ರದೇಶಗಳು ಭಾರತಕ್ಕೆ ಸೇರಿವೆ ಎಂದು ಒಪ್ಪಿಕೊಳ್ಳಲು ಚೀನಾ ನಿರಾಕರಿಸುತ್ತಿದೆ. ಆದರೆ ಅಮೆರಿಕಾದೊಂದಿಗಿನ ಸಂಬಂಧವನ್ನು ಒಪ್ಪಿಕೊಳ್ಳುವುದಾಗಿ ಹೇಳುತ್ತಿದೆ ಎಂದರು.

ಗಡಿಯಲ್ಲಿ ಸಮಸ್ಯೆ ಇದೆ ಎಂಬುದನ್ನು ಮೊದಲು ನಾವು ಅರಿತುಕೊಳ್ಳಬೇಕು. ನಾವು ಇಷ್ಟಪಡುತ್ತೇವೆಯೋ, ಇಲ್ಲವೋ ಅದು ಬೇರೆ ಮಾತು. ಆ ಸಮಸ್ಯೆಗಳಿಗೆ ನಾವು ಸಿದ್ಧರಾಗಿರಬೇಕು. ನಾವು ಕಾವಲುಗಾರರನ್ನು ಹಿಡಿಯುವುದಕ್ಕೆ ಸೀಮಿತವಾಗಬಾರದು. ಈ ವಿಷಯವಾಗಿ ಸರ್ಕಾರ ಚರ್ಚೆಗೆ ಅವಕಾಶವನ್ನೇ ನೀಡದಿರುವುದು ಸಮಸ್ಯೆಯಾಗಿದೆ ಎಂದರು.

ಚೀನೀ ಸೈನಿಕರು ಇಂದು ಭಾರತದೊಳಗೆ ಕುಳಿತಿದ್ದಾರೆ. ಅವರು ಪಾಂಗಾಂಗ್ ಸರೋವರದ ಮೇಲೆ ಬೃಹತ್ ಸೇತುವೆಯನ್ನು ನಿರ್ಮಿಸಿದ್ದಾರೆ, ಮೂಲಸೌಕರ್ಯಗಳನ್ನು ಸ್ಥಾಪಿಸುತ್ತಿದ್ದಾರೆ. ನಿಸ್ಸಂಶಯವಾಗಿ ಅವರು ಏನನ್ನಾದರೂ ಸಿದ್ಧಪಡಿಸುತ್ತಿದ್ದಾರೆ. ಆದರೆ ಸರ್ಕಾರ ಈ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಇದು ಕೆಟ್ಟ ಬೆಳವಣಿಗೆ ಎಂದು ರಾಹುಲ್‍ಗಾಂಧಿ ವ್ಯಾಖ್ಯಾನಿಸಿದರು.

ನಾನು ಪದೇ ಪದೇ ಚೀನಾ ವಿಷಯವನ್ನು ಎತ್ತುತ್ತೇನೆ ಎಂದು ಸರ್ಕಾರ ಆಕ್ಷೇಪಿಸುತ್ತಿದೆ. ಹೌದು ನಾನು ಚೀನಾ ಸಮಸ್ಯೆಯನ್ನು ಎತ್ತುತ್ತೇನೆ. ಏಕೆಂದರೆ ಚೀನಾದ ಸೈನಿಕರು ಭಾರತದೊಳಗೆ ಬಂದು ಕುಳಿತಿದ್ದಾರೆ. ಅದು ನನ್ನ ಚಿಂತೆಗೆ ಕಾರಣವಾಗಿದೆ. ಉಕ್ರೇನ್‍ನಲ್ಲಿ ಏನಾಗಿದೆ ಎಂದು ನಾವು ನೋಡಿದ್ದೇವೆ. ಮಾತುಕತೆಯೊಂದರ ಸಮಯದಲ್ಲಿಲ ಇದನ್ನು ನಾನು ವಿದೇಶಾಂಗ ಸಚಿವರಿಗೆ ಹೇಳಿದ್ದೇನೆ ಎಂದರು.

ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲಿ ಹೋರಾಟ ನಡೆಸಲು ಸಿದ್ದಗೊಂಡಿದೆ. ಮುಂದಿನ ದಿನಗಳಲ್ಲಿ ಕೆಲ ಸ್ಥಾನಗಳು ಬದಲಾಗುತ್ತವೆ. ಅದಕ್ಕೆ ಎಲ್ಲರೂ ಹೊಂದಿಕೊಳ್ಳುತ್ತಾರೆ. ಮುಂಬರುವ ಹೋರಾಟದ ಫಲಿತಾಂಶದಲ್ಲಿ ಈಗೀನ ಭಾರತಕ್ಕಿಂತ ಉತ್ತಮವಾದದ್ದನ್ನು, ಮತ್ತು ಮೊದಲಿಗಿಂತ ಶ್ರೇಷ್ಠ ಭಾರತವನ್ನು ಹೊಂದಲಿದ್ದೇವೆ ಎಂಬ ವಿಶ್ವಾಸವನ್ನು ರಾಹುಲ್‍ಗಾಂ ವ್ಯಕ್ತ ಪಡಿಸಿದರು.