50 ದಿನ ಪೂರೈಸಿದ ಭಾರತ್ ಜೋಡೋ ಯಾತ್ರೆ

Social Share

ಅಮರಾವತಿ,ಅ.27-ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ಕೈಗೊಂಡಿರುವ ಭಾರತ ಐಕ್ಯತಾ ಯಾತ್ರೆ ಇಂದಿಗೆ 50ದಿನಗಳನ್ನು ಪೂರೈಸಿದ್ದು, ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯಲ್ಲಿ ಸಂಚರಿಸುತ್ತಿದೆ. ಇಂದು ಬೆಳಗ್ಗೆ 5.25ಕ್ಕೆ ಮತ್ಕಲ್‍ನಿಂದ ಆರಂಭವಾದ ಯಾತ್ರೆ ಪ್ರಾರಂಭದಲ್ಲಿ 14 ಕಿ.ಮೀ. ಸಂಚರಿಸಿದೆ.

ದೀಪಾವಳಿ ಪ್ರಯುಕ್ತ ಎರಡು ದಿನ, ಎಐಸಿಸಿ ಅಧ್ಯಕ್ಷ ಪದಗ್ರಹಣಕ್ಕಾಗಿ ಒಂದು ದಿನ ಸೇರಿ ಒಟ್ಟು ಮೂರು ದಿನ ಯಾತ್ರೆಗೆ ಬಿಡುವು ನೀಡಲಾಗಿತ್ತು. ಇಂದು ಬೆಳಗ್ಗೆ ಯಥಾರೀತಿ ಉತ್ಸಾಹದಂತೆ ಯಾತ್ರೆ ಪುನರಾರಂಭವಾಗಿದೆ.
ರಾಹುಲ್‍ಗಾಂಧಿ ಅವರಿಗೆ ಮತ್ತೊಮ್ಮೆ ಮೆಹಬೂಬ್ ನಗರ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಕಾರ್ಯಕರ್ತರು, ಮುಖಂಡರು ಉತ್ಸಾಹದಿಂದ ಭಾಗವಹಿಸಿದರು.

ಖರ್ಗೆ AICC ಅಧ್ಯಕ್ಷರಾಗುತ್ತಿದ್ದಂತೆ ಕಾಂಗ್ರೆಸ್‍ನಲ್ಲಿ ‘ಸಂಚಲನ’

ಎಂದಿನಂತೆ ಜನ ಸಾಮಾನ್ಯರೊಂದಿಗೆ ಬೆರೆತು ರಾಹುಲ್‍ಗಾಂಧಿ ಮುನ್ನಡೆದರು. ಪ್ರತಿ ಹಂತದಲ್ಲೂ ಜನ ಸಾಮಾನ್ಯರು ರೈತರೊಂದಿಗೆ ರಾಹುಲ್‍ಗಾಂಧಿ ಸಂವಾದ ನಡೆಸಿದರು. ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನ ನಿಂತು ರಾಹುಲ್‍ಗಾಂಧಿ ಅವರಿಗೆ ಶುಭ ಹಾರೈಸಿದರು.

ಜೆಡಿಎಸ್ ಪಂಚರತ್ನ ರಥಯಾತ್ರೆಗೆ ಚಾಲನೆ

ಸೆ.7ರಂದು ಕನ್ಯಾಕುಮಾರಿಯಿಂದ ಆರಂಭವಾ ಯಾತ್ರೆ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರ ಪ್ರದೇಶ ದಾಟಿ ತೆಲಂಗಾಣದಿಂದ ಮುಂದುವರೆಯುತ್ತಿದೆ. 150 ದಿನಗಳ 3700ಕ್ಕೂ ಹೆಚ್ಚು ಕಿ.ಮೀ. ದೂರದ ಈ ಯಾತ್ರೆ ಈವರೆಗೂ ಮೂರನೇ ಒಂದು ಭಾಗದಷ್ಟು ಪೂರ್ಣಗೊಂಡಿದೆ.

Articles You Might Like

Share This Article