ವಾಷಿಂಗ್ಟನ್, ಜೂ.1- ನಾನು ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ರ್ಪಧಿಸಿ ಅಮೇಥಿ ಕ್ಷೇತ್ರದಿಂದ ಆಯ್ಕೆಯಾದ ವೇಳೆ ಮುಂದೊಂದು ದಿನ ನಾನು ಅದೇ ಸ್ಥಾನದಿಂದ ಅನರ್ಹಗೊಳ್ಳಬಹುದು ಎಂಬುದನ್ನು ಕಲ್ಪನೆ ಕೂಡ ಮಾಡಿರಲಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಷಾಧದ ಮಾತುಗಳನ್ನಾಡಿದ್ದಾರೆ.
ಕೆಲ ತಿಂಗಳ ಹಿಂದೆ ರಾಹುಲ್ ಗಾಂಧಿ ಅವರನ್ನು ಪ್ರಕರಣ ಒಂದ ರಲ್ಲಿ ನ್ಯಾಯಾಲಯದ ತೀರ್ಪಿನಂತೆ ವಯನಾಡು ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದ ಅವರ ಸದಸ್ಯತ್ವವನ್ನು ಅನರ್ಹಮಾಡಲಾಗಿತ್ತು.
ಅನರ್ಹಗೊಂಡ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಅವರು, ನಾನು ರಾಜಕೀಯ ಸೇರಿದಾಗ ನಾನು ಏನೆಲ್ಲ ಎದುರಿಸ ಲಿದ್ದೇನೆ ಎಂಬ ಕಲ್ಪನೆಯನ್ನೂ ಮಾಡಿರಲಿಲ್ಲ.
ಈ ರೀತಿ ಏನಾದರೂ ನಡೆಯಬಹುದು ಎಂಬುದನ್ನೂ ಊಹಿಸಿರಲಿಲ್ಲ. ರಾಜಕೀಯಕ್ಕೆ ಸೇರಿದಾಗ ನಾನು ಲೋಕಸಭೆಯಿಂದ ಅನರ್ಹಗೊಳ್ಳುತ್ತೇನೆ ಎಂದು ಭಾವಿಸಿರಲಿಲ್ಲ. ಆದರೆ ಈ ಅನರ್ಹತೆ ನನಗೆ ಜನರ ಸೇವೆ ಮಾಡಲು ದೊಡ್ಡ ಅವಕಾಶ ನೀಡಿದೆ ಎಂದು ಹೇಳಿದ್ದಾರೆ.
ಅಮೆರಿಕದ ಮೂರು ನಗರಗಳ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರು, ಕ್ಯಾಲಿಫೋರ್ನಿಯಾದ ಪ್ರತಿಷ್ಠಿತ ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯದ ಕ್ಯಾಂಪಸ್‍ನಲ್ಲಿ ಭಾರತೀಯ ವಿದ್ಯಾರ್ಥಿಗಳ ಸರಣಿ ಪ್ರಶ್ನೆಗಳಿಗೆ ಉತ್ತರವಾಗಿ ಈ ಹೇಳಿಕೆಯನ್ನು ನೀಡಿದ್ದಾರೆ.
ಬಿಬಿಎಂಪಿ ಗದ್ದುಗೆ ಮೇಲೆ ಡಿಕೆಶಿ ಕಣ್ಣು: ಮಾಜಿ ಮೇಯರ್‌ಗಳ ಜೊತೆ ಮಹತ್ವದ ಸಭೆ
ಸುಮಾರು ಆರು ತಿಂಗಳ ಹಿಂದೆ ಈ ನಾಟಕ ಶುರುವಾಗಿತ್ತು ಎನಿಸುತ್ತದೆ. ನಾವು ಆಗ ಪರದಾಡುತ್ತಿದ್ದಾವು. ಭಾರತದಲ್ಲಿನ ಇಡೀ ವಿರೋಧ ಪಕ್ಷ ಕಷ್ಟಪಡುತ್ತಿತ್ತು. ತೀವ್ರ ಆರ್ಥಿಕ ಪ್ರಾಬಲ್ಯ, ಸಂಸ್ಥೆಗಳ ವಶ ಎಲ್ಲ ನಡೆಯುತ್ತಿತ್ತು. ನಮ್ಮ ದೇಶದಲ್ಲಿ ಪ್ರಜಾಸತ್ತಾತ್ಮಕ ಹೋರಾಟ ನಡೆಸಲು ನಾವು ಹೆಣಗುತ್ತಿದ್ದೆವು. ಇಂತಹ ಸನ್ನಿವೇಶದಲ್ಲಿ ಭಾರತ್ ಜೋಡೋ ಯಾತ್ರೆ ನಡೆಸಲು ನಿರ್ಧರಿಸಿದೆ ಎಂದು ವಿವರಿಸಿದ್ದಾರೆ.
ನನ್ನ ಐಫೋನ್ ಅನ್ನು ಟ್ಯಾಪ್ ಮಾಡಲಾಗುತ್ತಿದೆ ಎಂದು ನನಗೆ ಅನಿಸುತ್ತಿದೆ. ದೇಶವಾಗಿ ಹಾಗೂ ವ್ಯಕ್ತಿಯಾಗಿ ಡೇಟಾ ಮಾಹಿತಿ ಖಾಸಗಿತನಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸುವ ಅಗತ್ಯವಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ದೇಶದ ಸರ್ಕಾರವೊಂದು ನಿಮ್ಮ ಫೋನ್‍ಅನ್ನು ಟ್ಯಾಪ್ ಮಾಡಲು ನಿರ್ಧರಿಸಿದರೆ ನಿಮ್ಮನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಫೋನ್ ಟ್ಯಾಪ್ ಮಾಡಲು ದೇಶಕ್ಕೆ ಆಸಕ್ತಿ ಇದ್ದರೆ, ಇದು ಹೋರಾಡಲು ಸೂಕ್ತವಾದ ಯುದ್ಧವಲ್ಲ. ನನ್ನ ಪ್ರಕಾರ ನಾನು ಏನೇ ಕೆಲಸ ಮಾಡಿದರೂ ಅದು ಸರ್ಕಾರಕ್ಕೆ ಗೊತ್ತಾಗುತ್ತದೆ ಎಂದಿದ್ದಾರೆ.
ಪೆಗಾಸಸ್ ಅಥವಾ ಅಂತಹ ತಂತ್ರಜ್ಞಾನಗಳ ವಿವಾದದ ಬಗ್ಗೆ ತಮಗೆ ಚಿಂತೆ ಇಲ್ಲ ಎಂದು ಹೇಳಿದ್ದಾರೆ. ನನಗೆ ಒಂದು ಹಂತದಲ್ಲಿ ನನ್ನ ಫೋನ್ ಟ್ಯಾಪ್ ಆಗುತ್ತಿದೆ ಎನ್ನುವುದು ನನಗೆ ಗೊತ್ತಾಗಿತ್ತು ಎಂದಿರುವ ರಾಹುಲ್ ಗಾಂಧಿ, ತಮ್ಮ ಐಫೋನ್ ಪಕ್ಕದಲ್ಲಿ ಹಿಡಿದು ಹೆಲೋ ಮಿ. ಮೋದಿ ಎಂದು ತಮಾಷೆ ಮಾಡಿದ್ದಾರೆ.
ಗ್ಯಾರಂಟಿಗೆ ಗಡುವು ವಿಧಿಸಲು ಅವರ್ಯಾರು?: ಸಚಿವ ಪ್ರಿಯಾಂಕ್ ಖರ್ಗೆ
ರಷ್ಯಾ- ಉಕ್ರೇನ್ ಯುದ್ಧದ ವಿಚಾರದಲ್ಲಿ ಪಶ್ಚಿಮ ದೇಶಗಳ ಒತ್ತಡದ ನಡುವೆಯೂ ತಟಸ್ಥ ಧೋರಣೆ ಅನುಸರಿಸಿರುವ ನರೇಂದ್ರ ಮೋದಿ ಸರ್ಕಾರದ ನೀತಿಯನ್ನು ರಾಹುಲ್ ಗಾಂಧಿ ಬೆಂಬಲಿಸಿದ್ದಾರೆ. ಏನೇ ಇದ್ದರೂ ಭಾರತ ಕೊನೆಗೆ ತನ್ನ ಹಿತಾಸಕ್ತಿಯನ್ನು ನೋಡಿಕೊಳ್ಳುವುದು ಅಗತ್ಯ ಎಂದಿದ್ದಾರೆ.
ನಾವು ರಷ್ಯಾ ಜತೆ ಒಂದು ಸಂಬಂಧ ಹೊಂದಿದ್ದೇವೆ. ರಷ್ಯಾ ಮೇಲೆ ಕೆಲವು ಅವಲಂಬನೆಗಳನ್ನು ಹೊಂದಿದ್ದೇವೆ. ನಮ್ಮ ಸರ್ಕಾರ ಇದ್ದಾಗಲೂ ನಾನು ಇದೇ ರೀತಿಯ ನಿಲುವು ಪಡೆದುಕೊಳ್ಳುತ್ತಿದ್ದಾವು ಎಂದು ರಷ್ಯಾ ವಿಚಾರದಲ್ಲಿನ ಭಾರತದ ತಟಸ್ಥ ನೀತಿ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ.
RahulGandhi, #disqualification, #LokSabha,