ರಾಜೀವ್ ಗಾಂಧಿ ಜನ್ಮದಿನ : ತಂದೆಗೆ ಶ್ರದ್ಧಾಂಜಲಿ ಸಲ್ಲಿಸಿದ ರಾಹುಲ್, ಪ್ರಿಯಾಂಕಾ

Social Share

ನವದೆಹಲಿ,ಆ.20- ಭಾರತದ ಮಾಜಿ ಪ್ರಧಾನಿ, ರಾಜೀವ್ ಗಾಂಧಿ ಅವರ 78ನೇ ಜಯಂತಿ ಅಂಗವಾಗಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ವೀರ ಭೂಮಿಗೆ ತೆರಳಿ ತಮ್ಮ ತಂದೆಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ, ಸಂಸದ ಕೆ.ಸಿ.ವೇಣುಗೋಪಾಲ್, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ನಮನ ಸಲ್ಲಿಸಿದ್ದಾರೆ. ಹಾಗಯೇ ಹಲವಾರು ಸಚಿವರು ಮತ್ತು ನಾಯಕರು ಟ್ವೀಟ್ ಮಾಡಿ, ರಾಷ್ಟ್ರದ ಅಭಿವೃದ್ಧಿಗೆ ಮಾಜಿ ಪ್ರಧಾನಿಯವರ ಕೊಡುಗೆಯನ್ನು ನೆನಪಿಸಿಕೊಂಡಿದ್ದಾರೆ.

ತಮ್ಮ ತಂದೆಯನ್ನು ನೆನೆದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಅಪ್ಪ, ನೀವು ನನ್ನೊಂದಿಗೆ ಪ್ರತಿ ಕ್ಷಣ, ನನ್ನ ಹೃದಯದಲ್ಲಿದ್ದೀರಿ. ದೇಶಕ್ಕಾಗಿ ನೀವು ಕಂಡ ಕನಸನ್ನು ನನಸಾಗಿಸಲು ನಾನು ಯಾವಾಗಲೂ ಪ್ರಯತ್ನಿಸುತ್ತೇನೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷ ಕೂಡ ತನ್ನ ಅಧಿಕೃತ ಟ್ವಿಟ್ಟರ್‍ನಲ್ಲಿ , ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಅವರ ಜನ್ಮದಿನದಂದು ನಾವು ಪ್ರೀತಿಯಿಂದ ಸ್ಮರಿಸುತ್ತೇವೆ. 21ನೇ ಶತಮಾನದ ಭಾರತದ ವಾಸ್ತುಶಿಲ್ಪಿ ಎಂದು ಪ್ರಶಂಸಿಸಲ್ಪಟ್ಟಿದ್ದು, ಅವರ ದೂರದೃಷ್ಟಿಯ ಮೂಲಕ ಭಾರತದಲ್ಲಿ ಐಟಿ ಮತ್ತು ಟೆಲಿಕಾಂ ಕ್ರಾಂತಿಗೆ ನಾಂದಿ ಹಾಡಿತು ಎಂದಿದೆ.

ಮಾಜಿ ಪ್ರಧಾನಮಂತ್ರಿ ಭಾರತರತ್ನ ದಿವಂಗತ ರಾಜೀವ್ ಗಾಂಧಿ ಅವರ 78ನೇ ಜನ್ಮದಿನದಂದು ಅವರಿಗೆ ನಮನಗಳು. ರಾಜೀವ್ ಗಾಂಧಿ ಅವರು ಮಾಹಿತಿ ತಂತ್ರಜ್ಞಾನದ ಸಾಮಥ್ರ್ಯ ಮತ್ತು ಪ್ರಾಮುಖ್ಯತೆಯನ್ನು ಅರಿತು ಮೂರು ದಶಕಗಳ ಹಿಂದೆ ಭಾರತದಲ್ಲಿ ಅದರ ಅಡಿಪಾಯ ಹಾಕಿದವರು ಎಂದು ಸ್ಮರಿಸಿದೆ.

ಈ ದಿನವನ್ನು ಮಹಿಳಾ ರಾಜಕೀಯ ಸಬಲೀಕರಣ ದಿನವನ್ನಾಗಿ ಆಚರಿಸುವುದಾಗಿ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ತಿಳಿಸಿದ್ದು, 73 ಮತ್ತು 74ನೇ ತಿದ್ದುಪಡಿಯ ಮೂಲಕ ಮಹಿಳೆಯರಿಗೆ ತಳಮಟ್ಟದ ನಾಯಕತ್ವವನ್ನು ಒದಗಿಸುವಲ್ಲಿ ರಾಜೀವ್ ಗಾಂಧಿ ಅವರ ಕೊಡುಗೆ ಅಪಾರ. ಅವರಿಂದಾಗಿ ಮಹಿಳಾ ಕಾಂಗ್ರೆಸ್ ಇಂದು ಮಹಿಳಾ ರಾಜಕೀಯ ಸಬಲೀಕರಣ ದಿನವನ್ನು ಆಚರಿಸುತ್ತದೆ ಎಂದು ಪಕ್ಷದ ಮಹಿಳಾ ವಿಭಾಗವು ಟ್ವೀಟ್ ಮಾಡಿದೆ.

ರಾಜ್ಯ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಟ್ವಿಟರ್ ಹ್ಯಾಂಡಲ್‍ಗಳು ದಿವಂಗತ ಪ್ರಧಾನಿಯನ್ನು ನೆನಪಿಸಿಕೊಂಡಿವೆ ಮತ್ತು ಈ ದಿನವನ್ನು ಗುರುತಿಸಲು ಆಚರಣೆಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಘೋಷಿಸಿವೆ.

ರಾಜೀವ್ ಗಾಂಧಿಯವರ 78ನೇ ಜನ್ಮದಿನದ ಅಂಗವಾಗಿ ಆಯೋಜಿಸಲಾದ ವೈದ್ಯಕೀಯ ಶಿಬಿರದ ಕುರಿತು ಭಾರತೀಯ ಯುವ ಕಾಂಗ್ರೆಸ್ ಮೈಕ್ರೋಬ್ಲಾಗಿಂಗ್ ಸೈಟ್‍ನಲ್ಲಿ ಟ್ವೀಟ್ ಮಾಡಿದೆ. ಈ ದಿನವನ್ನು ಆಚರಿಸಲು ಇಂದು ಬೆಳಗ್ಗೆ 9:30ಕ್ಕೆ ಸದ್ಭಾವನಾ ದಿವಸ್ ನಡೆಸುವುದಾಗಿ ಗೋವಾ ಕಾಂಗ್ರೆಸ್ ಟ್ವೀಟ್‍ನಲ್ಲಿ ತಿಳಿಸಿದೆ.

ಒಡಿಶಾ ಕಾಂಗ್ರೆಸ್ ಸೇವಾದಳವು ರಾಜೀವ್ ಗಾಂಯವರ ಖಾಸಗಿ ಪೈಲಟ್ ಪರವಾನಗಿಯ ಚಿತ್ರವನ್ನು ಪೋಸ್ಟ್ ಮಾಡಿ ರಾಜೀವ್ ಗಾಂಧಿ ಅವರು ವಾಣಿಜ್ಯ ಪೈಲಟ್‍ಗಳ ಪರವಾನಗಿ ಹೊಂದಿದ್ದರು ಮತ್ತು ದೇಶೀಯ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಇಂಡಿಯನ್ ಏರ್‍ಲೈನ್ಸ್‍ನಲ್ಲಿ ಪೈಲಟ್ ಆಗಿದ್ದರು ಎಂದು ತಿಳಿಸಿದೆ.

Articles You Might Like

Share This Article