ಚಂಡೀಗಢ,ಜ.10-ಹರಿದ ಬಟ್ಟೆಯಲ್ಲಿದ್ದ ಮೂವರು ಬಡ ಹೆಣ್ಣು ಮಕ್ಕಳನ್ನು ಕಂಡ ನಂತರ ನಾನು ಚಳಿಯಲ್ಲೂ ಟೀ ಶರ್ಟ್ ಧರಿಸಲು ಕಾರಣ ಎಂದು ರಾಹುಲ್ಗಾಂಧಿ ಬಹಿರಂಗಪಡಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಯುದ್ದಕ್ಕೂ ಅವರು ಟೀ ಶರ್ಟ್ ಧರಿಸಿ ಗಮನ ಸೆಳೆದಿದ್ದರು. ಯಾತ್ರೆ ಮೈ ಕೊರೆಯುವ ಉತ್ತರಭಾರತಕ್ಕೆ ಆಗಮಿಸಿದಾಗಲೂ ಅವರು ಟೀ ಶರ್ಟ್ ಬಿಟ್ಟು ಬೇರೆ ಬಟ್ಟೆ ಧರಿಸಿರಲಿಲ್ಲ. ಇದನ್ನು ಕಂಡ ಮಾಧ್ಯಮದವರು ನೀವು ಮೈ ಕೊರೆಯುವ ಚಳಿಯಲ್ಲೂ ಟೀ ಶರ್ಟ್ ಧರಿಸಲು ಕಾರಣವೇನು ಎಂದಾಗ ಅವರು ಸತ್ಯ ಬಾಯ್ಬಿಟ್ಟಿದ್ದಾರೆ.
ಕೇರಳದಲ್ಲಿ ಒಂದು ದಿನ ಹರಿದ ಬಟ್ಟೆಯಲ್ಲಿದ್ದ ಮೂವರು ಬಡ ಹೆಣ್ಣು ಮಕ್ಕಳು ನನ್ನ ಬಳಿಗೆ ಬಂದರು ಅವರು ಮೈ ಕೊರೆಯುವ ಚಳಿಯಿಂದ ನಡುಗುತ್ತಿದ್ದರು. ಆಗಲೇ ನಾನು ಇನ್ನು ಮುಂದೆ ಎಂತಹ ಚಳಿಯಲ್ಲೂ ಉಣ್ಣೆ ಬಟ್ಟೆ ಧರಿಸುವುದಿಲ್ಲ ಎಂದು ಶಪಥ ಮಾಡಿದ್ದೆ ಎಂದು ಅವರು ತಿಳಿಸಿದ್ದಾರೆ.
ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಭೂಕಂಪ
ನನ್ನ ಬಳಿಗೆ ಬಂದ ಮೂವರು ಹುಡುಗಿಯರಿಗೆ ನಾನು ಇಲ್ಲಿಂದಲೇ ಸಂದೇಶ ನೀಡಲು ಬಯಸುತ್ತೇನೆ ನಿಮಗೆ ಚಳಿ ಇದ್ದರೆ ರಾಹುಲ್ಗಾಂಧಿಗೂ ಯಾವಾಗಲೂ ಚಳಿ ಇರುತ್ತದೆ ಎನ್ನುವುದನ್ನು ನೀವು ಮರೆಯಬೇಡಿ ಎಂದು ಅವರು ತಿಳಿಸಿದ್ದಾರೆ.
ಕಳೆದ ವಾರ ಅವರು ಉತ್ತರಪ್ರದೇಶದಲ್ಲಿ ಮಾಧ್ಯಮಗಳು ತಮ್ಮ ಉಡುಗೆಯನ್ನು ಹೈಲೈಟ್ ಮಾಡುತ್ತಿವೆ ಆದರೆ ಬಡ ರೈತರು ಮತ್ತು ಕಾರ್ಮಿಕರು ಹರಿದ ಬಟ್ಟೆಯಲ್ಲಿ ತಮ್ಮೊಂದಿಗೆ ನಡೆಯುವುದನ್ನು ಗಮನಿಸುವುದಿಲ್ಲ ಎಂದು ಹೇಳಿದ್ದರು.
ನಾನು ಟೀ ಶರ್ಟ್ನಲ್ಲಿ ಇರುವುದು ನಿಜವಾದ ಪ್ರಶ್ನೆಯಲ್ಲ, ದೇಶದ ರೈತರು, ಬಡ ಕಾರ್ಮಿಕರು ಮತ್ತು ಅವರ ಮಕ್ಕಳು ಹರಿದ ಬಟ್ಟೆ, ಟಿ-ಶರ್ಟ್ಗಳು ಮತ್ತು ಸ್ವೆಟರ್ಗಳಿಲ್ಲದೆ ಏಕೆ ಇದ್ದಾರೆ ಎಂಬುದು ನಿಜವಾದ ಪ್ರಶ್ನೆ ಎಂದು ಅವರು ಭಾಗಪತ್ನಲ್ಲಿ ಹೇಳಿದ್ದರು.
Rahul Gandhi, reveals, real, reason, behind, Tshirt,