ಇಂದೋರ್, ನ.28- ಭಾರತ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದ ರಾಹುಲ್‍ಗಾಂಧಿ ಇಂದು ಸೈಕಲ್ ಸವಾರಿಯ ಮೂಲಕ ಗಮನ ಸೆಳೆದರು.ಇಂದು ಬೆಳಗ್ಗೆ ಇಂದೋರ್‍ನ ಗಣಪತಿ ಚೌಕದಿಂದ ಯಾತ್ರೆ ಆರಂಭಗೊಂಡಿದ್ದು, ಯಾತ್ರೆಗೆ ಬೆಂಬಲ ವ್ಯಕ್ತ ಪಡಿಸಿ ಹಿರಿಯ ಸೈಕಲ್ ಯಾತ್ರಿಗಳು ಭಾಗವಹಿಸಿದ್ದರು.
ಈ ವೇಳೆ ಸೈಕ್ಲಿಸ್ಟ್ ಒಬ್ಬರು ರಾಹುಲ್‍ಗಾಂಧಿಗೆ ಸೈಕಲ್ ನೀಡಿ ಸವಾರಿ ಮಾಡಲು ಆಹ್ವಾನಿಸಿದರು. ರಾಹುಲ್‍ಗಾಂ ಸ್ವಲ್ಪ ದೂರ ಸೈಕಲ್ ಸವಾರಿ ನಡೆಸಿದರು. ಇದಕ್ಕೂ ಮುನ್ನಾ ನಿನ್ನೆ ಬುಲೇಟ್ ಸವಾರಿ ಮಾಡುವ ಮೂಲಕ ರಾಹುಲ್ ಗಮನ ಸೆಳೆದಿದ್ದರು.
ಖ್ಯಾತ ಉರ್ದು ಸಾಹಿತಿ ರಹತ್ ಇಂದೋರಿ ಅವರ ಪುತ್ರ ಸತ್ಲಜ್ ರಹತ್ ಅವರು ಇಂದು ಯಾತ್ರೆಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದ್ದರು ಮತ್ತು ಎರಡು ಪುಸ್ತಕಗಳನ್ನು ರಾಹುಲ್‍ಗಾಂಧಿಯವರಿಗೆ ನೀಡಿದರು.
ದೆಹಲಿಯಲ್ಲಿ ಮತ್ತೊಂದು ವಿಕೃತ ಕೊಲೆ, ಪತಿಯನ್ನು 22 ತುಂಡು ಮಾಡಿದ ಪತ್ನಿ ಮತ್ತು ಪುತ್ರ..!
ಎಲ್ಲರನ್ನೂ ಒಳಗೊಳ್ಳುವಿಕೆಯ ಸದುದ್ದೇಶ ಹೊಂದಿರುವ ಈ ಯಾತ್ರೆ ಸೆಪ್ಟಂಬರ್ 7ರಿಂದ ಆರಂಭಗೊಂಡಿದೆ. ತಮಿಳುನಾಡಿನ ಕನ್ಯಾಕುಮಾರಿಯಿಂದ ಶುರುವಾದ ಪಾದಯಾತ್ರೆ ತಮಿಳುನಾಡು, ಕೇರಳ, ಕರ್ನಾಟಕ, ತೆಲೆಂಗಾಣ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಸಂಚರಿಸಿದೆ.
ಮಧ್ಯ ಪ್ರದೇಶಕ್ಕೆ ನವೆಂಬರ್ 23ರಂದು ಪ್ರವೇಶ ಪಡೆದಿದ್ದು ಒಟ್ಟು 12 ದಿನಗಳ ಯಾತ್ರೆಯಲ್ಲಿ 380 ಕಿಲೋ ಮೀಟರ್ ಸಂಚರಿಸಲಿದೆ. ಡಿಸೆಂಬರ್ 4ರಂದು ರಾಜಸ್ಥಾನಕ್ಕೆ ಪ್ರವೇಶ ಪಡೆಯಲಿದೆ.ಕಳೆದ ಆರು ದಿನಗಳಿಂದ ರಾಜ್ಯದಲ್ಲಿ ಯಾತ್ರೆ ಬುರಹನ್‍ಪುರ್, ಖಂಡ್ವಾಡ, ಖರ್‍ಗೋನ್ ಮತ್ತು ಇಂದೋರ್ ಜಿಲ್ಲೆಗಳನ್ನು ಹಾದು ಹೋಗುತ್ತಿದೆ.
#RahulGandhi, #ridesbike, #BharatJodoYatra,