ಬ್ರಿಟನ್ ಸಂಸತ್‍ನಲ್ಲಿ ರಾಹುಲ್ ಭಾಷಣ

Social Share

ಲಂಡನ್,ಮಾ.6- ಹತ್ತು ದಿನಗಳ ಬ್ರಿಟನ್ ಪ್ರವಾಸದಲ್ಲಿರುವ ಸಂಸದ ರಾಹುಲ್‍ಗಾಂಧಿ ಅವರು ಇಂದು ಅಲ್ಲಿನ ಸಂಸತ್‍ನಲ್ಲಿ ಭಾಷಣ ಮಾಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ಕೆಂಬ್ರಿಡ್ಜ್ ವಿವಿಯಲ್ಲಿ ಅವರು ಮಾಡಿದ ಭಾಷಣ ದೇಶದ ಮಾನವನ್ನು ಹರಾಜು ಹಾಕಿತ್ತು ಎಂದು ಬಿಜೆಪಿ ಆರೋಪಿಸಿರುವ ಬೆನ್ನಲ್ಲೆ ರಾಹುಲ್‍ಗಾಂಧಿ ಅವರು ಬ್ರಿಟನ್ ಸಂಸತ್ ಉದ್ದೇಶಿಸಿ ಇಂದು ಮಾತನಾಡಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ್ದ ರಾಹುಲ್ ಅವರು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ದೇಶದ ಸಾಧನೆಗಳನ್ನು ಅಪಖ್ಯಾತಿ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶದ ಘನತೆ ತಗ್ಗಿಸಿದ್ದಾರೆ ಎಂದು ಆರೋಪಿಸಿದ್ದರು.

ಬಿಗ್‍ಬಿ ಪಕ್ಕೆಲುಬು ಮುರಿತ, ಪ್ರಾಣಾಪಾಯದಿಂದ ಪಾರು

ರಾಹುಲ್ ಗಾಂಧಿ ಅವರು ಬ್ರಿಟನ್‍ನಲ್ಲಿ ನೆಲೆಸಿರುವ ಭಾರತೀಯರನ್ನು ಭೇಟಿ ಮಾಡಲಿದ್ದಾರೆ ಮತ್ತು ಖಾಸಗಿ ವ್ಯಾಪಾರ ಸಭೆಗಳನ್ನು ನಡೆಸಲಿದ್ದಾರೆ ಎಂದು ವರದಿಯಾಗಿದೆ. ಲಂಡನ್ ಮೂಲದ ಥಿಂಕ್ ಟ್ಯಾಂಕ್ ಚಾಥಮ್ ಹೌಸ್‍ನಲ್ಲಿಯೂ ಅವರು ಮಾತನಾಡಲಿದ್ದಾರೆ.

Rahul Gandhi, set, speak, British Parliament,

Articles You Might Like

Share This Article