ಪಾದಯಾತ್ರೆಯಲ್ಲಿ ಇದ್ದಕ್ಕಿದ್ದಂತೆ ಓಡಿದ ರಾಹುಲ್, ಭದ್ರತಾ ಸಿಬ್ಬಂದಿ ಕಕ್ಕಾಬಿಕ್ಕಿ

Social Share

ಜಡೇಚರ್ಲ,ಅ.30- ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ಅಖಿಲ ಭಾರತ ಮಟ್ಟದ ಐಕ್ಯತಾ ಯಾತ್ರೆ ತೆಲಂಗಾಣ ರಾಜ್ಯದಲ್ಲಿಂದು 5ನೇ ದಿನಕ್ಕೆ ಕಾಲಿಟ್ಟಿದ್ದು, ಓಟದ ಸ್ಪರ್ಧೆಯಾಗಿ ಪರಿವರ್ತನೆಯಾಗಿತ್ತು.
ಇಂದಿನ ಪಾದಯಾತ್ರೆಯಲ್ಲಿ ಸುಮಾರು 22 ಕಿ.ಮೀ ಸಂಚರಿಸುವ ಮಾರ್ಗ ನಕ್ಷೆ ಸಿದ್ದಗೊಂಡಿತ್ತು. ಎಂದಿನಂತೆ ಬೆಳಗ್ಗೆ ರಾಹುಲ್ ಗಾಂಧಿ ಪಾದಯಾತ್ರೆ ಆರಂಭಿಸಿದರು.

ಭದ್ರತಾ ಸಿಬ್ಬಂದಿಗಳು, ಕಾಂಗ್ರೆಸ್ ನಾಯಕರು ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರ ಮುಂದೆ ಹೆಜ್ಜೆ ಹಾಕುತ್ತಿದ್ದರು. ಒಂದು ಹಂತದಲ್ಲಿ ಮಕ್ಕಳು ಜೊತೆಗೂಡಿದರು. ಈ ಹಂತದಲ್ಲಿ ರಾಹುಲ್ ಗಾಂಧಿ ಇದ್ದಕ್ಕಿದ್ದಂತೆ ಓಡಲಾರಂಭಿಸಿದರು. ಇದು ಕಾಂಗ್ರೆಸ್ ನಾಯಕರು ಹಾಗೂ ಭದ್ರತಾ ಸಿಬ್ಬಂದಿಗಳಿಗೆ ಏದುಸಿರು ಬಿಡುವಂತೆ ಮಾಡಿತ್ತು.

ಕಾಲ್ನಡಿಗೆ ಜಾಥಾ ಏಕಾಏಕಿ ಓಟದ ಸ್ಪರ್ಧೆಯಾಗಿ ಮಾರ್ಪಟ್ಟಿದ್ದರಿಂದ ರಾಹುಲ್ ಗಾಂಧಿ ಅವರಿಗೆ ಸಮನಾಗಿ ಓಡಲಾಗದೆ ತೆಲಂಗಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಹಾಗೂ ಇತರರು ವೇಗದ ನಡಿಗೆ ಮೂಲಕ ಮುಂದೆ ಸಾಗಿದ್ದ ರಾಹುಲ್‍ರನ್ನು ಕೂಡಿಕೊಳ್ಳುವ ಪ್ರಯತ್ನ ಮಾಡಿದರು. ಭದ್ರತಾ ಸಿಬ್ಬಂದಿಗಳು ಕೂಡ ಸ್ವಲ್ಪ ದೂರ ಓಡಿ ಏದುಸಿರು ಬಿಟ್ಟರು.

ಪತ್ರಕರ್ತರಿಗೆ ಆಮಿಷವೊಡ್ಡುವ ಕೆಲಸ ಮಾಡಿಲ್ಲ : ಸಿಎಂ ಸ್ಪಷ್ಟನೆ

ಇಂದು ಸಂಜೆ ರಾಹುಲ್ ಗಾಂಧಿ ಅವರು ಶಾದ್ನಾಗರ್ ಬಳಿಯ ಸೋನಿಪುರ್ ಜಂಕ್ಷನ್‍ನಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ರಾತ್ರಿ ಜಡೇಚರ್ಲ ಜಂಕ್ಷನ್‍ನಲ್ಲಿ ತಂಗಲಿದ್ದಾರೆ.

ವಿಧಾನಸಭೆಗೆ ಚುನಾವಣೆ ಎದುರಿಸಲಿರುವ ತೆಲಂಗಾಣ ರಾಜ್ಯದಲ್ಲಿ ರಾಹುಲ್ ಗಾಂಧಿ ಅವರ ಯಾತ್ರೆ ಇಲ್ಲಿಯವರೆಗೂ 19 ವಿಧಾನಸಭಾ ಕ್ಷೇತ್ರ ಮತ್ತು 06 ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ.
ಒಟ್ಟು 375 ಕಿ.ಮೀ ಯಾತ್ರೆ ಕ್ರಮಿಸಲಿದ್ದು, ನ.7ಕ್ಕೆ ಮಹಾರಾಷ್ಟ್ರ ಪ್ರವೇಶಿಸಲಿದೆ. ಅದಕ್ಕೂ ಮೊದಲು ನ.4ರಂದು ಒಂದು ದಿನದ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ. ಎಂದಿನಂತೆ ಯಾತ್ರೆಗೆ ಹಲವಾರು ಪ್ರಗತಿಪರರು, ರೈತರು, ಕಾರ್ಮಿಕರು, ಉದ್ಯಮಿಗಳು, ಯುವ ಸಮೂಹ ಬೆಂಬಲ ವ್ಯಕ್ತಪಡಿಸಿದೆ.

ಸೋಮಾಲಿಯಾ : ಕಾರ್ ಬಾಂಬ್‍ ಸ್ಪೋಟಕ್ಕೆ 100ಕ್ಕೂ ಹೆಚ್ಚು ಮಂದಿ ಬಲಿ

ಆಂದ್ರಪ್ರದೇಶ ವಿಭಜನೆಯಾಗಿ ತೆಲಂಗಾಣ ಪ್ರಾಂತ್ಯಕ್ಕೆ ರಾಜ್ಯದ ಸ್ಥಾನಮಾನ ನೀಡಿದ್ದು ಯುಪಿಎ ಸರ್ಕಾರದ ಅವಯಲ್ಲಿ. ಆದರೂ ರಾಜ್ಯದಲ್ಲಿ ಕಾಂಗ್ರೆಸ್ ನಿರೀಕ್ಷಿತ ಮಟ್ಟದಲ್ಲಿ ಚೇತರಿಸಿಕೊಳ್ಳದೆ ದುರ್ಬಲವಾಗಿದೆ.
ಕೆಸಿಆರ್ ನೇತೃತ್ವದ ಟಿಆರ್‍ಎಸ್ ಅಪತ್ಯ ಸಾಧಿಸಿದೆ. ಈ ಬಾರಿ ಕಾಂಗ್ರೆಸ್‍ನ್ನು ಸದೃಢಗೊಳಿಸಲು ರಾಹುಲ್ ಗಾಂಧಿ ಸಂಕಲ್ಪ ತೊಟ್ಟಿದ್ದು, ಈ ಯಾತ್ರೆ ಪಕ್ಷದ ಗೆಲುವಿಗೆ ನೆರವಾಗಬಹುದು ಎಂಬ ಭರವಸೆ ಮೂಡಿಸಿದೆ.

Articles You Might Like

Share This Article