ವರ್ಷಪೂರ್ತಿ ವರ್ಚಸ್ಸು ಕಾಪಾಡಿಕೊಂಡರೆ ರಾಹುಲ್ ರಾಜಕೀಯವಾಗಿ ಯಶಸ್ವಿ

Social Share

ಮುಂಬೈ, ಜ.1- ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿಯವರು ಈ ವರ್ಷ ಪೂರ್ತಿ ತಮ್ಮ ವರ್ಚಸ್ಸನ್ನು ಕಾಪಾಡಿಕೊಳ್ಳಲು ಯಶಸ್ವಿಯಾದರೆ 2024ರ ವೇಳೆಗೆ ರಾಜಕೀಯವಾಗಿ ಮಹತ್ವದ ಬದಲಾವಣೆಗಳಾಗಲಿವೆ ಎಂದು ಶಿವಸೇನೆ ಬಾಳಾಠಾಕ್ರೆ ಬಣದ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.

ಪಕ್ಷದ ಮುಖವಾಣಿ ಸಾಮ್ನದಲ್ಲಿ ತಮ್ಮ ಖಾಯಂ ಅಂಕಣದಲ್ಲಿ ಹಿಂದಿನ ವರ್ಷದ ನೆನಪುಗಳು ಮತ್ತು ಮುಂದಿನ ದಿನಗಳ ಬೆಳವಣಿಗೆಗಳ ಬಗ್ಗೆ ವಿಶ್ಲೇಷಣೆ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಮಾಜದಲ್ಲಿ ದ್ವೇಷ ಮತ್ತು ವಿಭಜನೆಯ ಬೀಜಗಳನ್ನು ಬಿತ್ತ ಬಾರದು ಎಂದು ಒತ್ತಾಯಿಸಿದ್ದಾರೆ. ರಾಮಮಂದಿರ ವಿವಾದ ಮುಕ್ತಾಯವಾಗಿದೆ. ಈಗ ಆ ವಿಷಯದ ಮೇಲೆ ಮತ ಕೇಳಲು ಸಾಧ್ಯವಿಲ್ಲ. ಅದಕ್ಕಾಗಿ ಲವ್ ಜಿಹಾದ್ ಎಂಬ ಹೊಸ ವಿವಾದವನ್ನು ಹುಡುಕಿಕೊಂಡಿದ್ದಾರೆ. ಲವ್ ಜಿಹಾದ್ ಎಂಬ ಆಯುಧ ಚುನಾವಣೆಗಳಲ್ಲಿ ಗೆಲ್ಲಲು ಮತ್ತು ಹಿಂದುಗಳಲ್ಲಿ ಭಯ ಸೃಷ್ಟಿಸಲು ಬಳಕೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದೇಶ್ವರ ಶ್ರೀಗಳ ಆರೋಗ್ಯದಲ್ಲಿ ಏರುಪೇರು

ದೆಹಲಿಯಲ್ಲಿ ಭೀಕರವಾಗಿ ಕೊಲ ಮಾಡಲ್ಪಟ್ಟ ಮುಂಬೈನ ಶ್ರದ್ಧಾ ವಾಲ್ಕರ್, ನಟಿ ತುನಿಶಾ ಶರ್ಮಾ ಅವರ ಸಾವು ಲವ್ ಜಿಹಾದ್ ಪ್ರಕರಣಗಳಲ್ಲ. ಆದರೆ ಯಾವುದೇ ಸಮುದಾಯದ ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗಬಾರದು ಎಂದು ಪ್ರತಿಪಾದಿಸಿದ್ದಾರೆ.

ಬಲಪಂಥೀಯರು ಹೇಳುವಂತೆ ಲವ್ ಜಿಹಾದ್ ಎಂಬುದು ಮುಸ್ಲಿಂ ಪುರುಷರು, ಹಿಂದು ಮಹಿಳೆಯರನ್ನು ಮತಾಂತರಗೊಳಿಸಲು ಬಳಸುವ ವಿಧಾನ. 2023ರಲ್ಲಿ ಈ ವಿಷಯಕ್ಕೆ ದೇಶವನ್ನು ಹೆದರಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ರಾಜಕೀಯ ಶಕ್ತಿಯಲ್ಲಿ ಏನಾಗುತ್ತಿದೆ ಎಂಬುದು ಎಲ್ಲರಿಗೂ ಅರಿವಾಗುತ್ತಿದೆ. ರಾಹುಲ್‍ಗಾಂಧಿ ಅವರ ಯಾತ್ರೆ ಯಶಸ್ವಿಯಾಗಿದ್ದು, ತನ್ನ ಉದ್ದೇಶಗಳನ್ನು ಸಾಧಿಸಲು ಸಾಧ್ಯವಾಗಿದೆ. ರಾಹುಲ್‍ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆಯನ್ನು ಸೆ.7ರಂದು ಆರಂಭಿಸಿದ್ದಾರೆ.

ರಾಹುಲ್‍ಗಾಂಧಿ ಅವರ ನಾಯಕತ್ವಕ್ಕೆ 2022 ಹೊಸ ಪ್ರಕಾಶಮಾನ ಮತ್ತು ವರ್ಚಸ್ಸನ್ನು ತಂದು ಕೊಟ್ಟಿದೆ. ಇದು 2023ರಲ್ಲೂ ಮುಂದುವರೆದರೆ 2024ರ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ರಾಜಕೀಯ ಬದಲಾವಣೆಗಳನ್ನು ನಾವು ಕಾಣಬಹುದು. ನಾವು ಸಂಕುಚಿತ ಮನೋಭಾವದಿದ ದೂರ ಇರಬೇಕು ಎಂದು ಪ್ರಾಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ ಈ ದೋರಣೆ ಬಿಜೆಪಿ ಆಡಳಿತದಲ್ಲೇ ಹೆಚ್ಚಾಗಿ ಕಾಣುತ್ತಿದೆ ಎಂದು ಆರೋಪಿಸಿದರು.

ನಂದಿನಿ ತಂಟೆಗೆ ಬಂದರೆ ಬಿಜೆಪಿ ಭಸ್ಮ : ಹೆಚ್.ಡಿ.ಕುಮಾರಸ್ವಾಮಿ

ಜನರಲ್ಲಿ ಜಾಗೃತಿ ಹೆಚ್ಚಾಗಿದೆ. ಬಿಜೆಪಿಯ ಅಜೆಂಡಾಗಳು ಜನರಿಗೆ ಅರ್ಥವಾಗಿವೆ. ನಿರುದ್ಯೋಗ ಮತ್ತು ಬೆಲೆ ಏರಿಕೆಗಳು ಹೆಚ್ಚಾಗಿವೆ. ಆ ವಿಚಾರಗಳನ್ನು ಮರೆ ಮಾಚಲು ಮೋದಿ ಮತ್ತು ಅಮಿತ್ ಶಾ ಸಮಾಜದಲ್ಲಿ ದ್ವೇಷ ಮತ್ತು ವಿಭಜನೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

Rahul Gandhi, this year, political, change, Sanjay Raut,

Articles You Might Like

Share This Article