ನವದೆಹಲಿ, ಆ.8- ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶದ ನಿರುದ್ಯೋಗದ ಸಮಸ್ಯೆ ತೀವ್ರವಾಗಿ ಹೆಚ್ಚಾಗಿದ್ದು, ಪಾಕಿಸ್ತಾನ, ಶ್ರೀಲಂಕಾಗಿಂತಲೂ ದನನೀಯ ಸ್ಥಿತಿಯಲ್ಲಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ, ಜಾಗತಿಕ ನಿರುದ್ಯೋಗದ ಸೂಚ್ಯಂಕವನ್ನು ಮರುಪ್ರಕಟಿಸಿದ್ದು, ಅಗತ್ಯ ಇರುವುದು ಮನೆ ಮನೆಗೆ ಉದ್ಯೋಗ ತಲುಪಿಸುವುದು, ಆದರೆ ವಾಸ್ತವವಾಗಿರುವುದು ಪ್ರತಿ ಮನೆಯಲ್ಲೂ ನಿರುದ್ಯೋಗವಿದೆ ಎಂದು ಕಿಡಿಕಾರಿದ್ದಾರೆ.
15ರಿಂದ 24 ವರ್ಷದೊಳಗಿನ ನಿರುದ್ಯೋಗದ ಪ್ರಮಾಣ ಜಪಾನ್‍ನಲ್ಲಿ ಶೇ.4.4ರಷ್ಟಿದ್ದರೆ, ಜರ್ಮನಿಯಲ್ಲಿ ಶೇ.6.9ರಷ್ಟಿದೆ, ಇಸ್ರೇಲ್‍ನಲ್ಲಿ ಶೇ.8.8, ಪಾಕಿಸ್ತಾನದಲ್ಲಿ 9.4, ನೇಪಾಳದಲ್ಲಿ ಶೇ.9.5, ಅಮೆರಿಕಾದಲ್ಲಿ ಶೇ.9.6, ಶ್ರೀಲಂಕಾದಲ್ಲಿ ಶೇ.26.1ರಷ್ಟಿದ್ದರೆ, ಭಾರತದಲ್ಲಿ ಶೇ.28.3ರಷ್ಟು ನಿರುದ್ಯೋಗವಿದೆ ಎಂದು ಜಾಗತಿಕ ವರದಿ ತಿಳಿಸಿದೆ.
ರಾಹುಲ್‍ಗಾಂಧಿ ಅದನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.
ज़रूरत: घर-घर रोज़गार
असलियत: हर घर बेरोज़गार pic.twitter.com/ISx1FJkUut
— Rahul Gandhi (@RahulGandhi) August 8, 2022