ಬಘ್ಪತ್,ಜ.4- ಹೊಸ ವರ್ಷ ರಜಾದಿನಗಳ ಬಿಡುವಿನ ಬಳಿಕ ಪುನರ್ ಆರಂಭವಾದ ಭಾರತ್ ಜೋಡೋ ಯಾತ್ರೆಯಲ್ಲಿ ಅಮೇಥಿ ಕ್ಷೇತ್ರದ ಒಂದುವರೆ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಬಿಳಿ ಟಿ-ಶರ್ಟ್ ಧರಿಸಿ ಪಾಲ್ಗೋಳ್ಳುವ ಮೂಲಕ ಗಮನ ಸೆಳೆದರು.
ಇಂದು ಬೆಳಗ್ಗೆ ಬಘಪತ್ನ ಮವಿಕಲನ್ ಗ್ರಾಮದಿಂದ ಯಾತ್ರೆ ಪುನರ್ ಆರಂಭವಾಯಿತು. ಉತ್ತರ ಪ್ರದೇಶದಲ್ಲಿ ಎರಡು ದಿನಗಳ ಕಾಲ ಸಂಚರಿಸಿ ನಂತರ ಹರ್ಯಾಣದ ಪಾಣಿಪತ್ ಅನ್ನು ಗುರುವಾರ ಸಂಜೆ ಪ್ರವೇಶಿಸಲಿದೆ.
ರಾಹುಲ್ಗಾಂಧಿ ಮುರು ಬಾರಿ ಸಂಸದರಾಗಿದ್ದ ಅಮೇಥಿ ಕ್ಷೇತ್ರದ ಸಾವಿರಾರು ಕಾರ್ಯಕರ್ತರು ಇಂದು ಯಾತ್ರೆಯಲ್ಲಿ ಭಾಗವಹಿಸಿದ್ದರು.
ಎಲ್ಲರೂ ರಾಹುಲ್ಗಾಂಧಿ, ಪ್ರಿಯಾಂಕಗಾಂಧಿ ಭಾವಚಿತ್ರ ಹಾಗೂ ಹಿಂದಿಯಲ್ಲಿ ಭಾರತ್ ಜೋಡೋ ಯಾತ್ರೆ ಎಂದು ಬರೆದಿರುವ ಬಿಳಿ ಟಿ-ಶರ್ಟ್ಗಳನ್ನು ಧರಿಸಿದ್ದರು. ಉತ್ತರ ಪ್ರದೇಶ, ದೆಹಲಿಯಲ್ಲಿ ಅತ್ಯಕ ಶೀತಾಂಶ ದಾಖಲಾಗಿದೆ.
ಸಿಂಗಾರಗೊಂಡ ಸಿಎಂ ತವರು ಜಿಲ್ಲೆ ಹಾವೇರಿ, ಅಕ್ಷರ ಜಾತ್ರೆಗೆ ಕ್ಷಣಗಣನೆ
ಅದರಲ್ಲು ರಾಹುಲ್ಗಾಂಧಿ ಬೆಚ್ಚನೆಯ ಉಡುಪನ್ನು ಧರಿಸದೆ ಕೇವಲ ಟಿ-ಶರ್ಟ್ನಲ್ಲೇ ಪಾದಯಾತ್ರೆ ನಡೆಸುತ್ತಿರುವುದು ಭಾರೀ ಚರ್ಚೆಗೆ ಒಳಗಾಗಿದೆ. ತಮ್ಮ ಸಹೋದರ ಸತ್ಯ ಎಂಬ ಕವಚ ತೊಟ್ಟು ನಡೆಯುತ್ತಿದ್ದಾರೆ. ಹಾಗಾಗಿ ಅವರಿಗೆ ಚಳಿ ಮತ್ತು ಶೀತವಾಗುವುದಿಲ್ಲ ಎಂದು ನಿನ್ನೆ ಪ್ರಿಯಾಂಕ ಗಾಂಧಿ ಹೇಳಿದರು.
ರಾಹುಲ್ಗಾಂಧಿಗೆ ಬೆಂಬಲವಾಗಿ ಅಮೇಥಿ ಕ್ಷೇತ್ರದ ಕಾರ್ಯಕರ್ತರು ಕೇವಲ ಟಿ-ಶರ್ಟ್ ಧರಿಸಿಯೇ ಯಾತ್ರೆಯಲ್ಲಿ ಭಾಗವಹಿಸಿದ್ದು ಗಮನಾರ್ಹವಾಗಿತ್ತು. ಯಾತ್ರೆಯ ಮಧ್ಯಾಹ್ನದ ಬಿಡುವಿನ ವೇಳೆಯಲ್ಲಿ ರಾಹುಲ್ಗಾಂಧಿ ಯುವ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಅಮೇಥಿ ಲೋಕಸಭಾ ಕ್ಷೇತ್ರದಿಂದಲೇ ಸ್ರ್ಪಧಿಸುವಂತೆ ಕಾರ್ಯಕರ್ತರು ರಾಹುಲ್ಗಾಂಧಿಯವರನ್ನು ಒತ್ತಾಯಿಸಲಿದ್ದಾರೆ.
2019ರಲ್ಲಿ ಬಿಜೆಪಿಯ ಸೃತಿ ಇರಾನಿ ಅವರು ರಾಹುಲ್ಗಾಂಧಿಯವರನ್ನು ಸೋಲಿಸಿದರು. ಆ ವೇಳೆ ಪ್ರಧಾನಿ ಅಭ್ಯರ್ಥಿಯಾಗಿದ್ದ ರಾಹುಲ್ಗಾಂಧಿ ಕೇರಳದ ವಯನಾಡು ಕ್ಷೇತ್ರದಿಂದ ಸ್ರ್ಪಧಿಸಿ ಗೆದ್ದಿದ್ದರು. ಸೋಲು ಕಂಡ ಬಳಿಕ ರಾಹುಲ್ಗಾಂಧಿ ಅಮೇಥಿಯತ್ತ ಹೆಚ್ಚು ಭೇಟಿ ನೀಡಿಲ್ಲ. ಹೀಗಾಗಿ ರಾಹುಲ್ಗಾಂಧಿ ಮುಂದಿನ ಬಾರಿ ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಕುತೂಹಲ ಹೆಚ್ಚಿದೆ.
9 ತಿಂಗಳ ಹಿಂದೆ ಯುವಕನ ಕೊಲೆ, ಚಾರ್ಮುಡಿ ಘಾಟ್ನಲ್ಲಿ ಶವಕ್ಕಾಗಿ ಹುಡುಕಾಟ
ಅಮೆಥಿ ಜಿಲ್ಲೆಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅನಿಲ್ ಸಿಂಗ್ ರಾಹುಲ್ಗಾಂಧಿ ಅವರಿಗೆ ಮತ್ತು ಅಮೇಥಿ ಕ್ಷೇತ್ರಕ್ಕೆ ಅವಿನಾಭಾವ ಸಂಬಂಧ ಇದೆ. ಮುಂದಿನ ಬಾರಿ ಅವರು ಮತ್ತೆ ಅಮೇಥಿಯಿಂದಲೇ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಿದ್ದಾರೆ.
Rahul Gandhi, contest, 2024 Lok Sabha, polls, Amethi,