ರಾಯಚೂರು ತಲುಪಿದ ರಾಹುಲ್ ಭಾರತ್ ಜೋಡೋ ಯಾತ್ರೆ

Social Share

ರಾಯಚೂರು, ಅ.21- ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ಇಂದು ಆಂಧ್ರ ಪ್ರದೇಶದ ಮಂತ್ರಾಲಯದಿಂದ ರಾಯಚೂರು ಜಿಲ್ಲೆಯ ಗಿಲ್ಲೆಸುಗೂರು ಗ್ರಾಮಕ್ಕೆ ಆಗಮಿಸಿದೆ.

ಕಳೆದ ನಾಲ್ಕು ದಿನಗಳಿಂದ ಆಂಧ್ರ ಪ್ರದೇಶದಲ್ಲಿ ನಡೆದ ಯಾತ್ರೆಯಲ್ಲಿ ರಾಹುಲ್‍ಗಾಂಧಿ ಕಾರ್ಮಿಕರು, ಕೃಷಿಕರು, ಪೌರ ಕಾರ್ಮಿಕರು, ಉದ್ಯಮಿಗಳು ಸೇರಿದಂತೆ ಹಲವಾರು ಜನರೊಂದಿಗೆ ಸಂವಾದ ನಡೆಸಿದರು. ಇಂದಿನಿಂದ ಎರಡು ದಿನಗಳ ಕಾಲ ರಾಯಚೂರು ಜಿಲ್ಲೆಯಲ್ಲಿ ಪಾದಯಾತ್ರೆ ಸಂಚರಿಸಲಿದೆ. ರಾಜ್ಯದಲ್ಲಿ ಸೆ.30 ರಿಂದ ಅ.15ರ ವರೆಗೆ ನಿರಂತರವಾಗಿ ನಡೆದ ಪಾದಯಾತ್ರೆ ಮತ್ತು ಎರಡನೆ ಹಂತದಲ್ಲಿ ಈಗ ನಡೆಯುತ್ತಿರುವ ಯಾತ್ರೆ ಕೊನೆ ಹಂತ ತಲುಪಿದ್ದು, ಇಲ್ಲಿಂದ ತೆಲಂಗಾಣದತ್ತ ಪ್ರಯಾಣಿಸಲಿದೆ.

ಬೀದಿ ನಾಯಿಗಳಿಗೆ ಆಹಾರ ನೀಡದಂತೆ ಹೈಕೋರ್ಟ್ ಆದೇಶ

ರಾಜ್ಯದ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕರು ಮಂತ್ರಾಲಯದಿಂದಲೇ ರಾಹುಲ್‍ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದರು. ರಾಹುಲ್‍ಗಾಂಧಿ ಮಂತ್ರಾಲಯದ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು. ಹಾದಿ ಮಧ್ಯೆ ಕೋವಿಡ್‍ನಿಂದ ಸಂಕಷ್ಟಕ್ಕೊಳಗಾದವರು, ಜೀವಹಾನಿಗೊಳಗಾದ ಕುಟುಂಬದ ಸದಸ್ಯರು ಸೇರಿದಂತೆ ಹಲವರ ಜತೆ ಸಮಾಲೋಚನೆ ನಡೆಸಿದರು.

ಯುವ ಕಾರ್ಯಕರ್ತರು ರಾಹುಲ್‍ಗಾಂಧಿ ಅವರೊಂದಿಗೆ ಹೆಜ್ಜೆ ಹಾಕುವ ಮೂಲಕ ತಮ್ಮ ಸಮಸ್ಯೆಗಳ ಬಗ್ಗೆ ಹೇಳಿಕೊಂಡರು. ಆಂಧ್ರ ಪ್ರದೇಶದಿಂದ ರಾಯಚೂರು ಮಾರ್ಗದವರೆಗೂ ಸಾವಿರಾರು ಜನ ಯಾತ್ರೆಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.

ಎಂದಿನಂತೆ ರಾಹುಲ್‍ಗಾಂಧಿ ಚಿಕ್ಕ ಮಕ್ಕಳನ್ನು ಎತ್ತಿಕೊಳ್ಳುವುದು, ಹೆಗಲ ಮೇಲೆ ಕೂರಿಸಿಕೊಳ್ಳುವುದು, ಬಡವರು ಹಾಗೂ ಶೋಷಿತರನ್ನು ಆಲಂಗಿಸುವುದು ಸೇರಿದಂತೆ ಹಲವು ಚಟುವಟಿಕೆಗಳನ್ನು ಮುಂದುವರೆಸಿದರು.
ಭಾರತದ ಐಕ್ಯತೆ, ಸೌಹಾರ್ದತೆಗಾಗಿ ನಡೆಯುತ್ತಿರುವ ಈ ಯಾತ್ರೆ ನಿರುದ್ಯೋಗ, ಬೆಲೆ ಏರಿಕೆ, ಅವೈಜ್ಞಾನಿಕ ಜಿಎಸ್‍ಟಿ ವಿರುದ್ಧ ಜನಜಾಗೃತಿ ಮೂಡಿಸುತ್ತಿದೆ. ಸಂಜೆ ಗಿಲ್ಲೆಸುಗೂರಿನಿಂದ ಪಾದಯಾತ್ರೆ ಪುನರಾರಂಭವಾಗಲಿದ್ದು, ಕೆರೆಬೂದೂರು ಗ್ರಾಮದವರೆಗೂ ನಡೆಯಲಿದೆ. ರಾತ್ರಿ ಯರಗೇರ ಗ್ರಾಮದ ಬಸ್ ನಿಲ್ದಾಣದಲ್ಲಿ ರಾಹುಲ್‍ಗಾಂಧಿ ವಿಶ್ರಾಂತಿ ಪಡೆಯಲಿದ್ದಾರೆ.

ಗಾಂಧಿ ಕುಟುಂಬ ಪ್ರಭಾವದೆದುರು ಈಜುವುದೇ ಖರ್ಗೆ ಮುಂದಿರುವ ಬೃಹತ್ ಸವಾಲು

ಯಾತ್ರೆಯುದ್ದಕ್ಕೂ ಎಲ್ಲಿಯೂ ಐಷಾರಾಮಿ ಹೊಟೇಲ್‍ಗಳು ಅಥವಾ ಸೌಲಭ್ಯಗಳಿರುವ ಮನೆಗಳಲ್ಲಿ ರಾಹುಲ್‍ಗಾಂಧಿ ತಂಗಿಲ್ಲ. ಬದಲಾಗಿ ಕನ್ಯಾಕುಮಾರಿಯಿಂದಲೂ ತಮ್ಮೊಂದಿಗೆ ಸಂಚರಿಸುತ್ತಿರುವ ಕ್ಯಾರವಾನ್ ವಾಹನಗಳಲ್ಲೇ ಮಲಗುವುದು, ವಿಶ್ರಾಂತಿ ಪಡೆಯುವುದನ್ನು ಮುಂದುವರೆಸಿದ್ದಾರೆ.

ಇಂದು ಮತ್ತು ನಾಳೆ ಎರಡು ದಿನಗಳ ಕಾಲ ರಾಜ್ಯದಲ್ಲಿ ಕಾರ್ಯಕರ್ತರು, ಮುಖಂಡರ ಜತೆ ರಾಹುಲ್ ಗಾಂಧಿ ಸಮಾಲೋಚನೆ ನಡೆಸಲಿದ್ದಾರೆ.

Articles You Might Like

Share This Article