ತೆಲಂಗಾಣ ಪ್ರವೇಶಿಸಿದ ರಾಹುಲ್ ಭಾರತ್ ಜೋಡೋ ಯಾತ್ರೆಗೆ ಅದ್ದೂರಿ ಸ್ವಾಗತ

Social Share

ಬೆಂಗಳೂರು,ಅ.23- ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ರಾಜಸುಯಜ್ಞ ಕರ್ನಾಟಕ-ತೆಲಂಗಾಣದ ಗಡಿಯಲ್ಲಿ ಐಕ್ಯವಾಗಿದ್ದು, ಪಾದಯಾತ್ರೆ ಕನ್ನಡನಾಡಿನಿಂದ ತೆಲುಗು ನಾಡಿಗೆ ಕಾಲಿರಿಸಿದೆ ಎಂದು ವಿಶ್ಲೇಷಿಸಲಾಗಿದೆ.

ತೆಲಂಗಾಣ ಕಾಂಗ್ರೆಸ್ ಟ್ವಿಟರ್‍ನಲ್ಲಿ ಹಂಚಿಕೊಳ್ಳಲಾದ ವಿಡಿಯೋ ದೃಶ್ಯಾವಳಿಯಲ್ಲಿ ಜನಸಾಗರವೇ ಕಂಡುಬರುತ್ತಿದೆ. ನಿನ್ನೆ ಸಂಜೆ ರಾಯಚೂರಿನಲ್ಲಿ ನಡೆದ ಪಾದಯಾತ್ರೆಯಲ್ಲಿ ಲಕ್ಷಾಂತರ ಜನ ಭಾಗವಹಿಸಿರುವ ವಿಡಿಯೋ ಭಾರೀ ವೈರಲ್ಲಾಗಿದ್ದವು.

ಇಂದು ಬೆಳಗ್ಗೆ ರಾಯಚೂರಿನ ಯರಮಾವುನಿಂದ ತೆಲಂಗಾಣದ ಗುಡೇಬೆಳ್ಳೂರು ಗಡಿಯ ಕೃಷ್ಣಾ ನದಿಯ ತಟದಲ್ಲಿ ಯಾತ್ರೆ ಬೃಹತ್ ಸಮಾವೇಶಗೊಂಡಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಷ್ಟ್ರ ಧ್ವಜವನ್ನು ತೆಲಂಗಾಣ ಕಾಂಗ್ರೆಸ್‍ನ ಅಧ್ಯಕ್ಷರಾದ ರೇವಂತ್ ರೆಡ್ಡಿ ಅವರಿಗೆ ಹಸ್ತಾಂತರಿಸಿದರು.

ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ರಾಹುಲ್ ಗಾಂ ಮಾತನಾಡಿದ್ದು, ಜನ ಅನುಭವಿಸುತ್ತಿರುವ ಬೆಲೆ ಏರಿಕೆ, ಅವೈಜ್ಞಾನಿಕ ಜಿಎಸ್‍ಟಿ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಬೇಕು, ಯುವಕರಿಗೆ ಉದ್ಯೋಗ ನೀಡಬೇಕು, ದುಸ್ತರವಾಗಿರುವ ಜನರ ಜೀವನ ಮಟ್ಟವನ್ನು ಸುಧಾರಿಸಬೇಕೆಂದು ಆಗ್ರಹಿಸಿದರು.

ತಮ್ಮ ವಿಡಿಯೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿದವನ ವಿರುದ್ಧ ದೂರು ನೀಡಿದ ಪ್ರತಿಭಾ ಕುಳಾಯಿ

ರಾಹುಲ್ ಗಾಂ ಅವರ ಮಾತುಗಳಿಗೆ ಜನಸಾಮಾನ್ಯರು ಶಿಳ್ಳೆ, ಚಪ್ಪಾಳೆಗಳ ಮೂಲಕ ಸ್ಪಂದಿಸಿದ್ದು, ಎಂದಿನಂತೆ ಇಂದಿನ ಯಾತ್ರೆಯಲ್ಲೂ ಮಕ್ಕಳು, ಜನಸಾಮಾನ್ಯರು ರಾಹುಲ್ ಅವರೊಂದಿಗೆ ಬೆರೆತಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲ, ಕೆ.ಸಿ.ವೇಣುಗೋಪಾಲ್ ಮತ್ತಿತರರು ಗಡಿ ಭಾಗದವರೆಗೂ ಹೆಜ್ಜೆ ಹಾಕಿದರು.

ವಿಶ್ವ ಹಸಿವು ಸೂಚ್ಯಂಕದಲ್ಲಿ 107ನೇ ಸ್ಥಾನಕ್ಕೆ ಕುಸಿದ ಭಾರತ
ತೆಲಂಗಾಣದ ಗಡಿಯಲ್ಲಿ ರಾಹುಲ್ ಗಾಂಧಿ ಅವರಿಗೆ ಭರ್ಜರಿ ಸ್ವಾಗತ ದೊರೆಯಿತು. ಈ ವೇಳೆ ಕರ್ನಾಟಕದ ಪತ್ರಕರ್ತರೊಂದಿಗೆ ಹಸ್ತ ಲಾಘವ ಮಾಡಿದ ರಾಹುಲ್ ಗಾಂಧಿ ಧನ್ಯವಾದ ತಿಳಿಸಿದರು. ವಾಹನವೊಂದರ ಮೇಲೆ ಹತ್ತಿ ನಿಂತು ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ರಾಷ್ಟ್ರ ಧ್ವಜವನ್ನು ಎತ್ತಿ ಹಿಡಿದು ಜನರನ್ನು ಅಭಿನಂದಿಸಿದರು.

ರಾಹುಲ್ ಗಾಂಧಿ ತಮ್ಮ ಯಾತ್ರೆಯುದ್ದಕ್ಕೂ ಒಂದಿಷ್ಟು ಚಾಕಲೇಟ್‍ಗಳನ್ನು ಇಟ್ಟುಕೊಂಡು ತಮ್ಮತ್ತ ಬಂದ ಮಕ್ಕಳಿಗೆ ಹಂಚುತ್ತಾ ಸಾಗಿದರು. ಯಾತ್ರೆ ಮುಗಿದ ಬಳಿಕ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮತ್ತಿತರ ನಾಯಕರು ಹೆಲಿಕಾಪ್ಟರ್‍ನಲ್ಲಿ ವಾಪಸ್ಸಾದರು. ಈ ವೇಳೆ ರಾಹುಲ್ ಗಾಂ ಹೆಲಿಪಾಡ್‍ವರೆಗೂ ಬಂದು ರಾಜ್ಯ ನಾಯಕರಿಗೆ ಬೀಳ್ಕೊಟ್ಟರು.ಈ ವೇಳೆ ಡಿ.ಕೆ.ಶಿವಕುಮಾರ್ ಅವರನ್ನು ಆಲಂಗಿಸುವ ಮೂಲಕ ಯಾತ್ರೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.

Articles You Might Like

Share This Article