ಕನ್ಯೆ ಹುಡುಕಾಟದಲ್ಲಿ ರಾಹುಲ್‍ ಗಾಂಧಿ, ಮನದನ್ನೆ ಹೇಗಿರಬೇಕಂತೆ ಗೊತ್ತಾ..?

Social Share

ನವದೆಹಲಿ,ಡಿ.29- ತಾಯಿ ಸೋನಿಯಾ ಗಾಂಧಿ ಹಾಗೂ ಅಜ್ಜಿ ಇಂದಿರಾ ಗಾಂಧಿ ಅವರಂತಹ ಮಾತೃ ಹೃದಯ ಹೊಂದಿರುವಂತ ಮಹಿಳೆಯೊಂದಿಗೆ ವಿವಾಹವಾಗಲು ಇಚ್ಚಿಸುತ್ತೇನೆ ಎಂದು ರಾಹುಲ್‍ಗಾಂಧಿ ತಿಳಿಸಿದ್ದಾರೆ.

ಭಾರತ್ ಜೋಡೊ ಯಾತ್ರೆ ಸಂದರ್ಭದಲ್ಲಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನನ್ನ ಜೀವನದ ಪ್ರೀತಿ ಮತ್ತು ಎರಡನೆ ತಾಯಿ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರ ಆದರ್ಶ ಮತ್ತು ನನ್ನ ತಾಯಿ ಸೋನಿಯ ಅವರಂತಹ ಮಿಶ್ರ ಗುಣ ಹೊಂದಿರುವ ಯುವತಿ ಸಿಕ್ಕರೆ ನಾನು ವಿವಾಹವಾಗಲು ಸಿದ್ದ ಎಂದು ಅವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಅವರು, ನಾನು ಎಲೆಕ್ಟ್ರಿಕ್ ಸ್ಕೂಟರ್ ಓಡಿಸಿದ್ದೇನೆ. ಆದರೆ, ಬೈಕ್ ಓಡಿಸಿಲ್ಲ. ಅದರಲ್ಲೂ ಚೈನಿಸ್ ಕಂಪನಿಗಳ ಎಲೆಕ್ಟ್ರಿಕ್ ವಾಹನಗಳು ಚೆನ್ನಾಗಿವೆ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ.

ನನಗೆ ನಿಜವಾಗಿಯೂ ಕಾರುಗಳಲ್ಲಿ ಆಸಕ್ತಿ ಇಲ್ಲ, ನನಗೆ ಮೋಟಾರು ಬೈಕ್‍ಗಳಲ್ಲಿ ಆಸಕ್ತಿ ಇಲ್ಲ, ಆದರೆ ನನಗೆ ಮೋಟಾರು ಬೈಕುಗಳನ್ನು ಓಡಿಸಲು ಆಸಕ್ತಿ ಇದೆ. ನಾನು ಕಾರನ್ನು ಸರಿಪಡಿಸಬಲ್ಲೇ. ಆದರೆ, ನನಗೆ ಕಾರುಗಳ ಗೀಳು ಇಲ್ಲ.

ನಾನು ವೇಗವಾಗಿ ಚಲಿಸುವ ಕಲ್ಪನೆಯನ್ನು ಇಷ್ಟಪಡುತ್ತೇನೆ, ಗಾಳಿಯಲ್ಲಿ ಚಲಿಸುವ ಕಲ್ಪನೆ, ನೀರಿನಲ್ಲಿ ಚಲಿಸುವ ಮತ್ತು ಭೂಮಿಯಲ್ಲಿ ಚಲಿಸುವ ಕಲ್ಪನೆ ಎಂದು ಅವರು ಹೇಳಿದರು.

ಆದರೂ ನನ್ನ ಬಳಿ ಯಾವುದೆ ಕಾರು ಇಲ್ಲ. ನನ್ನ ತಾಯಿ ಸೋನಿಯಾ ಅವರು ಮಾತ್ರ ಒಂದು ಕಾರು ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.

Rahul, life partner, qualities, mother, grandmother,

Articles You Might Like

Share This Article