ಇಂದೋರ್,ನ.29- ನಾನು ರಾಹುಲ್ ಗಾಂಧಿಯನ್ನು ಹಲವು ವರ್ಷಗಳ ಹಿಂದೆಯೇ ಕೈಬಿಟ್ಟಿದ್ದೇನೆ. ರಾಹುಲ್ ಗಾಂಧಿ ನಿಮ್ಮ ಮನಸ್ಸಿನಲ್ಲಿದ್ದಾರೆ. ನನ್ನಲ್ಲಿಲ್ಲ.. ಈ ರೀತಿ ವೇದಾಂತಿಯಂತೆ ಮಾತನಾಡಿ ರಾಹುಲ್ ಗಾಂಧಿ ಪತ್ರಕರ್ತರನ್ನೇ ತಬ್ಬಿಬ್ಬು ಮಾಡಿದ್ದಾರೆ.
ಇಂದೋರ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯ ಪ್ರಶ್ನೋತ್ತರ ಅವಧಿಯಲ್ಲಿ ರಾಹುಲ್ ಉತ್ತರಗಳು ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ.
2024ರ ಲೋಕಸಭೆ ಚುನಾವಣೆಗೆ ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್‍ನ ಮುಂದಾಳುವನ್ನಾಗಿ ಬಿಂಬಿಸಲು ಹಲವು ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಅದರಲ್ಲಿ ಭಾರತ ಐಕ್ಯತಾ ಯಾತ್ರೆ ಪ್ರಮುಖವಾಗಿದೆ.
ಗಡಿ ವಿವಾದ ಸಮರ್ಥ ವಾದಕ್ಕೆ ಸಿದ್ಧ: CM ಬೊಮ್ಮಾಯಿ
ಯಾತ್ರೆ ಮಧ್ಯಪ್ರದೇಶದಲ್ಲಿ ನಡೆಯುತ್ತಿದೆ. ಇಂಧೋರ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಭಾರತ ಜೋಡೊ ಯಾತ್ರೆಯಿಂದ ಜನ ರಾಹುಲ್ ಗಾಂಧಿ ಅವರನ್ನು ಯಾವ ರೀತಿ ಪರಿಗಣಿಸಬೇಕೆಂದು ಬಯಸುತ್ತೀರಾ ಎಂದು ಕೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಹಲವು ವರ್ಷಗಳ ಹಿಂದೆಯೇ ನಾನು ರಾಹುಲ್ ಗಾಂಧಿಯನ್ನು ಕೈಬಿಟ್ಟಿದ್ದೇನೆ. ಆದರೆ ರಾಹುಲ್ ಗಾಂಧಿ ಇನ್ನು ಮನಸ್ಸಿನಲ್ಲಿದ್ದಾರೆ. ನನ್ನಲ್ಲಿಲ್ಲ. ನಿಮಗೆ ಅರ್ಥವಾಯಿತೇ? ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ ಎಂದು ಹೇಳಿದ್ದಾರೆ.
ಈ ವೇಳೆ ಸಭಾಂಗಣದಲ್ಲಿದ್ದ ಒಬ್ಬರು ಚಪ್ಪಾಳೆ ತಟ್ಟಿದ್ದಾರೆ. ನೋಡಿ ಒಬ್ಬರಿಗೆ ನಾನು ಹೇಳಿದ್ದು ಅರ್ಥವಾಗಿದೆ. ಇದು ನಿಮ್ಮ ದೇಶದ ತತ್ವಶಾಸ್ತ್ರ ಅರ್ಥವಾಯಿತೇ? ನಿಮಗೆ ಒಳ್ಳೆಯದಾಗಲಿ ಎಂದಿದ್ದಾರೆ.
ಲೋವಾ ಬೆಟ್ಟದಲ್ಲಿ ಸ್ಪೋಟಗೊಂಡ ಜ್ವಾಲಾಮುಖಿ
ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿರುವ ರಾಹುಲ್ ಗಾಂಧಿ, ಯಾತ್ರೆ ನನ್ನಲ್ಲಿ ಅಪಾರವಾದ ತಾಳ್ಮೆಯನ್ನು ಬೆಳೆಸಿದೆ. ಇದಕ್ಕೂ ಮೊದಲು ಸಣ್ಣಪುಟ್ಟದ್ದಕ್ಕೆಲ್ಲ ನಾನು ಕಿರಿಕಿರಿ ಅನುಭವಿಸುತ್ತಿದ್ದೆ. ಈಗ ಸುಮಾರು 8 ಗಂಟೆಗಳವರೆಗೆ ತಾಳ್ಮೆಯಿಂದ ಇರಬಲ್ಲೆ ಎಂದಿದ್ದಾರೆ.
ಯಾತ್ರೆ ಆರಂಭದ ಹಿನ್ನೆಲೆ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಎಲ್ಲವೂ ಕಾಲ ಕೂಡಿ ಬಂದಾಗ ಸಂಭವಿಸುತ್ತದೆ. ಒಳ್ಳೆಯ ಕಾಲ ಬಂದಾಗ ಆ ಕೆಲಸ ಸಾಧುವಾಗುತ್ತದೆ. ಇಲ್ಲದೆ ಹೋದರೆ ಏನೂ ನಡೆಯುವುದಿಲ್ಲ. ಈ ರೀತಿಯ ಯಾತ್ರೆ ಬಗ್ಗೆ ನಾನು 25-26 ವರ್ಷಗಳಿದ್ದಾಗಲೇ ಯೋಚಿಸಿದ್ದೆ. ಒಂದು ವರ್ಷದ ಹಿಂದೆಯೇ ಯಾತ್ರೆಯ ಕುರಿತು ಸಂಪೂರ್ಣ ಯೋಜನೆ ರೂಪಿಸಿದ್ದೆ. ಅದು ಜಯರಾಮ್ ರಮೇಶ್‍ಗೂ ಗೊತ್ತಿರಲಿಲ್ಲ.
ಮಹಾರಾಷ್ಟ್ರ ಸಚಿವರು ಬೆಳಗಾವಿ ಪ್ರವೇಶಿಸಿದರೆ ತಕ್ಕ ಪಾಠ: ಕರವೇ ಎಚ್ಚರಿಕೆ
ಕೋವಿಡ್ ಹಾಗೂ ಇತರ ಕಾರಣಗಳಿಂದಾಗಿ ಸಾಧ್ಯವಾಗಿರಲಿಲ್ಲ. ಈಗ ಅದಕ್ಕೆ ಉತ್ತಮ ಸಮಯ ಬಂದಿದೆ. ಭಾರತ ತನ್ನ ಸಿದ್ದಾಂತದ ಮೇಲೆ ನಿಲ್ಲಬೇಕು. ಆರ್‍ಎಸ್‍ಎಸ್ ಬಿಜೆಪಿಯಿಂದ ಹಾನಿಗೊಳಗಾಗುವುದನ್ನು ತಪ್ಪಿಸುವ ಅಭಿಯಾನವನ್ನು ತಪ್ಪಸ್ಸಿನ ಮಾದರಿಯಲ್ಲಿ ಕೈಗೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.
ಯಾತ್ರೆಯಲ್ಲಿ ದಾಡಿ ಬೆಳೆಸಿಕೊಂಡು ದೇವಸ್ಥಾನ, ಧಾರ್ಮಿಕ ಮಂದಿರಗಳಿಗೆ ಭೇಟಿ ನೀಡಿ ಆಧ್ಯಾತ್ಮದತ್ತ ಹೆಚ್ಚು ಒಲವು ತೋರಿಸುತ್ತಿರುವ ರಾಹುಲ್ ಗಾಂಧಿ ವೇದಂತಿಯಂತೆ ಮಾತನಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
RahulGandhi, Journalists, Question, BharatJodoYatra,