ರೈಲ್ವೇ ಇಲಾಖೆಗೆ 2.40 ಲಕ್ಷ ಕೋಟಿ ರೂ.ಗಳ ಕೊಡುಗೆ

Social Share

ನವದೆಹಲಿ,ಫೆ.1-ಸತತ ಐದನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ರೈಲ್ವೆ ಇಲಾಖೆಗೆ 2.40 ಲಕ್ಷ ಕೋಟಿ ರೂ.ಗಳ ಭರ್ಜರಿ ಅನುದಾನ ಘೋಷಣೆ ಮಾಡಿದ್ದಾರೆ.

2013-14 ನೇ ಸಾಲಿನ ನಂತರ ರೈಲ್ವೇ ಇಲಾಖೆಗೆ ಬಿಡುಗಡೆಯಾದ ಅತಿ ಹೆಚ್ಚಿನ ಅನುದಾನ ಇದಾಗಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.

ಕೇಂದ್ರ ಸರ್ಕಾರದಿಂದ ರೈಲ್ವೆಗೆ ಒಟ್ಟು 2.40 ಲಕ್ಷ ಕೋಟಿ ರೂ. ದೊಡ್ಡ ರೈಲ್ವೆ ಯೋಜನೆಗಳ ಜಾರಿಗಾಗಿ ನಿರಂತರವಾಗಿ ಕೆಲಸಗಳು ನಡೆಯುತ್ತಿವೆ ಮತ್ತು ಮುಂಬರುವ ಕೆಲವು ತಿಂಗಳುಗಳು ಮತ್ತು ವರ್ಷಗಳಲ್ಲಿ ಕೋಟಿಗಟ್ಟಲೆ ಜನರಿಗೆ ರೈಲ್ವೇ ಯೋಜನೆಗಳ ಉಪಯೋಗಗಳು ಲಭ್ಯವಾಗಲಿವೆ ಎಂದಿದ್ದಾರೆ.

ಕೇಂದ್ರ ಬಜೆಟ್ : 2023-2024 ( Live Updates)

ಚೆನಾಬ್ ನದಿಯ ರೈಲ್ವೆ ಸೇತುವೆ: ವಿಶ್ವದ ಅತಿ ಎತ್ತರದ ಸಿಂಗಲï-ಆರ್ಚ್ ರೈಲ್ವೆ ಸೇತುವೆಯನ್ನು ಚೆನಾಬ್ ನದಿಯ ಮೇಲೆ ನಿರ್ಮಿಸಲಾಗುತ್ತಿದೆ. ಚೆನಾಬ್ ನದಿಯ ರೈಲ್ವೆ ಸೇತುವೆಯು ಉಧಮ್‍ಪುರ-ಶ್ರೀನಗರ-ಬಾರಾಮು ರೈಲು ಸಂಪರ್ಕ ಯೋಜನೆಯ ಒಂದು ಭಾಗವಾಗಿದೆ. 92 ಮಿಲಿಯನ್ ಬಜೆಟ್‍ನೊಂದಿಗೆ 1.3 ಕಿಲೋಮೀಟರ್ ಉದ್ದದ ಯೋಜನೆಯು ಕಾಶ್ಮೀರ ಕಣಿವೆಯನ್ನು ಭಾರತದ ಉಳಿದ ಭಾಗಗಳೊಂದಿಗೆ ರೈಲು ಜಾಲದ ಮೂಲಕ ಸಂಪರ್ಕಿಸುತ್ತದೆ.

ಕ್ಷಿಪ್ರ ರೈಲಿನ ಕಾರ್ಯಾಚರಣೆ: 2025 ರಲ್ಲಿ ದೆಹಲಿ-ಮೀರತ್ ನಡುವೆ ಕ್ಷಿಪ್ರ ರೈಲು ಓಡಿಸಲಾಗುವುದು. ಈ ಸಂಪೂರ್ಣ ರೈಲ್ವೆ ಕಾರಿಡಾರ್ ಮೂರು ವಿಭಾಗಗಳಲ್ಲಿ ಪೂರ್ಣಗೊಳ್ಳಲಿದೆ. ಇದರ ಮೊದಲ ವಿಭಾಗವು ಸಾಹಿಬಾಬಾದ್‍ನಿಂದ ದುಹೈ ಡಿಪೋ ನಡುವೆ 17 ಕಿಮೀ ಉದ್ದವಿದೆ. ಈ ವಿಭಾಗದಲ್ಲಿ ಕ್ಷಿಪ್ರ ರೈಲು ಮಾರ್ಚ್ 2023 ರಿಂದ ಪ್ರಯಾಣಕ್ಕಾಗಿ ಪ್ರಾರಂಭವಾಗಲಿದೆ. ಈ ವಿಭಾಗದಲ್ಲಿ ಟ್ರ್ಯಾಕ್ ಮಾಡುವ ಕೆಲಸ ಪೂರ್ಣಗೊಂಡಿದೆ. ಇಲ್ಲಿ ಓವರ್ ಹೆಡ್ ಸಲಕರಣೆ ಲೈನ್ ಅಳವಡಿಸುವ ಕೆಲಸ ನಡೆಯುತ್ತಿದೆ. ಮಾರ್ಚ್ 2023 ರಿಂದ, ಇದು ದುಹೈ ಡಿಪೋ ಮತ್ತು ಸಾಹಿಬಾಬಾದ್ ನಡುವೆ ಪ್ರಯಾಣಿಕರಿಗಾಗಿ ಓಡಲು ಪ್ರಾರಂಭಿಸುತ್ತದೆ.

ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆ: ಗುಜರಾತ್‍ನ ಎಂಟು ಜಿಲ್ಲೇಗಳು ಮತ್ತು ದಾದ್ರಾ ಮತ್ತು ನಗರ್ ಹವೇಲಿ ಮೂಲಕ ಸಮಾನಾಂತರವಾಗಿ ನಿರ್ಮಾಣವನ್ನು ಪ್ರಾರಂಭಿಸಲಾಗಿದೆ. ವರ್ಷಗಳ ಕಾಲ ನೆನೆಗುದಿಗೆ ಬಿದ್ದಿದ್ದ ಬುಲೆಟ್ ರೈಲು ಯೋಜನೆ ಮಹಾರಾಷ್ಟ್ರ ಸೇರಿದಂತೆ ಇತ್ತೀಚೆಗೆ ವೇಗ ಪಡೆದುಕೊಂಡಿದೆ. ಅಧಿಕಾರಿಗಳ ಪ್ರಕಾರ, ಯೋಜನೆಯು 2027 ರಲ್ಲಿ ಪೂರ್ಣಗೊಳ್ಳಬಹುದು.

ಪ್ರಾರ್ಥನೆ ಸಲ್ಲಿಸುವವರ ಮೇಲೆ ಭಾರತದಲ್ಲೂ ದಾಳಿ ನಡೆಸಲ್ಲ : ಪಾಕ್ ಸಚಿವ

ಬೈರ್ಬಿ-ಸೈರಾಂಗ್ ಹೊಸ ಮಾರ್ಗದ ರೈಲು ಯೋಜನೆ: ಈಶಾನ್ಯ ರಾಜ್ಯವಾದ ಮಿಜೋರಾಂ ಅನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸಲು ಬೈರ್ಬಿ-ಸೈರಾಂಗ್ ಹೊಸ ಮಾರ್ಗದ ರೈಲು ಯೋಜನೆಯಲ್ಲಿ ಕೆಲಸ ನಡೆಯುತ್ತಿದೆ. ಯೋಜನೆಯು ಪೂರ್ಣಗೊಂಡ ನಂತರ, ದೇಶದ ಈಶಾನ್ಯ ಪ್ರದೇಶದಲ್ಲಿ ವಿಶೇಷವಾಗಿ ಮಿಜೋರಾಂನಲ್ಲಿ ಸಂವಹನ ಮತ್ತು ವಾಣಿಜ್ಯದ ವಿಷಯದಲ್ಲಿ ಹೊಸ ಯುಗವು ಪ್ರಾರಂಭವಾಗುತ್ತದೆ. ಬೈರಾಬಿ-ಸೈರಂಗ್ ಯೋಜನೆಯು ಈಶಾನ್ಯ ಭಾರತದಲ್ಲಿ ಹೆಚ್ಚುವರಿ 51.38 ಕಿಮೀ ರೈಲು ಮಾರ್ಗವನ್ನು ರಚಿಸುವ ಗುರಿಯನ್ನು ಹೊಂದಿದೆ.

ಭಾಲುಕ್‍ಪಾಂಗ್-ತವಾಂಗ್ ಲೈನ್: ಭಾಲುಕ್‍ಪಾಂಗ್-ತವಾಂಗ್ ಲೈನ್ ಈಶಾನ್ಯದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ, ಇದು ಚೀನಾದೊಂದಿಗೆ ಉದ್ವಿಗ್ನತೆ ಹೆಚ್ಚಿರುವ ಪ್ರದೇಶದಲ್ಲಿ ಸೇನೆಯ ವ್ಯಾಪಕ ಅಗತ್ಯಗಳನ್ನು ಪೂರೈಸುತ್ತದೆ. ಉದ್ದೇಶಿತ ಮಾರ್ಗವು ಹಲವಾರು ಸುರಂಗಗಳನ್ನು ಹೊಂದಿರುತ್ತದೆ ಮತ್ತು 10,000 ಅಡಿ ಎತ್ತರದಲ್ಲಿ ನಿರ್ಮಿಸಲಾಗುತ್ತಿದೆ.ಅದೇ ರೀತಿ ದೇಶದ ವಿವಿಧ ರಾಜ್ಯಗಳ ಹಲವಾರು ರೈಲು ಯೋಜನೆಗಳನ್ನು ಜಾರಿಗೆ ತರುವ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿರುವುದಾಗಿ ಅವರು ಹೇಳಿದರು.

Railway Budget 2023, Railway, Rs 2.40 Lakh Crore,

Articles You Might Like

Share This Article