ಬೆಂಗಳೂರು,ಸೆ.18- ಕೇರಳ ಸರ್ಕಾರ ಮುಂದಿಟ್ಟಿದ್ದ ಮೂರು ಪ್ರಸ್ತಾವನೆಗಳನ್ನು ಕರ್ನಾಟಕ ಸರ್ಕಾರ ಸಾರಾಸಗಟವಾಗಿ ತಿರಸ್ಕರಿಸಿದೆ. ಕೇರಳ ಮುಖ್ಯಮಂತ್ರಿ ವಿಜಯನ್ ಪಿಣರಾಯ್ ಅವರು ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ, ನೆನೆಗುದಿಗೆ ಬಿದ್ದಿರುವ ಎರಡು ರೈಲ್ವೆ ಯೋಜನೆ ಸೇರಿದಂತೆ ಮೂರು ಪ್ರಸ್ತಾವನೆಗಳಿಗೆ ಕರ್ನಾಟಕ ಸರ್ಕಾರ ಅನುಮತಿ ಕೊಡಬೇಕೆಂದು ಮನವಿ ಮಾಡಿದರು.
ಕೇರಳದ ಬಹುನಿರೀಕ್ಷಿತ ಕನ್ನಿಯೂರು ರೈಲ್ವೆ ಯೋಜನೆಯ 45 ಕಿ.ಮೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾದುಹೋಗುತ್ತದೆ. ಇದೊಂದು ಪರಿಸರ ಸೂಕ್ಷ್ಮ ವಲಯ ಎಂಬ ಕಾರಣಕ್ಕಾಗಿ ಕರ್ನಾಟಕ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿರುವುದರಿಂದ
ಕೇಂದ್ರ ಸರ್ಕಾರ ಅನುಮತಿ ಕೊಟ್ಟಿಲ್ಲ. ಇದಕ್ಕೆ ಅನುಮತಿ ನೀಡಿ ಎಂದು ಪಿಣರಾಯ್ ಬೊಮ್ಮಾಯಿಗೆ ಪ್ರಸ್ತಾವನೆ ಸಲ್ಲಿಸಿದರು.
ಇದೇ ರೀತಿ ಕೇರಳದ ಮತ್ತೊಂದು ರೈಲ್ವೆ ಯೋಜನೆಯು ಮೈಸೂರಿನಲ್ಲೂ ಹಾದುಬರಲಿದೆ. ಬಂಡಿಪುರ ರಾಷ್ಟ್ರೀಯ ಉದ್ಯಾನವನ ಇರುವುದರಿಂದ ಇದು ಕೂಡ ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಲಾಗಿದೆ.
ಇದಕ್ಕೂ ಕೂಡ ಕರ್ನಾಟಕ ಸರ್ಕಾರ ತಕರಾರು ತೆಗೆದಿರುವುದರಿಂದ ಅನುಮತಿ ಸಿಕ್ಕಿಲ್ಲ. ಕೊನೆಗೆ ಅಂಡರ್‍ಲೈನ್ ಮಾಡಲು ಅವಕಾಶ ಕೊಡಬೇಕೆಂದು ಕೋರಿದ್ದಾರೆ. ಇವೆಲ್ಲವೂ ಕೂಡ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಪ್ರಾಣಿ ಸಂಕಲು ನಾಶವಾಗುವ ಕಾರಣ ಅವರ ಪ್ರಸ್ತಾವನೆಯನ್ನು ನಾವು ತಿರಸ್ಕರಿಸಿದ್ದೇವೆ ಎಂದು ಬೊಮ್ಮಾಯಿ ಹೇಳಿದರು. ಪ್ರಸ್ತುತ ಕರ್ನಾಟಕದಿಂದ ರಾತ್ರಿ ವೇಳೆ ಎರಡು ಬಸ್‍ಗಳು ಕೇರಳಕ್ಕೆ ಸಂಚರಿಸುತ್ತಿವೆ. ಇದನ್ನು ನಾಲ್ಕಕ್ಕೆ ಹೆಚ್ಚಳ ಮಾಡಬೇಕೆಂದು ಮನವಿ ಮಾಡಿದ್ದರು.
ಇದನ್ನೂ ಓದಿ : ರಾಹುಲ್ ಗಾಂಧಿಗೆ ಎಐಸಿಸಿ ಪಟ್ಟ ಕಟ್ಟಲುರಾಜಸ್ಥಾನ ಕಾಂಗ್ರೆಸ್ ನಿರ್ಣಯ
ಆದರೆ ಇದು ಕೂಡ ಸೂಕ್ಷ್ಮ ವಲಯದಲ್ಲಿ ಹಾದು ಹೋಗುತ್ತದೆ. ರಾತ್ರಿ ವೇಳೆ ಪ್ರಾಣಿಗಳಿಗೆ ತೊಂದರೆಯಾಗುವುದರಿಂದ ಹೆಚ್ಚಿನ ವಾಹನಗಳ ಸಂಚಾರಕ್ಕೆ ಅವಕಾಶ ಕೊಡಬಾರದೆಂದು ಪರಿಸರ ತಜ್ಞರು ಮನವಿ ಮಾಡಿದ್ದಾರೆ. ಹೀಗಾಗಿ ಕೇರಳದ ಎಲ್ಲ ಪ್ರಸ್ತಾವನೆಗಳನ್ನು ತಿರಸ್ಕಾರ ಮಾಡಿದ್ದೇವೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ್ದ ಪಿಣರಾಯ್ ಅವರು, ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಟಾಣದಲ್ಲಿ ಬಸವರಾಜ ಬೊಮ್ಮಾಯಿ, ಸಚಿವ ವಿ.ಸೋಮಣ್ಣ ಮತ್ತಿತರ ಅಕಾರಿಗಳ ಜೊತೆ ಮಾತುಕತೆ ನಡೆಸಿದರು.
ಇದಕ್ಕೂ ಮುನ್ನ ಪಿಣರಾಯ್ ಅವರಿಗೆ ಮೈಸೂರು ಪೇಟ ತೊಡಿಸಿ, ಹೂ ಗುಚ್ಛ ನೀಡಿ ಬಸವರಾಜ ಬೊಮ್ಮಾಯಿ ಸ್ವಾಗತ ಮಾಡಿಕೊಂಡರು. ಕೇರಳದಲ್ಲಿ ದಕ್ಷಿಣ ಭಾರತದ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆದಿತ್ತು. ಈ ಸಭೆಯ ಮುಂದುವರೆದ ಭಾಗವಾಗಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು ಇಂದು ಭೇಟಿಯಾಗಿದ್ದಾರೆ.