ರೈಲ್ವೆದಲ್ಲಿ ಉದ್ಯೋಗದ ಕೊಡಿಸುವುದಾಗಿ 28 ಮಂದಿಗೆ 2.67 ಕೋಟಿ ಪಂಗನಾಮ

Social Share

ನವದೆಹಲಿ,ಡಿ .20 – ತಮಿಳುನಾಡಿನ ಸುಮಾರು 28 ಜನರಿಗೆ ರೈಲ್ವೆ ಉದ್ಯೋಗದ ನೆಪದಲ್ಲಿ 2.67 ಕೋಟಿ ರೂ ನಾಮಹಾಕಿದ್ದ ಪ್ರಕರಣ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ನವದೆಹಲಿ ರೈಲು ನಿಲ್ದಾಣದ ವಿವಿಧ ಪ್ಲಾಟ್‍ಫಾರ್ಮ್‍ಗಳಲ್ಲಿ ಪ್ರತಿ ದಿನ ಎಂಟು ಗಂಟೆಗಳ ಕಾಲ ಬರುವ-ನಿರ್ಗಮಿಸುವ ರೈಲುಗಳು ಮತ್ತು ಅವುಗಳ ಬೋಗಿಗಳ ಎಣಿಸಲು ಇವರನ್ನು ನಿಯೋಜಿಸಿ ಟೋಪಿ ಹಾಕಲಾಗಿದೆ.

ಟ್ರಾವೆಲ್ ಟಿಕೆಟ್ ಎಕ್ಸಾಮಿನರ್ (ಟಿಟಿಇ), ಟ್ರಾಫಿಕ್ ಅಸಿಸ್ಟೆಂಟ್‍ಗಳು ಮತ್ತು ಕ್ಲರ್ಕ್‍ಗಳ ಹುದ್ದೆಗಳಿಗೆ ನೇಮಕವಾಗಿದೆ, ಇದು ನಿಮ್ಮ ತರಬೇತಿಯ ಭಾಗವಾಗಿದೆ ಎಂದು ಅವರಿಗೆ ತಿಳಿಸಿ ಪ್ರತಿಯೊಬ್ಬರಿಂದ 2 ಲಕ್ಷದಿಂದ 24 ಲಕ್ಷ ರೂಪಾಯಿಗಳವರೆಗೆ ಪಡೆಯಲಾಗಿತ್ತು ಎಂದು ದೆಹಲಿ ಪೊಲೀಸ್‍ನ ಆರ್ಥಿಕ ಅಪರಾಧ ವಿಭಾಗಕ್ಕೆ ದೂರು ನೀಡಲಾಗಿದೆ.

ಕಳೆದ ಜೂನ್ ಮತ್ತು ಜುಲೈ ನಡುವೆ ನಡೆದ ಇವರಿಗೆ ನಕಲಿ ನೇಮಕಾತಿ ಪತ್ರ ನೀಡಿ ಕಿವಿಗೆ ಹೂ ಇಟ್ಟು ಪರಾರಿಯಾಗಿದ್ದ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸಿದ್ದ ಮಾಜಿ ಯೋಧ ಸುಬ್ಬುಸಾಮಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ದೆಹಲಿಯ ಉತ್ತರ ರೈಲ್ವೆ ಕಚೇರಿಯಲ್ಲಿ ಉಪನಿರ್ದೇಶಕರಾಗಿ ಫೋಸ್ ನೀಡಿದ್ದ ವಿಕಾಸ್ ರಾಣಾ ಎಂಬಾತ ವಂಚನೆ ಹಿಂದಿನ ಸೂತ್ರದಾರ ಈತ ಸುಬ್ಬುಸಾಮಿಗೂ ಮಂಕುಬೂದಿ ಎರಚಿದ್ದ ಎಂದು ತಿಳಿದುಬಂದಿದೆ.

ಬಿ.ಎಲ್.ಸಂತೋಷ್ ವಿರುದ್ಧ ರೊಚ್ಚಿಗೆದ್ದ ಹೆಚ್.ಡಿ.ಕುಮಾರಸ್ವಾಮಿ

ಇದರ ಹಿಂದೆ ವ್ಯವಸ್ಥತ ಗುಂಪು ಕೆಲಸ ಮಾಡಿದ್ದು ವಂಚನೆಗೆ ಒಳಗಾದವರು ಸಂಪರ್ಕದಲ್ಲಿದ್ದುಕೊಂಡು ಯಾರಿಗೂ ಅನಮಾನ ಬರದಂತೆ ಕಾರ್ಯನಿರ್ವಹಿಸಿತ್ತು ಪ್ರತಿಯೊಬ್ಬ ಅಭ್ಯರ್ಥಿಯು 2 ಲಕ್ಷದಿಂದ 24 ಲಕ್ಷದವರೆಗೆ ಹಣವನ್ನು ಸುಬ್ಬುಸಾಮಿಗೆ ಪಾವತಿಸಿದರೆ ಅದನ್ನು ರಾಣಾಗೆ ತಲುಪಿಸುತ್ತಿದ್ದ ವಂಚನೆಗೆ ಒಳಗಾದವರಲ್ಲಿ ಹೆಚ್ಚಿನವರು ಎಂಜಿನಿಯರಿಂಗ್ ಮತ್ತು ತಾಂತ್ರಿಕ ಶಿಕ್ಷಣದ ಹಿನ್ನೆಲೆ ಹೊಂದಿರುವ ಪದವೀಧರರಾಗಿದ್ದಾರೆ.

ವಿವಿಧ ಹುದ್ದೆಗಳಿಗೆ ಇಂತಿಷ್ಷು ಮೊತ್ತವನ್ನು ನಿಗದಿಮಾಡಲಾಗಿತ್ತು ಆದರೆ ಎಲ್ಲರೂ ಒಂದೇ ರೀತಿಯ ತರಬೇತಿ ಹೆಸರಿನಲ್ಲಿ ನಿಲ್ದಾಣಗಳಲ್ಲಿ ರೈಲುಗಳನ್ನು ಎಣಿಸುವುದಾಗಿತ್ತು. ಸುಮಾರು ದಿನಗಳು ಈ ಕೆಲಸ ಮಾಡಿದ್ದರು
ತಮಿಳುನಾಡಿನ ವಿರುದುನಗರ ಜಿಲ್ಲೆಯ ಸುಬ್ಬುಸಾಮಿ, ನನ್ನ ನಿವೃತ್ತಿಯ ನಂತರ, ನಮ್ಮ ಪ್ರದೇಶದ ನಿರುದ್ಯೋಗಿ ಯುವಕರಿಗೆ ಸೂಕ್ತವಾದ ಉದ್ಯೋಗವನ್ನು ಹುಡುಕಲು ನಾನು ಸಹಾಯ ಮಾಡುತ್ತಿದ್ದೇನೆ ನಾನು ಯಾವುದೇ ವಂಚನೆ ಮಾಡಿಲ್ಲ ಎಂದು ತಿಳಿಸಿದ್ದಾರೆ ಆದರೆ ಕೊಯಮತ್ತೂರಿನ ನಿವಾಸಿ ಶಿವರಾಮನ್ ಎಂಬ ವ್ಯಕ್ತಿಯನ್ನು ದೆಹಲಿಯ ಎಂಪಿ ಕ್ವಾರ್ಟರ್‍ವೊಂದರಲ್ಲಿ ಭೇಟಿಯಾಗಿದ್ದರು ಆತನೇ ನನಗೆ ನಿರುದ್ಯೋಗಿ ಯುವಕರಿಗೆ ರೈಲ್ವೇಯಲ್ಲಿ ಉದ್ಯೋಗವನ್ನು ಒದಗಿಸುವುದಾಗಿ ಹೇಳಿದರು.

ಉದ್ಯೋಗಾಕಾಂಕ್ಷಿಗಳೊಂದಿಗೆ ದೆಹಲಿಗೆ ಬರುವಂತೆ ಶಿವರಾಮನ್ ಹೇಳಿದ್ದ ಆರಂಭದಲ್ಲಿ, ನಾನು ಮೂರು ಉದ್ಯೋಗಾಕಾಂಕ್ಷಿಗಳೊಂದಿಗೆ ಹೋದೆ ಆದರೆ ಉದ್ಯೋಗ ತರಬೇತಿಯ ಸುದ್ದಿ ಮಧುರೈ ಮತ್ತು ಸುತ್ತಮುತ್ತಲಿನ ಅವರ ಹಳ್ಳಿಗಳಲ್ಲಿ ಹರಡಿದಾಗ, ಇನ್ನೂ 25 ಅಭ್ಯರ್ಥಿಗಳು ಸೇರಿಕೊಂಡರು ಎಂದು ಸುಬ್ಬುಸಾಮಿ ಹೇಳಿದರು.

ಸುಗಮ ಶುಲ್ಕವಾಗಿ ಹಣವನ್ನು ಪಾವತಿಸಿದ ನಂತರ, ಈ ನಿರೀಕ್ಷಿತ ಅಭ್ಯರ್ಥಿಗಳನ್ನು ಕನ್ನಾಟ್ ಪ್ಲೇಸ್‍ನ ರೈಲ್ವೆ ಸೆಂಟ್ರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಕರೆಸಲಾಯಿತು ಮತ್ತು ನಂತರ ಉತ್ತರ ರೈಲ್ವೆಯ ಜೂನಿಯರ್ ಇಂಜಿನಿಯರ್, ಶಂಕರ್ ಮಾರ್ಕೆಟ್ ಕಚೇರಿಯಲ್ಲಿ ದಾಖಲೆ ಪರಿಶೀಲನೆಗಾಗಿ ಕರೆಯಲಾಯಿತು. ಎಂದು ತಿಳಿಸಿದ್ದಾರೆ.

ಹಣ ವಸೂಲಿಗಾಗಿ ರಾಣಾ ಅವರನ್ನು ಯಾವಾಗಲೂ ಹೊರಗೆ ಭೇಟಿಯಾಗುತ್ತಿದ್ದರು ಮತ್ತು ಅವರನ್ನು ಯಾವುದೇ ರೈಲ್ವೆ ಕಟ್ಟಡದೊಳಗೆ ಕರೆದುಕೊಂಡು ಹೋಗಿಲ್ಲ ಎಂದು ವಂಚನೆಗೆ ಒಳಗಾದವರು ಹೇಳುತ್ತಾರೆ. ಅವರ ಪ್ರಕಾರ, ತರಬೇತಿಗಾಗಿ ಆದೇಶಗಳು, ಗುರುತಿನ ಚೀಟಿಗಳು, ತರಬೇತಿ ಪೂರ್ಣಗೊಂಡ ಪ್ರಮಾಣಪತ್ರಗಳು ಮತ್ತು ನೇಮಕಾತಿ ಪತ್ರಗಳಂತಹ ಎಲ್ಲಾ ದಾಖಲೆಗಳು ರೈಲ್ವೇ ಅಧಿಕಾರಿಗಳೊಂದಿಗೆ ಪರಿಶೀಲಿಸಿದಾಗ ನಕಲಿ ಎಂದು ತಿಳಿದುಬಂದಿದೆ.

ಮನೆ ಕೆಲಸಕ್ಕೆಂದು ಕರೆಸಿಕೊಂಡು ಯುವತಿ ಮೇಲೆ ಅತ್ಯಾಚಾರ

ಇಂತಹ ಉದ್ಯೋಗ ಹಗರಣಗಳ ವಿರುದ್ಧ ಎಚ್ಚರಿಕೆಯಿಂದ ಇರುವಂತೆ ರೈಲ್ವೆ ಸಚಿವಾಲಯದ ಮಾಧ್ಯಮ ಮತ್ತು ಸಂವಹನದ ಹೆಚ್ಚುವರಿ ಮಹಾನಿರ್ದೇಶಕ ಯೋಗೇಶ್ ಬವೇಜಾ, ರೈಲ್ವೆ ಮಂಡಳಿಯು ನಿಯಮಿತವಾಗಿ ಸಲಹೆಗಳನ್ನು ನೀಡುತ್ತಿದೆ ಮತ್ತು ಇಂತಹ ಮೋಸದ ಬಗ್ಗೆ ಸಾಮಾನ್ಯ ಜನರನ್ನು ಎಚ್ಚರಿಸುತ್ತಿದೆ ಎಂದು ಹೇಳಿದರು.

ಯುವಕರು ಇಂತಹ ಅಂಶಗಳೊಂದಿಗೆ ವ್ಯವಹರಿಸುವಾಗ ಬಹಳ ಜಾಗರೂಕರಾಗಿರಬೇಕು ಮತ್ತು ಅಂತಹ ಸಂದರ್ಭಗಳಲ್ಲಿ ಅವರು ಯಾವಾಗಲೂ ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಬೇಕು ಇದರಿಂದ ಅವರು ಸಾಧ್ಯವಾದಷ್ಟು ಬೇಗ ಸತ್ಯ ಗೊತ್ತಾಗುತ್ತದೆ ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಉಳಿಸುತ್ತಾರೆ ಎಂದು ಬವೇಜಾ ಹೇಳಿದರು. ಪ್ರಸ್ತುತ ವಂಚಕರ ತಂಡ ಪತ್ತೆಗೆ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

#RailwayJobScam, #UnemployedYouth, #duped, ₹2.5 crore, #Delhi,

Articles You Might Like

Share This Article