ಕೋಟ್ಯಂತರ ರೂ.ಮೌಲ್ಯದ ರೈಲ್ವೆ ಹಳಿಗಳೇ ಮಾಯ.. !

Social Share

ಸಮಸ್ತಿಪುರ್,ಫೆ.7- ಬಿಹಾರದಲ್ಲಿ ಕೋಟ್ಯಂತರ ರೂ. ಬೆಲೆಬಾಳುವ ರೈಲ್ವೇ ಹಳಿ ನಾಪತ್ತೆ ಪ್ರಕರಣ ಬೆಳಕಿಗೆ ಬಂದಿದೆ. ಸಮಸ್ತಿಪುರ್ ರೈಲ್ವೇ ವಿಭಾಗದಲ್ಲಿ ರೈಲ್ವೇ ರಕ್ಷಣಾ ಪಡೆ ಸಿಬ್ಬಂದಿಗಳ ಸಹಕಾರದಿಂದ ಕೋಟ್ಯಂತರ ಮೌಲ್ಯ ರೈಲ್ವೆ ಹಳಿಗಳನ್ನು ಅಕ್ರಮವಾಗಿ ಸ್ಕ್ರಾಪ್ ಡೀಲರ್‍ಗೆ ಮಾರಾಟ ಮಾಡಲಾಗಿದೆ.

ಹಗರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ರೈಲ್ವೆ ಇಲಾಖೆ ಅಧಿಕಾರಿಗಳು ಆರ್‍ಪಿಎಫ್‍ನ ಇಬ್ಬರು ಸಿಬ್ಬಂದಿಗಳನ್ನು ಸೇವೆಯಿಂದ ಅಮಾನತುಗೊಳಿಸಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

ಸಮಸ್ತಿಪುರ್ ರೈಲ್ವೇ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್ ಅಗರ್ವಾಲ, ತನಿಖೆಗೆ ಇಲಾಖಾ ಮಟ್ಟದ ತನಿಖಾ ಸಮಿತಿಯನ್ನು ರಚಿಸಲಾಗಿದೆ. ಝಂಜರ್‍ಪುರ ಆರ್‍ಪಿಎಫ್ ಹೊರಠಾಣೆ ಉಸ್ತುವಾರಿ ಶ್ರೀನಿವಾಸ್ ಮತ್ತು ರೈಲ್ವೆ ವಿಭಾಗದ ಜಮಾದಾರ್ ಮುಖೇಶ್ ಕುಮಾರ್ ಸಿಂಗ್ ಸೇರಿದಂತೆ ಇಬ್ಬರು ಸಿಬ್ಬಂದಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಪೆರುವಿನಲ್ಲಿ ಭೂ ಕುಸಿತು, 36 ಮಂದಿ ಸಾ

ಸಮಸ್ತಿಪುರ್ ರೈಲ್ವೆ ವಿಭಾಗದ ಪಾಂಡೌಲ್ ನಿಲ್ದಾಣದಿಂದ ಲೋಹತ್ ಸಕ್ಕರೆ ಕಾರ್ಖಾನೆಯವರೆಗೆ ರೈಲು ಮಾರ್ಗವನ್ನು ಹಾಕಲಾಯಿತು, ಅದು ದೀರ್ಘಕಾಲದವರೆಗೆ ಮುಚ್ಚಲ್ಪಟ್ಟಿತು. ಈ ರೀತಿ ಮುಚ್ಚಲ್ಪಟ್ಟ ರೈಲ್ವೆ ಹಳಿಗಳನ್ನು ಕೆಲ ಸಿಬ್ಬಂದಿಗಳು ಕಾನೂನುಪ್ರಕಾರ ಹರಾಜು ಹಾಕದೆ ಅಕ್ರಮವಾಗಿ ಡೀಲರ್‍ಗಳಿಗೆ ಮಾರಾಟ ಮಾಡಿ ಕೋಟ್ಯಂತರ ರೂ.ಗಳನ್ನು ವಂಚಿಸಿದ್ದಾರೆ.

ಈ ಹಗರರಣವನ್ನು ದರ್ಬಂಗಾ ಆರ್‍ಪಿಎಫ್ ಪೋಸ್ಟ್ ಮತ್ತು ರೈಲ್ವೆ ವಿಜಿಲೆನ್ಸ್ ತಂಡಗಳು ತನಿಖೆ ನಡೆಸುತ್ತಿವೆ.

Railway Track, Worth Crores, Illegally, Sold, Scrap, Dealer, Bihar,

Articles You Might Like

Share This Article