ಮಳೆಯಿಂದ ಜಲಾವೃತಗೊಂಡ ಮನೆ, ಹಸುಗೂಸು ಸೇರಿ 8 ಜನರ ರಕ್ಷಣೆ

ಚಿಕ್ಕಮಗಳೂರು, ಜು.24- ಎಡೆಬಿಡದೆ ಸುರಿಯು ತ್ತಿರುವ ಮಳೆಯಿಂದಾಗಿ ನರಸಿಂಹರಾಜಪುರ ತಾಲ್ಲೂಕಿನ ಕಡನ ಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲ ಟದೂರು ಗ್ರಾಮದಲ್ಲಿ ಜಲಾವೃತಗೊಂಡ ಮನೆ ಒಳಗೆ ಸಿಲುಕಿದ್ದ 4 ತಿಂಗಳ ಮಗು ಸೇರಿ 8 ಮಂದಿಯನ್ನು ರಕ್ಷಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಇನ್ಸ್‍ಪೆಕ್ಟರ್ ವಿ.ಟಿ. ದಿಲೀಪ್ ಕುಮಾರ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಮರದ ದಿಮ್ಮಿಯನ್ನು ನೀರಿಗೆ ಹಾಕಿ ಅದಕ್ಕೆ ಹಗ್ಗ ಕಟ್ಟಿಕೊಂಡು ಮನೆ ಒಳಗೆ ಸಿಲುಕಿಕೊಂಡಿದ್ದ 8 ಮಂದಿಯನ್ನು ರಕ್ಷಿಸಿದರು.

ಗ್ರಾಮಸ್ಥರು ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ರಕ್ಷಣಾ ನೆರವಿಗೆ ಸಾಥ್ ನೀಡಿದರು. ಚಾರ್ಮುಡಿ ಘಾಟ್ ರಸ್ತೆಯ 7ನೇ ತಿರುವಿನಲ್ಲಿ ಭಾರಿ ಮಳೆಯಿಂದ ಮಣ್ಣು ಕುಸಿದಿದ್ದು, ಸಂಚಾರ ಸ್ಥಗಿತವಾಗಿದೆ.

ಜಿಲ್ಲಾಯ ಮಲೆನಾಡು ಭಾಗಗಳಾದ ಮೂಡಿಗೆರೆ, ಶೃಂಗೇರಿ, ಎನ್.ಆರ್.ಪುರ ತಾಲೂಕಿನಾದ್ಯಂತ ಸುರಿಯು ತ್ತಿರುವ ಮಳೆಯಿಂದಾಗಿ ತುಂಗಭದ್ರಾ ನದಿಯಲ್ಲಿ ಒಂದೇಸಮನೆ ನೀರು ಹರಿಯುತ್ತಿದ್ದು ನದಿಯ ನೀರು ಹೊಲಗದ್ದಾಗಳಿಗೆ ನುಗ್ಗಿ ಬೆಳೆಗಳು ನಾಶವಾಗಿದೆ. ಜಿಲ್ಲಾಯ ಬಹುತೇಕ ಎಲ್ಲಾ ಜಲಪಾತಗಳು ತುಂಬಿ ತುಳುಕುತ್ತಿವೆ.

ಪುಷ್ಯ ಮಳೆ ಜಿಲ್ಲಾಯಲ್ಲಿ ಬಿರುಸುಗೊಂಡಿರುವುದರಿಂದ ಕೃಷಿ ಚಟುವಟಿಕೆ ಗರಿಗೆದರಿದ್ದು ಮಲೆನಾಡು ಭಾಗದಲ್ಲಿ ನಾಟಿ ಕಾರ್ಯಕ್ಕೆ ಕಾರ್ಮಿಕರ ಸಮಸ್ಯೆ ಎದುರಾಗಿದೆ.ಸಂಸೆ ಸೋಮಾವತಿ ನದಿಯಲ್ಲಿ ಗರಿಷ್ಟ ಮಟ್ಟದ ನೀರು ಹರಿಯುತ್ತಿದೆ. ನದಿ ಪಾತ್ರದ ತೋಟಗಳು ಜಲಾವೃತಗೊಂಡಿದ್ದು ನದಿ ಪಾತ್ರದ ಕುಟುಂಬಗಳು ನೆರೆಯ ಭೀತಿಯನ್ನು ಎದುರಿಸುತ್ತಿವೆ.

ಶೃಂಗೇರಿ ದೇವಸ್ಥಾನ ಬಳಿಯ ತುಂಗಾ ನದಿಯ ನೀರಿನ ಹರಿವು ಹೆಚ್ಚಳವಾಗಿ ಪಟ್ಟಣದ ಗಾಂಧಿ ಮೈದಾನ ಜಲಾವೃತಗೊಂಡಿದೆ. ಮಳೆಯ ಹೊಡೆತಕ್ಕೆ ಹಲವು ಪ್ರದೇಶಗಳಲ್ಲಿ ಮರಗಳು ಧರೆಗೆ ಉರುಳಿವೆ. ಎಡಬಿಡದೆ ಸುರಿಯುತ್ತಿ ರುವ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.