ಮನಿಲಾ, ಡಿ 29 – ಫಿಲಿಪೈನ್ಸ್ ದೇಶದ ಕೆಲವು ಭಾಗಗಳಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಮನೆಗಳು, ವಾಹನಗಳು ಧ್ವಂಸಗೊಂಡಿದ್ದು ದುರಂತದಲ್ಲಿ 32 ಮಂದಿ ಸಾವನ್ನಪ್ಪಿದ್ದಾರೆ ಮತ್ತು 24 ಮಂದಿ ಕಾಣೆಯಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಸಂಸ್ಥೆ ತಿಳಿಸಿದೆ.
ಪೂರ್ವ, ಮಧ್ಯ ಮತ್ತು ದಕ್ಷಿಣ ಫಿಲಿಪೈನ್ಸ್ನಲ್ಲಿ ಹವಾಮಾನ ವೈಪರಿತ್ಯದಿಂದ ಸುಮಾರು 56 ಸಾವಿರಕ್ಕೂ ಹೆಚ್ಚು ಜನರು ತುರ್ತು ಆಶ್ರಯದಲ್ಲಿದ್ದಾರೆ. ಮಿಸಾಮಿಸ್ ಆಕ್ಸಿಡೆಂಟಲ್ನ ದಕ್ಷಿಣ ಪ್ರಾಂತ್ಯದ ಪರಿಸ್ಥತಿ ಬೀಕರವಾಗಿದೆ.
ಕರಾವಳಿ ಕಾವಲು ಪಡೆ ರಕ್ಷಕರು ಹಗ್ಗವನ್ನು ಬಳಸಿ ಕೆಲವು ಜನರನ್ನು ರಕ್ಷಿಸಿದ್ದಾರೆ. ದುರಂತದಲ್ಲಿ ಇದುವರೆಗೆ 32 ಬಲಿಯಾಗಿದ್ದಾರೆ. ನೀರಿನಲ್ಲಿ ಮುಳುಗಿ ಹೆಚ್ಚಿನ ಸಾವುಗಳು ಸಂಭವಿಸಿದ್ದು, ದೋಣಿಗಳು ಮುಳುಗಿ ಮೀನುಗಾರರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ 18.80 ಲಕ್ಷ ವಸತಿ ರಹಿತರು
ರಸ್ತೆಗಳು , ಸೇತುವೆಗಳ ಜೊತೆಗೆ 4,000 ಕ್ಕೂ ಹೆಚ್ಚು ಮನೆಗಳು ಪ್ರವಾಹದಿಂದ ಹಾನಿಗೊಂಡಿದೆ ಪ್ರವಾಹದಿಂದ ಪೀಡಿತವಾಗಿರುವ ಕೆಲವು ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಮತ್ತೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿಲಾಗಿದ್ದು ಒಟ್ಟಾರೆ ಫಿಲಿಪೈನ್ಸ್ನಲ್ಲಿ ಜಲಪ್ರಳಯಕ್ಕೆ ಜನರು ಕಂಗಾಲಾಗಿದ್ದಾರೆ.
#Rain, #floods, #Philippines, #32dead, missing,