ಬೆಂಗಳೂರಲ್ಲಿ ಜಿಟಿಜಿಟಿ ಮಳೆ, ಶೀತಗಾಳಿ

Social Share

ಬೆಂಗಳೂರು, ನ.11- ಉದ್ಯಾನ ನಗರಿ ಬೆಂಗಳೂರಿನಲ್ಲಿ ಶುಕ್ರವಾರ ದಿನವಿಡೀ ಸೂರ್ಯನ ದರ್ಶನವಾಗದೆ, ಮಬ್ಬು ಆವರಿಸಿಕೊಂಡಿತ್ತು.ಇದರ ನಡುವೆ ಅಲಲ್ಲಿ ಜಿಟಿ ಜಿಟಿ ಮಳೆಯೂ ಬಿತ್ತು. ಬೆಳಗಿನ ಜಾವ ಚುಮು ಚುಮು ಚಳಿಯ ಅನುಭವ ವಾದರೆ, ಮಧ್ಯಾಹ್ನ ಸ್ವಲ್ಪ ತಗ್ಗಿದರೂ ಬಿಸಿಲು ಬೀಳಲಿಲ್ಲ. ಶೀತಗಾಳಿ ಬೀಸುತ್ತಿತ್ತು.

ಚಳಿಯಿಂದ ರಕ್ಷಿಸಿಕೊಳ್ಳಲು ಜನರು ಜಾಕೇಟ್, ಸ್ವೇಟರ್ ಮೊರೆ ಹೋಗಿರುವುದು ಕಂಡುಬಂತು. ತಂಪು ಆವರಿಸಿದ್ದರಿಂದ ವಯೋವೃದ್ಧರು, ಅನಾರೋಗ್ಯ ದಿಂದ ಬಳಲುವವರು ಮತ್ತಷ್ಟು ಸಂಕಷ್ಟ ಅನುಭವಿಸುವಂತಾಯಿತು. ಮಳೆ ಸುರಿಯುವ ರೀತಿಯಲ್ಲೇ ಬೆಳಿಗ್ಗೆಯಿಂದ ಮೋಡಕವಿದ ವಾತಾವರಣ ಮುಂದುವರಿದಿತ್ತು.

ಇಲ್ಲಿನ ಆರ್‍ಟಿ ನಗರ, ಹೆಬ್ಬಾಳ, ಸಂಜಯನಗರ, ಸದಾಶಿವನಗರ, ಮಲ್ಲೇಶ್ವರಂ ಸೇರಿದಂತೆ ಹಲವು ಕಡೆ ಕೆಲಹೊತ್ತು ತುಂತುರು ಮಳೆಯಾಯಿತು. ನಾಲ್ಕು ದಿನ ಮಳೆ: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪರಿಣಾಮ ರಾಜ್ಯದಲ್ಲಿ ಮತ್ತೆ ಮಳೆ ಆರಂಭವಾಗಿದ್ದು,ಇನ್ನೂ ನಾಲ್ಕು ದಿನಗಳ ಕಾಲ ರಾಜ್ಯಲ್ಲಿ ಮಳೆ ಮುಂದುವರೆಯಲಿದೆ.

ಕುಲ ಕುಲವೆಂದು ಹೊಡೆದಾಡದಿರಿ : ಮೋದಿ ಭಾಷಣದ ಹೈಲೈಟ್ಸ್

ಕಳೆದ ನಾಲ್ಕೈದು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಇಂದು ಬೆಳಗ್ಗೆಯಿಂದ ಮತ್ತೆ ಶುರುವಾಗಿದೆ. ನಿನ್ನೆಯಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಇಂದು ಬೆಳಿಗ್ಗೆಯಿಂದಲೇ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ತುಂತುರು ಮಳೆ ಆರಂಭವಾಗಿತ್ತು.

ಸಂಜೆಯ ವೇಳೆಗೆ ಸಾಧಾರಣ ಮಳೆಯಾಗುವ ಮುನ್ಸೂಚನೆಗಳು ಇದ್ದು, ಕೆಲವೆಡೆ ಜಿಟಿ ಜಿಟಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಮೋಡ ಮುಸುಕಿದ ವಾತಾವರಣವಿದ್ದು, ಆಗಾಗ್ಗೆ ಕೆಲವೆಡೆ ಹಗುರ ಇಲ್ಲವೆ, ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.

ಕೆಂಪೇಗೌಡರ ಚಿಂತನೆಯಂತೆಯೇ ಬೆಂಗಳೂರು ನಗರ ನಿರ್ಮಾಣ : ಸಿಎಂ

ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ದಕ್ಷಣ ಭಾಗದ ಹಾಗೂ ಪೂರ್ವಭಾಗದ ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ಮಳೆಯಾಗುವ ಸೂಚನೆಗಳಿವೆ ಎಂದು ಹೇಳಿದ್ದಾರೆ.

Articles You Might Like

Share This Article