ಭಾರಿ ಮಳೆ ಹಿನ್ನೆಲೆಯಲ್ಲಿ ಚೆನ್ನೈ- ಬೆಂಗಳೂರು ನಡುವೆ ರೈಲು ಸಂಚಾರ ರದ್ದು

ಚೆನ್ನೈ,ಅ.16- ತಮಿಳುನಾಡಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಚೆನ್ನೈನಿಂದ ಬೆಂಗಳೂರಿಗೆ ಸಂಚರಿಸುವ ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡಿನ ಕೆಲವು ಕಡೆ ಭಾರೀ ಮಳೆ ಸುರಿಯುತ್ತಿದೆ. ಕಳೆದ ಎರಡು ದಿನಗಳಿಂದ ಚೆನ್ನೈನಲ್ಲಿ ಬಿಟ್ಟುಬಿಡದೇ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇದರಿಂದಾಗಿ ಭಾರತೀಯ ಹವಾಮಾನ ಇಲಾಖೆ ತಮಿಳುನಾಡು ರಾಜ್ಯಾದ್ಯಂತ ಹೆಚ್ಚು ಮಳೆಯಾಗುವ ಮೂನ್ಸುಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ತ್ರೀವ ಮಳೆಯ ಪರಿಣಾಮ ರೈಲ್ವೆ ಇಲಾಖೆ ಇಂದು ಚೆನ್ನೈನಿಂದ ಬೆಂಗಳೂರು ಹಾಗೂ ಮೈಸೂರಿಗೆ ಸಂಚರಿಸುವ ಕೆಲವು ರೈಲುಗಳನ್ನು … Continue reading ಭಾರಿ ಮಳೆ ಹಿನ್ನೆಲೆಯಲ್ಲಿ ಚೆನ್ನೈ- ಬೆಂಗಳೂರು ನಡುವೆ ರೈಲು ಸಂಚಾರ ರದ್ದು