ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಳ್ಳದಿದ್ದರೆ 4 ಪಟ್ಟುದಂಡ

Social Share

ಬೆಳಗಾವಿ,ಡಿ.29-ರಾಜಧಾನಿ ಬೆಂಗಳೂರಿನಲ್ಲಿ ಕಟ್ಟಡ ಮಾಲೀಕರು ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೆ ಮಾಡಿಕೊಳ್ಳದಿದ್ದರೆ, ಮೂರು ತಿಂಗಳ ನಂತರ ನಾಲ್ಕು ರಷ್ಟು ಪ್ರಮಾಣದಲ್ಲಿ ದಂಡ ಕಟ್ಟಡಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ಪರಿಷತ್ತಿನ ಪ್ರಶ್ನೋತ್ತರ ಕಲಾಪ ವೇಳೆ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರು ಜಲಮಂಡಳಿ ನಿಯದ ಅನ್ವಯ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳದೆ ಇರುವ ಕಟ್ಟಡಗಳಿಗೆ ಅದರಲ್ಲೂ ವಾಸದ ಮನೆಗಳಿಗೆ ಮೊದಲ ಮೂರು ತಿಂಗಳು ಶೇಕಡ 50ರಷ್ಟು, ಆನಂತರ 100ರಷ್ಟು ದಂಡ ವಿಧಿಸಲಾಗುವುದು.

7 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶ ಕಂದಾಯ ವ್ಯಾಪ್ತಿಗೆ

ವಾಸ ಇಲ್ಲದೆ ವಾಣಿಜ್ಯ ಸೇರಿದಂತೆ ಇನ್ನಿತರೆ ಕಟ್ಟಡಗಳಿಗೆ ಮೂರು ತಿಂಗಳಿಗೆ ಶೇ.100ರಷ್ಟು, ನಂತರ 200ರಷ್ಟು ಹೆಚ್ಚುವರಿಯಾಗಿ ದಂಡವನ್ನು ವಿಧಿಸಲಾಗುವುದು ಎಂದರು.

ಅಂತರ್ಜಲ ನಿರ್ದೇಶನಾಲಯದ ವತಿಯಿಂದ ಅಂತರ್ಜಲ ಅಭಿವೃದ್ಧಿ ಸದ್ಬಳಕೆ ಮತ್ತು ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ತಾಲ್ಲೂಕು ಹಾಗೂ ಶಾಲಾ ಕಾಲೇಜುಗಳಲ್ಲಿ ಜನ ಜಾಗೃತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

rain water, harvesting, system, Bangalore, building,

Articles You Might Like

Share This Article