ಬೆಂಗಳೂರು,ಸೆ.29- ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕಪ್ಪು, ಬೂದು ಪ್ರದೇಶಗಳು ಕಡಿಮೆಯಾಗಿವೆ. ಅಂತರ್ಜಲ ಸಾಕಷ್ಟು ಹೆಚ್ಚಳವಾಗಿರುವುದರಿಂದ ನೀರಿನಲ್ಲಿದ್ದ ಅಪಾಯಕಾರಿ ರಾಸಾಯನಿಕ ಅಂಶಗಳು ಕಡಿಮೆಯಾಗಿವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಕಪ್ಪು ಮತ್ತು ಬೂದು ಪ್ರದೇಶದ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಸುರಕ್ಷಿತ ಹಾಗೂ ಶುದ್ದ ಕುಡಿಯುವ ನೀರು ಲಭ್ಯವಾಗುತ್ತಿದೆ. ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗಿ ಜಲಾಶಯಗಳು, ಕೆರೆಕಟ್ಟೆಗಳು ತುಂಬಿದ್ದು, ಅಂತರ್ಜಲದ ಪ್ರಮಾಣವು ಸಾಕಷ್ಟು ಹೆಚ್ಚಳವಾಗಿದೆ. ಇದರಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುವ ಅಗತ್ಯ ಕಂಡುಬರುತ್ತಿಲ್ಲ ಎಂದು ಹೇಳಿದರು.
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒಂದು ಸಾವಿರ ಕೋಟಿ ಅನುದಾನ ಒದಗಿಸಲಾಗಿದ್ದು, ಈ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆ ಹಂತದಲ್ಲಿದೆ. ನ್ಯಾಯಾಲಯದಿಂದ ಹಸಿರುನಿಶಾನೆ ದೊರೆತ ಕೂಡಲೆ ಯೋಜನೆ ಪ್ರಾರಂಭಿಸಲಾಗುವುದು ಎಂದರು.
ರಾಜ್ಯದಲ್ಲಿ 18,520 ಕೋಟಿ ರೂ. ವೆಚ್ಚದಲ್ಲಿ 4,639 ಕೆರೆ ತುಂಬಿಸುವ ಹಾಗೂ ಅಭಿವೃದ್ಧಿಪಡಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ 11 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. 70 ಸ್ಕೀಮ್‍ನಲ್ಲಿ 1298 ಕೆರೆಗಳು ಭರ್ತಿಯಾಗಿದ್ದು, 3751 ಕೋಟಿ ರೂ. ಖರ್ಚಾಗಿದೆ. 76 ಸ್ಕೀಮ್‍ನಲ್ಲಿ 3,204 ಕೆರೆಗಳ ನೀರು ತುಂಬಿಸುವ ಯೋಜನೆಯನ್ನು, 13580 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ 7,247 ಕೋಟಿ ರೂ. ಖರ್ಚಾಗಿದೆ ಎಂದು ವಿವರಿಸಿದರು.
ಇತ್ತೀಚೆಗೆ ಬಿದ್ದ ಮಳೆಯಿಂದ ಹಾನಿಗೀಡಾದ ಕೆರೆಗಳ ದುರಸ್ತಿಗೆ ಕಾವೇರಿ ನೀರಾವರಿ ನಿಗಮದ ಮೂಲಕ 50 ಕೋಟಿ ರೂ. ನೀಡಲಾಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿ 66 ಲಕ್ಷ ಹೆಕ್ಟೇರ್ ನೀರಾವರಿಗೆ ಅವಕಾಶವಿದೆ. ಭಾರೀ ನೀರಾವರಿ ಇಲಾಖೆ ಮೂಲಕ 40 ಲಕ್ಷ ಹೆಕ್ಟೇರ್‍ಗೆ ನೀರಾವರಿ ಕಲ್ಪಿಸುವ ಅವಕಾಶವಿದ್ದು, ಈಗಾಗಲೇ 28 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಇನ್ನು 12 ಲಕ್ಷ ಹೆಕ್ಟೇರ್‍ಗೆ ಸೌಲಭ್ಯ ಕಲ್ಪಿಸಬೇಕಿದೆ ಎಂದರು.
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 10 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಅವಕಾಶವಿದ್ದು, ಈಗ 7 ಲಕ್ಷ ಹೆಕ್ಟೇರ್‍ನಷ್ಟು ಆಗಿರಬಹುದು. ಇನ್ನು 3 ಲಕ್ಷ ಹೆಕ್ಟೇರ್‍ನಷ್ಟು ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಬಾಕಿ ಇರಬಹುದು. ಬಾವಿ, ಕೊಳವೆಬಾವಿ, ಹಳ್ಳ, ಕಟ್ಟೆ ಮೊದಲಾದ ಜಲ ಮೂಲಗಳ ಮೂಲಕ ರೈತರೇ 16 ಲಕ್ಷ ಹೆಕ್ಟೇರ್‍ನಷ್ಟು ಜಮೀನನ್ನು ನೀರಾವರಿಗೆ ಒಳಪಡಿಸಿದ್ದಾರೆ ಎಂದು ವಿವರಣೆ ನೀಡಿದರು.
ಕೃಷ್ಣ ನ್ಯಾಯಾೀಧಿಕರಣ 2ರಲ್ಲಿ 20 ಹಳ್ಳಿಗಳು ಮುಳುಗಡೆಯಾಗಲಿದ್ದು, 20 ಗ್ರಾಮಗಳ ಪುನರ್ವಸತಿ ಪುನನಿರ್ಮಾಣ ಮಾಡಬೇಕಿದೆ. ಇದಕ್ಕಾಗಿ 1.34 ಲಕ್ಷ ಹೆಕ್ಟೇರ್ ಭೂ ಸ್ವಾೀನ ಮಾಡಬೇಕಿದೆ. ಇದು ಸೇರಿದಂತೆ 130 ಟಿಎಂಸಿ ಅಡಿ ನೀರು 60 ಸಾವಿರ ಕೋಟಿ ರೂ. ಬೇಕಾಗಬಹುದು ಎಂದು ಹೇಳಿದರು.