ರಾಜಾಜಿನಗರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಮಾರಾಮಾರಿ

Social Share

ಬೆಂಗಳೂರು,ಡಿ.31- ರಾಜಾಜೀನಗರ ಕಾಂಗ್ರೆಸ್ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಬಣಗಳ ನಡುವೆ ಮಾರಾಮಾರಿ ನಡೆದಿದ್ದು, ಕೆಲ ಕಾಲ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು.

ಮುಂದಿನ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ಹಲವು ನಾಯಕರ ನೇತೃತ್ವದಲ್ಲಿ ಸಮಿತಿಗಳನ್ನು ರಚನೆ ಮಾಡಿದೆ. ಆ ಸಮಿತಿಗಳು ಸಭೆ ನಡೆಸಿ ನಾಳೆಯೊಳಗೆ ಪ್ರತಿಕ್ಷೇತ್ರಕ್ಕೆ ಮೂವರು ಪ್ರಬಲ ಆಕಾಂಕ್ಷಿಗಳ ಹೆಸರನ್ನು ಸೂಚಿಸಬೇಕಿದೆ. ಅದರ ಪ್ರಕಾರ ಬೆಂಗಳೂರು ನಗರದ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸರಣಿ ಸಭೆಗಳು ನಡೆಯುತ್ತಿವೆ.

ಇಂದು ರಾಜಾಜೀನಗರ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚಿಸಲು ಕೆಪಿಸಿಸಿ ಕಚೇರಿಯಲ್ಲಿ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಕೃಷ್ಣಮೂರ್ತಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ನಾವು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಆದರೂ ಪಕ್ಷದ ಅಭ್ಯರ್ಥಿಗಳು ಸೋಲು ಕಂಡರು.

BREAKING : 42 ಐಎಎಸ್ ಅಧಿಕಾರಿಗಳ ವರ್ಗಾವಣೆ

ಚುನಾವಣೆ ವೇಳೆ ಕಾಂಗ್ರೆಸ್ ಕಾರ್ಯಕರ್ತರಿಗಿಂತಲೂ ಬಿಜೆಪಿಯವರಿಗೆ ಹೆಚ್ಚಿನ ಬೆಂಬಲ ನೀಡಲಾಯಿತು, ಇದು ಪಕ್ಷದ ಸೋಲಿಗೆ ಕಾರಣವಾಯಿತು. ಈ ಮೊದಲಿನ ಬಿಬಿಎಂಪಿ ಚುನಾವಣೆಯಲ್ಲೂ ನಮ್ಮ ಪಕ್ಷದ ಕೆಲವು ನಾಯಕರು ಬೆಜೆಪಿಯವರ ಗೆಲುವಿಗೆ ಸಹಕರಿಸಿದರು ಎಂದು ಆಕ್ಷೇಪಿಸಿದರು.

ಈ ಹಂತದಲ್ಲಿ ಕಳೆದ ಚುನಾವಣೆಯ ಅಭ್ಯರ್ಥಿ ಪದ್ಮಾವತಿ ಬೆಂಬಲಿಗರು ಆಕ್ಷೇಪ ವ್ಯಕ್ತ ಪಡಿಸಿದರು. ಇದರಿಂದ ಸಭೆಯಲ್ಲಿ ಏಕಾಏಕಿ ಕಾವೇರಿದ ವಾತಾವರಣ ನಿರ್ಮಾಣವಾಯಿತು. ತಳ್ಳಾಟ ನೂಕಾಟ ಜೋರಾಯಿತು. ಪರಸ್ಪರ ಹಲ್ಲೆ ಮಾಡಲು ಕಾರ್ಯಕರ್ತರು ಮುಂದಾದರು. ಹಲವು ಬಣಗಳ ನಡುವೆ ಗಲಾಟೆ ನಡೆದು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಕೋವಿಡ್ ವಾಸ್ತವ ದತ್ತಾಂಶ ಹಂಚಿಕೊಳ್ಳಲು ಚೀನಾಗೆ ವಿಶ್ವಸಂಸ್ಥೆ ಸೂಚನೆ

ಆವರೆಗೂ ಸಭೆಯಲ್ಲಿ ಹಾಜರಿದ್ದ ರಾಮಲಿಂಗಾ ರೆಡ್ಡಿ ಅವರು ದೂರವಾಣಿ ಕರೆ ಸ್ವೀಕರಿಸಿ ಸ್ವಲ್ಪ ಕಾಲ ಹೊರ ನಡೆದಿದ್ದರು. ಈ ಸಮಯದಲ್ಲಿ ಗಲಾಟೆ ನಡೆದಿತ್ತು. ತಕ್ಷಣವೇ ಒಳಗೆ ಬಂದ ರಾಮಲಿಂಗಾ ರೆಡ್ಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ನಂತರ ಸಭೆ ಎಂದಿನಂತೆ ಮುಂದುವರೆಯಿತು. ಈ ನಡುವೆ ಕಾಂಗ್ರೆಸ್ ಕಾರ್ಯಕರ್ತರು ಮಾಧ್ಯಮದವರ ಮೇಲೂ ಹಲ್ಲೆ ಯತ್ನಿಸಿದ ಕಹಿ ಪ್ರಸಂಗ ನಡೆದಿದೆ.

Articles You Might Like

Share This Article